For the best experience, open
https://m.newskannada.com
on your mobile browser.
Advertisement

ತನ್ನದೇ ಮಗುವಿನ ಶವ ಸೂಟ್ ಕೇಸ್​ನಲ್ಲಿ ರವಾನಿಸುತ್ತಿದ್ದ ಸ್ಟಾರ್ಟ್ ಅಪ್ ಫೌಂಡರ್ ನ ಬಂಧನ

ತನ್ನದೇ ಮಗುವನ್ನ ಹತ್ಯೆ ಮಾಡಿ ಸೂಟ್​ಕೇಸ್​​ನಲ್ಲಿ ಸಾಗಿಸಿದ ಆರೋಪದ ಮೇಲೆ ಸ್ಟಾರ್ಟ್​​ ಅಪ್ ಕಂಪನಿ ಮೈಂಡ್​ಫುಲ್​ ಎಐ ಲ್ಯಾಪ್​​ ಫೌಂಡರ್​​ ಮತ್ತು ಸಿಇಓ ಸುಚನ ಸೇಠ್​​ ಅವರನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಐಮಂಗಲ ಪೊಲೀಸರು ಅರೆಸ್ಟ್​ ಮಾಡಿದ್ದಾರೆ.
12:04 PM Jan 09, 2024 IST | Ashitha S
ತನ್ನದೇ ಮಗುವಿನ ಶವ ಸೂಟ್ ಕೇಸ್​ನಲ್ಲಿ ರವಾನಿಸುತ್ತಿದ್ದ ಸ್ಟಾರ್ಟ್ ಅಪ್ ಫೌಂಡರ್ ನ  ಬಂಧನ

ಚಿತ್ರದುರ್ಗ: ತನ್ನದೇ ಮಗುವನ್ನ ಹತ್ಯೆ ಮಾಡಿ ಸೂಟ್​ಕೇಸ್​​ನಲ್ಲಿ ಸಾಗಿಸಿದ ಆರೋಪದ ಮೇಲೆ ಸ್ಟಾರ್ಟ್​​ ಅಪ್ ಕಂಪನಿ ಮೈಂಡ್​ಫುಲ್​ ಎಐ ಲ್ಯಾಪ್​​ ಫೌಂಡರ್​​ ಮತ್ತು ಸಿಇಓ ಸುಚನ ಸೇಠ್​​ ಅವರನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಐಮಂಗಲ ಪೊಲೀಸರು ಅರೆಸ್ಟ್​ ಮಾಡಿದ್ದಾರೆ.

Advertisement

ಸುಚನ ಸೇಠ್ ಗೋವಾದ ಹೋಟೆಲ್​ವೊಂದರಲ್ಲಿ ತನ್ನ ಮಗುವಿನೊಂದಿಗೆ ತಂಗಿದ್ದರು. ಬಳಿಕ ಸೂಟ್​ಕೇಸ್​ ಹಿಡಿದುಕೊಂಡು ಬೆಂಗಳೂರಿಗೆ ಹೊರಟಿದ್ದಾರೆ. ಟ್ಯಾಕ್ಸಿ ಹಿಡಿದು ಬೆಂಗಳೂರಿಗೆ ಹೊರಟ ಸಂದರ್ಭದಲ್ಲಿ ಹೋಟೆಲ್​​ ಸಿಬ್ಬಂದಿ ನಿಮ್ಮ ಜೊತೆಗಿದ್ದ ಮಗು ಎಲ್ಲಿ? ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಸುಚನಾ ಸೇಠ್ ಸುಳ್ಳು ಹೇಳಿದ್ದು, ಸಂಬಂಧಿಕರ ಮನೆಗೆ ಕಳುಹಿಸಿದ್ದೇನೆ ಎಂದು ಹೇಳಿದ್ದಾರೆ. ಬಳಿಕ ಟ್ಯಾಕ್ಸಿ ಏರಿ ಬೆಂಗಳೂರನತ್ತ ಬಂದಿದ್ದಾರೆ.

ಹೋಟೆಲ್​ ಸಿಬ್ಬಂದಿಗೆ ಸುಚನ ಸೇಠ್ ಮೇಲೆ ಅನುಮಾನ ಬಂದಿದ್ದು, ಬಳಿಕ ರೂಂ ಸ್ವಚ್ಛಗೊಳಿಸುವ ಸಮಯದಲ್ಲಿ ರಕ್ತದ ಕಲೆಗಳು ಕಾಣಸಿಕ್ಕಿವೆ. ತಕ್ಷಣವೇ ಹೋಟೆಲ್​ನವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Advertisement

ಪೊಲೀಸರಿಗೆ ಈ ವಿಚಾರ ಗೊತ್ತಾದಂತೆ ಹೈವೇನಲ್ಲಿ ಪೊಲೀಸ್​ ಠಾಣೆ ಬಳಿ ಕಾರು ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಅದರಂತೆಯೇ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಐಮಂಗಳ ಠಾಣೆ ಬಳಿ ಕಾರು ಚಾಲಕ ಟ್ಯಾಕ್ಸಿ ನಿಲ್ಲಿಸಿದ್ದು, ಆರೋಪಿ ಸುಚನ ಸೇಠ್​​ನನ್ನು ಬಂಧಿಸಿದ್ದಾರೆ. ಈ ಘಟನೆ ಸಂಬಂಧ ಗೋವಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Tags :
Advertisement