For the best experience, open
https://m.newskannada.com
on your mobile browser.
Advertisement

ಸಿಟಿಲೈಟ್‌ಗಳಿಂದ ಕಾಸ್ಮಿಕ್ ಅದ್ಭುತಗಳವರೆಗೆ; ಸಿಎಫ್‌ಎಎಲ್, ಟಿಎಲ್‌ಸಿ, ಪಿಯುಸಿಯ ಖಗೋಳಸಾಹಸ

ಮಾರ್ಚ್ 9, 2024 ರಂದು ಸಿಎಫ್‌ಎಎಲ್, ಟಿಎಲ್‌ಸಿ, ಪಿಯು ಕಾಲೇಜಿನ ಖಗೋಳಶಾಸ್ತ್ರದ ವಿದ್ಯಾರ್ಥಿಗಳಾದ ನಮಗೆ ಇದೊಂದು ಅವಿಸ್ಮರಣೆಯ ದಿನ. ಈ ದಿನ ನಾವು ಕಡಲತಡಿಯಿಂದ ತುಸು ದೂರವಿರುವ ಪ್ರಶಾಂತ ಸ್ಥಳವಾದ ಹೆಬ್ರಿಗೆ ಪ್ರಯಾಣವನ್ನು ಪ್ರಾರಂಭಿಸಿದೆವು. ಖಗೋಳದ ವಿಸ್ಮಯಗಳನ್ನು ವೀಕ್ಷಿಸಲು ಕಾತುರರಾಗಿದ್ದ ನಾವು, ಮಧ್ಯಾಹ್ನದ ಹೊತ್ತಿಗೆ ನಮ್ಮ ಗಮ್ಯ ಸ್ಥಾನವಾದ 'ಸುಮಾರು 100 ಎಕರೆ ಅಡಿಕೆ ಹಾಗೂ ತೆಂಗಿನ ತೋಟದ ನಡುವೆ, ಜುಳು ಜುಳು ಎಂದು ಹರಿಯುತ್ತಿರುವ ಸೀತಾನದಿಯ ದಡದ ಸಮೀಪದಲ್ಲಿ ಉಪಸ್ಥಿತವಾದುದ್ದೇ ಮೋನಪ್ಪ ಎಸ್ಟೇಟ್”. ಈ ಎಸ್ಟೇಟಿನ ಹತ್ತಿರದ ಸೀತಾನದಿಯ ತಂಪಾದ ನೀರಿನಲ್ಲಿ ತುಸು ಹೊತ್ತು ಆನಂದದಿಂದ ಕಾಲ ಕಳೆದೆವು.
11:44 AM Apr 19, 2024 IST | Ashitha S
ಸಿಟಿಲೈಟ್‌ಗಳಿಂದ ಕಾಸ್ಮಿಕ್ ಅದ್ಭುತಗಳವರೆಗೆ   ಸಿಎಫ್‌ಎಎಲ್  ಟಿಎಲ್‌ಸಿ  ಪಿಯುಸಿಯ ಖಗೋಳಸಾಹಸ

ಮಂಗಳೂರು: ನಕ್ಷತ್ರ ವೀಕ್ಷಣೆ ಕಾರ್ಯಗಾರದಲ್ಲಿ CFAL ವಿದ್ಯಾರ್ಥಿಗಳು ಭಾಗವಹಿಸಿ ಸಮಯ ಕಳೆದರು. ಮಾರ್ಚ್ 9, 2024 ರಂದು ಸಿಎಫ್‌ಎಎಲ್, ಟಿಎಲ್‌ಸಿ, ಪಿಯು ಕಾಲೇಜಿನ ಖಗೋಳಶಾಸ್ತ್ರದ ವಿದ್ಯಾರ್ಥಿಗಳಾದ ನಮಗೆ ಇದೊಂದು ಅವಿಸ್ಮರಣೆಯ ದಿನ. ಈ ದಿನ ನಾವು ಕಡಲತಡಿಯಿಂದ ತುಸು ದೂರವಿರುವ ಪ್ರಶಾಂತ ಸ್ಥಳವಾದ ಹೆಬ್ರಿಗೆ ಪ್ರಯಾಣವನ್ನು ಪ್ರಾರಂಭಿಸಿದೆವು. ಖಗೋಳದ ವಿಸ್ಮಯಗಳನ್ನು ವೀಕ್ಷಿಸಲು ಕಾತುರರಾಗಿದ್ದ ನಾವು, ಮಧ್ಯಾಹ್ನದ ಹೊತ್ತಿಗೆ ನಮ್ಮ ಗಮ್ಯ ಸ್ಥಾನವಾದ "ಸುಮಾರು 100 ಎಕರೆ ಅಡಿಕೆ ಹಾಗೂ ತೆಂಗಿನ ತೋಟದ ನಡುವೆ, ಜುಳು ಜುಳು ಎಂದು ಹರಿಯುತ್ತಿರುವ ಸೀತಾನದಿಯ ದಡದ ಸಮೀಪದಲ್ಲಿ ಉಪಸ್ಥಿತವಾದುದ್ದೇ ಮೋನಪ್ಪ ಎಸ್ಟೇಟ್”. ಈ ಎಸ್ಟೇಟಿನ ಹತ್ತಿರದ ಸೀತಾನದಿಯ ತಂಪಾದ ನೀರಿನಲ್ಲಿ ತುಸು ಹೊತ್ತು ಆನಂದದಿಂದ ಕಾಲ ಕಳೆದೆವು.
Gal

Advertisement

ದಿನಕರನ ನಿರ್ಗಮನದೊಂದಿಗೆ ನಮ್ಮ ನಿಜವಾದ ಸಾಹಸವು ಪ್ರಾರಂಭವಾಯಿತು. ಹೆಬ್ರಿಯು ತನ್ನ ಅಸಾಧಾರಣ Class 2 Bortle Sky ಗುಣಮಟ್ಟಕ್ಕೆ ಹೆಸರುವಾಸಿಯಾಗಿದೆ. ಅಂದರೆ ಕನಿಷ್ಟ ಬೆಳಕಿನ ಮಾಲಿನ್ಯ ಮತ್ತು ಅತ್ಯುತ್ತಮವಾದ ನಕ್ಷತ್ರ ವೀಕ್ಷಣೆ ដក໖. Explore Scientific 16-Inch Mirror Truss Tube, 10-Inch Mirrored Sky Watcher, William Optics Zenith Star, Seestar S50 ដ ಸಿಎಫ್‌ಎಎಲ್‌ನಲ್ಲಿ ಸ್ವರಚಿತವಾದ ದೂರದರ್ಶಕಗಳು ನಮ್ಮ ಅಧ್ಯಯನಕ್ಕೆ ಸೂತ್ರದಾರಿಗಳಾಗಿತ್ತು.

ಭವ್ಯವಾದ ಓರಿಯನ್ ನೆಬ್ಯುಲಾ (M42), ಯುವ ತಾರೆಗಳಿಂದ ತುಂಬಿರುವ ಒಂದು ನಾಕ್ಷತ್ರಿಕ ನರ್ಸರಿ, ನಮ್ಮನ್ನು ಬೆರಗುಗೊಳಿಸಿತು. ಪುರಾತನ ನಕ್ಷತ್ರಗಳು ಮಿನುಗುವ ದಟ್ಟವಾದ ಗೋಳಾಕಾರದ (M13) ಹರ್ಕ್ಯುಲಸ್ ‌ ಕ್ಲಸ್ಟರ್‌ನ್ನು ನಾವು ನೋಡಿ ಆಶ್ವರ್ಯಚಕಿತಗೊಂಡೆವು. ಬೀಹೈವ್ ಕ್ಲಸ್ಟರ್ (M44) ನಮ್ಮ ಗಮನವನ್ನು ಸೆಳೆಯಿತು. ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ (ISS) ಕ್ಷಣಿಕ ನೋಟವನ್ನು ನಾವು ಕಂಡು ಆನಂದಿಸಿದೆವು. ಬೋಡ್ಸ್ ಗ್ಯಾಲಕ್ಸಿ, ಸಿಗಾರ್ ಗ್ಯಾಲಕ್ಸಿ, ಸ್ಟಾರ್‌ಫಿಶ್ ಕ್ಲಸ್ಟರ್ ಹೀಗೆ ಪ್ರತಿಯೊಂದು ಕಾಸ್ಮಿಕ್ ಕತೆಯಲ್ಲಿ ವಿಶಿಷ್ಟವಾದ ಅಧ್ಯಯನವನ್ನು ಅನಾವರಣಗೊಳಿಸಿತು.

Advertisement

Clf

ದೂರದರ್ಶಕದ ಅವಲೋಕನಗಳನ್ನು ಮೀರಿ, ನಮ್ಮ ನಗು ಮತ್ತು ಸೌಹಾರ್ಧತೆಯು ಕ್ಷೀರ ಪಥದಂತೆ ಪ್ರಕಾಶಮಾನವಾಗಿತ್ತು. ಅತ್ಯಾಕರ್ಷಕ ಗುಂಪು ಆಟಗಳಲ್ಲಿ ನಮ್ಮನ್ನು ನಾವು ಸಕ್ರೀಯವಾಗಿ ತೊಡಗಿಸಿಕೊಂಡೆವು. ನಮ್ಮ ಖಗೋಳ ಸಮುದಾಯದೊಳಗಿನ ಬಂಧಗಳನ್ನು ಬಲಪಡಿಸುತ್ತಾ ರಾತ್ರಿಯ ಆಕಾಶದಿಂದ ಬ್ರಹ್ಮಾಂಡದ ಪರಿಶೋಧನೆಯವರೆಗಿನ ಸಂಪೂರ್ಣ ಅನುಭವವು ಅದ್ಭುತವಾಗಿತ್ತು. ಬ್ರಹ್ಮಾಂಡದ ವಿಶಾಲತೆಯ ಬಗ್ಗೆ ಆಳವಾದ ಮೆಚ್ಚುಗೆಯು ಬೆಳೆಯಿತು.

ಮುಂಜಾನೆ 4ರ ಹೊತ್ತಿನಲ್ಲಿ ನಮ್ಮ 'ನಕ್ಷತ್ರ ಬೇಟೆ'ಯು ಅಂತಿಮ ಘಟ್ಟವನ್ನು ತಲುಪಿತ್ತು. ಪ್ರವಾಸದಲ್ಲಿ ನಮ್ಮನ್ನು ನಾವು ಪೂರ್ಣವಾಗಿ
ಅಳವಡಿಸಿಕೊಂಡಿದ್ದರಿಂದ ಸಮಯವು ಬಹಳ ವೇಗವಾಗಿ ಸಾಗಿದಂತೆ ಭಾಸವಾಯಿತು. ನಾವು ನೆನಪುಗಳಿಗಿಂತ ಹೆಚ್ಚಿನದ್ದನ್ನು ನಮ್ಮೊಂದಿಗೆ ಹೊತ್ತು ಸಾಗುತ್ತಿದ್ದೆವು. ವಿವಿಧ ದೂರದರ್ಶಕಗಳನ್ನು ಬಳಸಿಕೊಂಡು ಪ್ರಾಯೋಗಿಕ ಅನುಭವವನ್ನು ಪಡೆದುಕೊಂಡಿದ್ದೇವೆ. ಈ ಪ್ರವಾಸದಿಂದ ನಮಗೆಲ್ಲರಿಗೂ ಹೆಚ್ಚಿನ ಹಾಗೂ ಅಪಾರವಾದ ಜ್ಞಾನವು ಲಭಿಸಿದೆ. ನಮ್ಮ ಹಾಗೂ ನಕ್ಷತ್ರಗಳ ನಂಟು ಇನ್ನಷ್ಟು ಬಲವಾಗಿದೆ. ನಮ್ಮ ಗೌರವಾನ್ವಿತ ಶಿಕ್ಷಕರ ಅವಿರತ ಬೆಂಬಲ ಮತ್ತು ಮೋನಪ್ಪ ಎಸ್ಟೇಟ್ ಉಸ್ತುವಾರಿಗಳ ಕೃಪಾತಿಥ್ಯವಿಲ್ಲದೆ ಹೆಬ್ರಿಗೆ ಈ ಪ್ರವಾಸ ಸಾಧ್ಯವಾಗುತ್ತಿರಲಿಲ್ಲ. ಅವರ ಸಮರ್ಪಣೆ ಮತ್ತು ಸಹಯೋಗವು ಇದನ್ನು ನಿಜವಾದ ಶ್ರೀಮಂತ ಅನುಭವವಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

Advertisement
Tags :
Advertisement