ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

"ಆನಂದ.. ಪರಮಾನಂದ": ಆರ್‌ಸಿಬಿ ಗೆ ಕನ್ನಡದಲ್ಲೇ ಅಭಿನಂದನೆ ಸಲ್ಲಿಸಿದ ಚಹಲ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೊಚ್ಚಲ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್​ನ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 8 ವಿಕೆಟ್​ಗಳಿಂದ ಬಗ್ಗು ಬಡಿದು ಆರ್‌ಸಿಬಿ ಕಿರೀಟ ಮುಡಿಗೇರಿಸಿಕೊಂಡಿದೆ.
10:57 AM Mar 18, 2024 IST | Ashitha S

ದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೊಚ್ಚಲ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್​ನ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 8 ವಿಕೆಟ್​ಗಳಿಂದ ಬಗ್ಗು ಬಡಿದು ಆರ್‌ಸಿಬಿ ಕಿರೀಟ ಮುಡಿಗೇರಿಸಿಕೊಂಡಿದೆ.

Advertisement

ಇತ್ತ ಆರ್​ಸಿಬಿ ತಂಡ ಗೆಲ್ಲುತ್ತಿದ್ದಂತೆ, ಅತ್ತ ಸಂಭ್ರಮಿಸಿದವರಲ್ಲಿ ಯುಜ್ವೇಂದ್ರ ಚಹಲ್ ಕೂಡ ಒಬ್ಬರು. ಆದರೆ ಚಹಲ್ ಅವರದ್ದು ಕೇವಲ ಸಂಭ್ರಮವಾಗಿರಲಿಲ್ಲ. ಅದು ಪರಮಾನಂದವಾಗಿತ್ತು. ಇದನ್ನು ಟೀಮ್ ಇಂಡಿಯಾ ಆಟಗಾರ ಕನ್ನಡದಲ್ಲೇ ತಿಳಿಸಿದ್ದು ವಿಶೇಷ.

ಹೌದು, ಆರ್​ಸಿಬಿ ಚಾಂಪಿಯನ್ ಪಟ್ಟ ಅಲಂಕರಿಸುತ್ತಿದ್ದಂತೆ ಯುಜ್ವೇಂದ್ರ ಚಹಲ್ ತಮ್ಮ ಎಕ್ಸ್ ಖಾತೆಯಲ್ಲಿ ಆರ್‌ಸಿಬಿ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದರು. ಕನ್ನಡದಲ್ಲೇ "ಆನಂದ.. ಪರಮಾನಂದ.... ಪರಮಾನಂದ...." ಎಂದು ಬರೆದುಕೊಳ್ಳುವ ಮೂಲಕ ತಮ್ಮ ಖುಷಿಯನ್ನು ಹಂಚಿಕೊಂಡಿದ್ದರು. ಮಾಜಿ ಆರ್​ಸಿಬಿ ಆಟಗಾರನ ಅಭಿಮಾನಕ್ಕೆ ಅಭಿಮಾನಿಗಳು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

ಯುಜ್ವೇಂದ್ರ ಚಹಲ್ 2014 ರಿಂದ 2021 ರವರೆಗೆ ಆರ್​ಸಿಬಿ ಪರ ಆಡಿದ್ದರು. 7 ಸೀಸನ್​ಗಳಲ್ಲಿ 50 ಪಂದ್ಯಗಳಲ್ಲಿ ಆರ್​ಸಿಬಿ ಪರ ಕಣಕ್ಕಿಳಿದಿದ್ದ ಚಹಲ್ ಒಟ್ಟು 64 ವಿಕೆಟ್ ಪಡೆದಿದ್ದರು.  ಆದರೆ ಐಪಿಎಲ್​ 2022 ರಲ್ಲಿ ಚಹಲ್ ಅವರನ್ನು ಆರ್​ಸಿಬಿ ರಿಲೀಸ್ ಮಾಡಿತ್ತು. ಇದೀಗ ಯುಜ್ವೇಂದ್ರ ಚಹಲ್ ರಾಜಸ್ಥಾನ್ ರಾಯಲ್ಸ್ ತಂಡದ ಭಾಗವಾಗಿದ್ದಾರೆ.

Advertisement
Tags :
indiaLatestNewsNewsKannadaRCBWPL 2024Yuzvendra Chahal
Advertisement
Next Article