For the best experience, open
https://m.newskannada.com
on your mobile browser.
Advertisement

ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಅಧ್ಯಕ್ಷ ಝಾಕಾ ಅಶ್ರಫ್ ರಾಜೀನಾಮೆ

2023ರ ಏಕದಿನ ಏಷ್ಯಾಕಪ್‌  ಹಾಗೂ 2023ರ ಏಕದಿನ ವಿಶ್ವಕಪ್‌ ಟೂರ್ನಿಯ ಕಳಪೆ ಪ್ರದರ್ಶನದಿಂದ ಬೇಸತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಅಧ್ಯಕ್ಷ ಝಾಕಾ ಅಶ್ರಫ್  ರಾಜೀನಾಮೆ ನೀಡಿದ್ದಾರೆ.
12:27 PM Jan 20, 2024 IST | Ashika S
ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಅಧ್ಯಕ್ಷ ಝಾಕಾ ಅಶ್ರಫ್ ರಾಜೀನಾಮೆ

ಇಸ್ಲಾಮಾಬಾದ್‌: 2023ರ ಏಕದಿನ ಏಷ್ಯಾಕಪ್‌  ಹಾಗೂ 2023ರ ಏಕದಿನ ವಿಶ್ವಕಪ್‌ ಟೂರ್ನಿಯ ಕಳಪೆ ಪ್ರದರ್ಶನದಿಂದ ಬೇಸತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಅಧ್ಯಕ್ಷ ಝಾಕಾ ಅಶ್ರಫ್  ರಾಜೀನಾಮೆ ನೀಡಿದ್ದಾರೆ.

Advertisement

ಲಾಹೋರ್‌ನಲ್ಲಿ ನಡೆದ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅಶ್ರಫ್‌, ಇದೇ ಸಂದರ್ಭದಲ್ಲಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ನಿರ್ಧಾರ ಪ್ರಕಟಿಸಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜೀನಾಮೆಗೆ ಕಾರಣವನ್ನೂ ಬಹಿರಂಗಪಡಿಸಿದರು. ನಾನು ಕ್ರಿಕೆಟ್‌ನ ಸುಧಾರಣೆಗಾಗಿ ಕೆಲಸ ಮಾಡುತ್ತಿದ್ದೆ. ಆದ್ರೆ ಈ ರೀತಿ ಕೆಲಸ ಮಾಡಲು ನನಗೆ ಸಾಧ್ಯವಿಲ್ಲ. ಈಗ ಕ್ರಿಕೆಟ್‌ ಮಂಡಳಿ ಮುಖ್ಯಸ್ಥರನ್ನು ಆಯ್ಕೆ ಮಾಡುವ ವಿಚಾರ ಪ್ರಧಾನಿಗಳಿಗೆ ಬಿಟ್ಟದ್ದು, ಅವರು ಯಾರನ್ನ ನಾಮ ನಿರ್ದೇಶನ ಮಾಡುತ್ತಾರೋ ಅವರಿಗೆ ಬಿಟ್ಟದ್ದು ಎಂದು ಹೇಳಿದ್ದಾರೆ.

Advertisement

2023ರಲ್ಲಿ ಭಾರತದ ಆತಿಥ್ಯದಲ್ಲಿ ನಡೆದ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನ ಆರಂಭಿಕ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿತ್ತು. ಆದ್ರೆ 3ನೇ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಸೋತ ಪಾಕಿಸ್ತಾನ ಮತ್ತೆ ನಂತರ ಸೋಲಿನ ಕೆಟ್ಟ ದಾಖಲೆಗಳನ್ನು ಹೆಗಲಿಗೇರಿಸಿಕೊಂಡಿತು.

ಅಧ್ಯಕ್ಷ ಝಾಕಾ ಅಶ್ರಫ್  ರಾಜೀನಾಮೆಯಿಂದ ಪಾಕ್‌ ಕ್ರಿಕೆಟ್‌ ತಂಡಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ.

Advertisement
Tags :
Advertisement