ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿದ ಜಾರ್ಖಂಡ್​ ನೂತನ ಸಿಎಂ

ಜಾರ್ಖಂಡ್‌ನ ನೂತನ ಸಿಎಂ ಚಂಪೈ ಸೊರೆನ್ ಅವರ ಸರ್ಕಾರ ಇಂದು ವಿಧಾನಸಭೆಯಲ್ಲಿ ತನ್ನ ಬಹುಮತವನ್ನು ಸಾಬೀತುಪಡಿಸಿತು.
02:41 PM Feb 05, 2024 IST | Ashitha S

ದೆಹಲಿ:  ಜಾರ್ಖಂಡ್‌ನ ನೂತನ ಸಿಎಂ ಚಂಪೈ ಸೊರೆನ್ ಅವರ ಸರ್ಕಾರ ಇಂದು ವಿಧಾನಸಭೆಯಲ್ಲಿ ತನ್ನ ಬಹುಮತವನ್ನು ಸಾಬೀತುಪಡಿಸಿತು.

Advertisement

81 ಸದಸ್ಯ ಬಲದ ಜಾರ್ಖಂಡ್‌ ವಿಧಾನಸಭೆಯಲ್ಲಿ ಬಹುಮತಕ್ಕೆ ಬೇಕಾದ ಸಂಖ್ಯೆ 41 ಆಗಿತ್ತು. 81 ಸದಸ್ಯ ಬಲದ ಸದನದಲ್ಲಿ ಆಡಳಿತಾರೂಢ ಮೈತ್ರಿಕೂಟವು 47 ಶಾಸಕರನ್ನು ಹೊಂದಿದೆ. ಇಲ್ಲಿ ಬಹುಮತದ ನಂಬರ್‌ 41 ಆಗಿದೆ. ಪ್ರಸ್ತುತ 43 ಶಾಸಕರು ಚಂಪೈ ಸೊರೆನ್ ಅವರನ್ನು ಬೆಂಬಲಿಸುತ್ತಿದ್ದಾರೆ. ಬಿಜೆಪಿ 25 ಶಾಸಕರನ್ನು ಹೊಂದಿದೆ. ಜಾರ್ಖಂಡ್ ವಿಧಾನಸಭೆಯಲ್ಲಿ ಚಂಪೈ ಸೊರೆನ್ 47 ಮತಗಳೊಂದಿಗೆ ವಿಶ್ವಾಸ ಮತ ಗೆದ್ದಿದ್ದಾರೆ.

AJSU ಅಥವಾ ಆಲ್ ಜಾರ್ಖಂಡ್ ವಿದ್ಯಾರ್ಥಿ ಒಕ್ಕೂಟವು ಮೂವರನ್ನು ಹೊಂದಿದೆ. ಎನ್‌ಸಿಪಿ ಮತ್ತು ಎಡಪಕ್ಷಗಳು ತಲಾ ಒಬ್ಬರನ್ನು ಹೊಂದಿದ್ದು, ಮೂವರು ಸ್ವತಂತ್ರ ಶಾಸಕರಿದ್ದಾರೆ. ಮುಂಬರುವ ಸಾರ್ವತ್ರಿಕ ಚುನಾವಣೆಗೆ ಮುನ್ನ ಸರ್ಕಾರವನ್ನು ರಕ್ಷಿಸಲು ಆಡಳಿತಾರೂಢ ಶಾಸಕರನ್ನು ಹೈದರಾಬಾದ್‌ಗೆ ಕಳುಹಿಸಲಾಗಿದೆ. ನಮ್ಮ ಶಾಸಕರು ಒಗ್ಗಟ್ಟಾಗಿದ್ದಾರೆ. ನಮಗೆ 48ರಿಂದ 50 ಶಾಸಕರ ಬೆಂಬಲವಿದೆ ಎಂದು ರಾಜ್ಯ ಸಚಿವ ಅಲಂಗೀರ್ ಆಲಂ ಹೇಳಿದ್ದರು.

Advertisement

ಹೇಮಂತ್ ಸೊರೆನ್ ಅವರು ಸಿಎಂ ಹುದ್ದೆಯಿಂದ ಕೆಳಗಿಳಿದ 24 ಗಂಟೆಗಳ ನಂತರ, ಫೆಬ್ರವರಿ 2ರಂದು ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಅವರು ಕಾಂಗ್ರೆಸ್‌ನ ಅಲಂಗೀರ್ ಆಲಂ ಮತ್ತು ಆರ್‌ಜೆಡಿಯ ಸತ್ಯಾನಂದ್ ಭೋಕ್ತಾ ಅವರೊಂದಿಗೆ ಚಂಪೈ ಸೊರೆನ್ ಅವರಿಗೆ ಪ್ರಮಾಣ ವಚನ ಬೋಧಿಸಿದರು.

Advertisement
Tags :
GOVERNMENTindiaLatestNewsNewsKannadaಚಂಪೈ ಸೊರೆನ್ನವದೆಹಲಿನೂತನ ಸಿಎಂಬೆಂಗಳೂರು
Advertisement
Next Article