ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಚೆನ್ನೈನಲ್ಲಿ ಚಲಿಸಲಿದೆ ಚಾಲಕ ರಹಿತ ರೈಲು; ೧೨ನೇ ಅಂತಸ್ತಿನಲ್ಲಿ ನಿಲ್ದಾಣ

ಮುಂಬರುವ ದಿನಗಳಲ್ಲಿ ಚೆನ್ನೈನ ಮೆಟ್ರೋ ರೈಲು ೧೨ ಅಂತಸ್ತಿನ ಕಟ್ಟಡದ ಮುಖಾಂತರ ಸಂಚರಿಸಲಿದ್ದು, ಮೂರನೇ ಮಹಡಿಯಲ್ಲಿ ನಿಲ್ದಾಣಗಳು ಹಾಗು ಉಳಿದ ಕಡೆ ವಾಣಿಜ್ಯ ಮತ್ತು ಉಳಿದ ಕಚೇರಿಗಳು ಇರಲಿವೆ ಎಂದು ಸಿಎಂಆರ್​ಎಲ್ ಮಾಹಿತಿ ನೀಡಿದೆ.
09:08 PM Jan 03, 2024 IST | Maithri S

ಚೆನ್ನೈ: ಮುಂಬರುವ ದಿನಗಳಲ್ಲಿ ಚೆನ್ನೈನ ಮೆಟ್ರೋ ರೈಲು ೧೨ ಅಂತಸ್ತಿನ ಕಟ್ಟಡದ ಮುಖಾಂತರ ಸಂಚರಿಸಲಿದ್ದು, ಮೂರನೇ ಮಹಡಿಯಲ್ಲಿ ನಿಲ್ದಾಣಗಳು ಹಾಗು ಉಳಿದ ಕಡೆ ವಾಣಿಜ್ಯ ಮತ್ತು ಉಳಿದ ಕಚೇರಿಗಳು ಇರಲಿವೆ ಎಂದು ಸಿಎಂಆರ್​ಎಲ್ ಮಾಹಿತಿ ನೀಡಿದೆ.

Advertisement

ಚಾಲಕ ರಹಿತ ಮೆಟ್ರೋ ರೈಲುಗಳು ನಗರದ ತಿರುಮಂಗಲಂ, ಕೊಯಂಬೇಡು ಮತ್ತು ತಿರುಮಾಯಿಲೈನಲ್ಲಿ 12 ಅಂತಸ್ತಿನ ಕಟ್ಟಡದ ಮೂಲಕ ಹಾದು ಹೋಗಲಿವೆ. ಚೆನ್ನೈ ಮೆಟ್ರೋ ರೈಲ್ ಲಿಮಿಟೆಡ್ ಮುಂಬರುವ ಎರಡನೇ ಹಂತ ಮೆಟ್ರೋದಲ್ಲಿ 3 ಸ್ಥಳಗಳಲ್ಲಿ ಸಾರಿಗೆ ಆಧಾರಿತ ಅಭಿವೃದ್ಧಿಗೆ ಯೋಜಿಸಿದೆ.
ತಿರುಮಂಗಲಂನಲ್ಲಿ 12 ಅಂತಸ್ತಿನ ಕಟ್ಟಡ ನಿರ್ಮಾಣ ಹಂತದಲ್ಲಿದೆ. ಮೆಟ್ರೋ ಯೋಜನೆಯ ಎರಡನೇ ಹಂತದ ಕಾಮಗಾರಿ ಭರದಿಂದ ಸಾಗುತ್ತಿದೆ.

ಎರಡನೇ ಹಂತದ ಮೆಟ್ರೋ ಯೋಜನೆಯು ಮಾಧವರಂ-ಸಿರುಚೆರಿ, ಪೂನಮಲ್ಲೆ-ವಿವೇಕಾನಂದ ಇಲ್ಲಂ, ಮತ್ತು ಮಾಧವರಂನಿಂದ ಶೋಲಿಂಗನಲ್ಲೂರು ಎಂಬ ಮೂರು ಮಾರ್ಗಗಳನ್ನೊಳಗೊಂಡಿದ್ದು 119 ಕಿ.ಮೀ ದೂರ ಕ್ರಮಿಸಲಿದೆ. ಇದರ ವೆಚ್ಚ 69,000 ಕೋಟಿ ರೂ.ಗಳಾಗಿದೆ.

Advertisement

Advertisement
Tags :
CHENNAIindiaLatestNewsMETRONewsKannada
Advertisement
Next Article