ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ನೀರಿನ ಅಭಾವ; ಚಿಕನ್ ಪ್ರಿಯರಿಗೆ ಶಾಕಿಂಗ್ ನ್ಯೂಸ್

ಬರಗಾಲ, ತಾಪಮಾನ ಹೆಚ್ಚಳ, ನೀರಿನ ಅಭಾವ, ಉತ್ಪಾದನೆ ಕುಂಠಿತ ಮತ್ತು ಪೂರೈಕೆಯಲ್ಲಿ ವ್ಯತ್ಯಯದ ಕಾರಣದಿಂದ ಕೋಳಿ ಮಾರಾಟ ದರ ಹೆಚ್ಚಳವಾಗಿದೆ. ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ ಅಧ್ಯಕ್ಷ ಕೆ.ಎನ್. ನಾಗರಾಜು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
09:57 AM Apr 07, 2024 IST | Ashitha S

ಬೆಂಗಳೂರು: ಬರಗಾಲ, ತಾಪಮಾನ ಹೆಚ್ಚಳ, ನೀರಿನ ಅಭಾವ, ಉತ್ಪಾದನೆ ಕುಂಠಿತ ಮತ್ತು ಪೂರೈಕೆಯಲ್ಲಿ ವ್ಯತ್ಯಯದ ಕಾರಣದಿಂದ ಕೋಳಿ ಮಾರಾಟ ದರ ಹೆಚ್ಚಳವಾಗಿದೆ. ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ ಅಧ್ಯಕ್ಷ ಕೆ.ಎನ್. ನಾಗರಾಜು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

Advertisement

ತಾಪಮಾನ ಹೆಚ್ಚಳ, ನೀರಿನ ಅಭಾವದ ಕಾರಣ ಕೋಳಿ ಸಾಕಾಣಿಕೆಗೆ ಹಿನ್ನಡೆಯಾಗಿದ್ದು, ಉತ್ಪಾದನೆ ಕುಂಠಿತವಾಗಿದೆ.

ಯುಗಾದಿ, ರಂಜಾನ್, ಮಾರಿ ಹಬ್ಬ, ಜಾತ್ರೆಗಳು, ಊರ ಹಬ್ಬಗಳು ಇರುವುದರಿಂದ ಕೋಳಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಕೋಳಿ ಸಾಕಾಣಿಕೆ ಕಂಪನಿಗಳು ಸಾಮಾನ್ಯ ದರಕ್ಕಿಂತ ಹೆಚ್ಚಿನ ದರದಲ್ಲಿ ಕೋಳಿಗಳನ್ನು ಮಾರಾಟ ಮಾಡುತ್ತಿವೆ.

Advertisement

ಈ ಹಿಂದೆ ಪ್ರತಿ ಕೆಜಿ ಜೀವಂತ ಕೋಳಿಗೆ 170 ರೂ.ವರೆಗೆ ದರ ಇತ್ತು. ಅದು 220 ರೂ.ಗೆ ತಲುಪಿದೆ.

Advertisement
Tags :
bengaluruchickenGOVERNMENTindiaKARNATAKARATE
Advertisement
Next Article