ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಕಮಾಂಡ್ ಸೆಂಟರ್ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

 ಮಹಿಳೆಯರು ಮಕ್ಕಳ ಸುರಕ್ಷತೆಗಾಗಿ ದೇಶದಲ್ಲಿ ಮೊದಲ ಬಾರಿಗೆ ಸೇಫ್ ಸಿಟಿ ಯೋಜನೆಯಡಿ ಸುಸಜ್ಜಿತ ಬಹುಮಹಡಿ ಕಮಾಂಡ್ ಸೆಂಟರ್  ನಿರ್ಮಾಣವಾಗಿದ್ದು, ನೂತನ ಕಟ್ಟಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟನೆ ಮಾಡಿದರು.
02:24 PM Nov 24, 2023 IST | Ashika S

ಬೆಂಗಳೂರು: ಮಹಿಳೆಯರು ಮಕ್ಕಳ ಸುರಕ್ಷತೆಗಾಗಿ ದೇಶದಲ್ಲಿ ಮೊದಲ ಬಾರಿಗೆ ಸೇಫ್ ಸಿಟಿ ಯೋಜನೆಯಡಿ ಸುಸಜ್ಜಿತ ಬಹುಮಹಡಿ ಕಮಾಂಡ್ ಸೆಂಟರ್  ನಿರ್ಮಾಣವಾಗಿದ್ದು, ನೂತನ ಕಟ್ಟಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟನೆ ಮಾಡಿದರು.

Advertisement

ಕಟ್ಟಡ ಉದ್ಘಾಟನೆ ಬಳಿಕ ಮಾತನಾಡಿದ ಸಿಎಂ, ಮಾಂಡ್ ಸೆಂಟರ್ ಬೆಂಗಳೂರು ಜನರಿಗೆ ಸುರಕ್ಷತೆ ಒದಗಿಸುತ್ತೆ, ಮಹಿಳೆಯರು ಮಕ್ಕಳಿಗೆ ಸಹಾಯವಾಗುತ್ತದೆ. ನೇರವಾಗಿ ಕರೆ ಮಾಡಿದ 7 ನಿಮಿಷದೊಳಗೆ ಪೊಲೀಸರು ಸ್ಥಳಕ್ಕೆ ಬರುತ್ತಾರೆ ಎಂದರು.

ಇದು ನಿರ್ಭಯ ಯೋಜನೆ ಅಡಿಯಲ್ಲಿ ಸೇಫ್ ಸಿಟಿ ಯೋಜನೆಯಲ್ಲಿ ಕಮಾಂಡ್ ಕಂಟ್ರೋಲ್ ಸೆಂಟರ್ ಮಾಡಲಾಗಿದೆ. ಈ ಯೋಜನೆಗೆ 661.5 ಕೋಟಿ ಆಗಿದೆ. ಕೇಂದ್ರ ಸರ್ಕಾರ 60, ರಾಜ್ಯ ಸರ್ಕಾರ 40 ಪರ್ಸೆಂಟ್ ನೀಡಿದೆ.

Advertisement

ನಿರ್ಭಯಾ ಯೋಜನೆಯಡಿ ಈಗಾಗಲೇ ಬೆಂಗಳೂರು, ಅಹಮದಾಬಾದ್‌, ಚೆನ್ನೈ, ದೆಹಲಿ, ಹೈದರಾಬಾದ್‌, ಕೋಲ್ಕತ್ತಾ, ಲಖನೌ ಹಾಗೂ ಮುಂಬೈ ನಗರಗಳಲ್ಲಿ ಸೇಫ್ ಸಿಟಿ ಯೋಜನೆ ಜಾರಿಯಾಗುತ್ತಿದ್ದು ಈ ಪೈಕಿ ವೇಗವಾಗಿ ಕಮಾಂಡ್ ಸೆಂಟರ್ ನಿರ್ಮಿಸಿ ಅನುಷ್ಠಾನಕ್ಕೆವಾಗುತ್ತಿರುವ ನಗರಗಳ ಪೈಕಿ ಬೆಂಗಳೂರು ಮೊದಲನೆಯದಾಗಿದೆ.

ಸೇಫ್ ಸಿಟಿ ಯೋಜನೆಯಡಿ ವಾಹನ ದಟ್ಟಣೆ ಹಾಗೂ ಜನದಟ್ಟಣೆ ಅಧಿಕವಿರುವ ಜಾಗ ಸೇರಿದಂತೆ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಸ್ಥಳ ಸೇರಿ 3 ಸಾವಿರ ಜಾಗಗಳಲ್ಲಿ ಈಗಾಗಲೇ ಸುಮಾರು 3500 ಸಿಸಿಟಿವಿ ಕ್ಯಾಮರ ಅಳವಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಮಾಂಡ್ ಸೆಂಟರ್ ಅಂದರೆ ಏನು?

ಕಮಾಂಡ್ ಸೆಂಟರ್​ನಲ್ಲಿ ಸಿಬ್ಬಂದಿಗಳು ದಿನದ 24 ಗಂಟೆಗಳು ಕೆಲಸ ಮಾಡುತ್ತಾರೆ.  ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ಮಹಿಳೆಯರ ಮೇಲೆ ಕಿರುಕುಳ, ಅಸಭ್ಯ ವರ್ತನೆ, ಚುಡಾಯಿಸುವುದು, ಕಾನೂನು ಸುವ್ಯವಸ್ಥೆಗೆ ಧಕ್ಕೆ ಸೇರಿದಂತೆ ಕಾನೂನು‌ ಸುವ್ಯವಸ್ಥೆ ಧಕ್ಕೆಯಾಗುವ ಘಟನೆಗಳು ನಡೆದರೆ ಅತ್ಯಾಧುನಿಕ ಸಿಸಿ ಕ್ಯಾಮರಗಳು ವಿಡಿಯೋ ಸೆರೆಹಿಡಿದು ಕೂಡಲೇ ಆಯಾ ಪೊಲೀಸ್ ಠಾಣೆಗಳ ಹೊಯ್ಸಳ ಸಿಬ್ಬಂದಿಗೆ ಮಾಹಿತಿ ರವಾನಿಸಿ ಆರೋಪಿತರನ್ನ ತ್ವರಿತಗತಿಯಲ್ಲಿ ಹಿಡಿಯುವಕೆಲಸ ನಡೆಯಲಿದೆ.

ಪದೇ‌‌ ಪದೇ ಅಪರಾಧ ಕೃತ್ಯವೆಸಗುವ 30 ಸಾವಿರಕ್ಕೂ ಹೆಚ್ಚು ಆರೋಪಿಗಳ ಭಾವಚಿತ್ರಗಳನ್ನ ಸಾಫ್ಟ್ ವೇರ್ ನಲ್ಲಿ ಮಾಹಿತಿ ಸಂಗ್ರಹಿಸಿಡಲಾಗಿದೆ. ಒಂದು ವೇಳೆ ಅಪರಾಧವೆಸಗುವುದು ಕಂಡುಬಂದರೆ ತಂತ್ರಜ್ಞಾನ ನೆರವಿನಿಂದ ಸುಲಭವಾಗಿ ಆಯಾ ವ್ಯಕ್ತಿಯನ್ನ ಗುರುತು ಹಿಡಿಯಬಹುದಾಗಿದೆ.

ಮಹಿಳೆಯರ ಸುರಕ್ಷತೆಗೆ ಬಸ್ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸದ್ಯ 35 ಐಸ್ ಲ್ಯಾಂಡ್ ನಿರ್ಮಿಸಲಾಗಿದ್ದು‌ ಇದರ ಸಂಪರ್ಕವನ್ನ ಕಮಾಂಡ್ ಸೆಂಟರ್ ಗೆ ನೀಡಲಾಗಿದೆ. ಮುಂದಿನ‌ ದಿನಗಳಲ್ಲಿ ಇನ್ನೂ 15 ಸೇಫ್ಟಿ ಐಲ್ಯಾಂಡ್ ಅಳವಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Advertisement
Tags :
LatetsNewsNewsKannadaಕಮಾಂಡ್ ಸೆಂಟರ್ಬಹುಮಹಡಿಮಹಿಳೆಯೋಜನೆಸುರಕ್ಷತೆಸೇಫ್ ಸಿಟಿ
Advertisement
Next Article