For the best experience, open
https://m.newskannada.com
on your mobile browser.
Advertisement

ಚಿಲಿಯಲ್ಲಿ ಭೀಕರ ಬೆಂಕಿ: ರಸ್ತೆಗಳಲ್ಲಿ ಮೃತ ದೇಹಗಳು, ತುರ್ತು ಪರಿಸ್ಥಿತಿ ಘೋಷಣೆ

ಚಿಲಿಯ ಕಾಡುಗಳಲ್ಲಿ ಕಾಣಿಸಿಕೊಂಡಿರುವ ಭಾರಿ ಬೆಂಕಿ ಭೀಕರ ವಿನಾಶಕ್ಕೆ ಕಾರಣವಾಗಿದೆ. ಇದರಿಂದ 99 ಮಂದಿ ಸಾವನ್ನಪ್ಪಿದ್ದು, 1,600ಕ್ಕೂ ಹೆಚ್ಚು ಮನೆಗಳು ಸುಟ್ಟು ಭಸ್ಮವಾಗಿವೆ. ಬೆಂಕಿಯಿಂದಾಗಿ ಅಪಾರ ಸಂಖ್ಯೆಯ ಜನರು ಸುಟ್ಟು ಕರಕಲಾಗಿದ್ದಾರೆ. ಹಲವೆಡೆ ರಸ್ತೆಗಳಲ್ಲಿ ಜನರ ಮೃತದೇಹಗಳೂ ಪತ್ತೆಯಾಗಿವೆ.
11:59 AM Feb 05, 2024 IST | Ashitha S
ಚಿಲಿಯಲ್ಲಿ ಭೀಕರ ಬೆಂಕಿ  ರಸ್ತೆಗಳಲ್ಲಿ ಮೃತ ದೇಹಗಳು  ತುರ್ತು ಪರಿಸ್ಥಿತಿ ಘೋಷಣೆ

ದಕ್ಷಿಣ ಅಮೆರಿಕ: ಚಿಲಿಯ ಕಾಡುಗಳಲ್ಲಿ ಕಾಣಿಸಿಕೊಂಡಿರುವ ಭಾರಿ ಬೆಂಕಿ ಭೀಕರ ವಿನಾಶಕ್ಕೆ ಕಾರಣವಾಗಿದೆ. ಇದರಿಂದ 99 ಮಂದಿ ಸಾವನ್ನಪ್ಪಿದ್ದು, 1,600ಕ್ಕೂ ಹೆಚ್ಚು ಮನೆಗಳು ಸುಟ್ಟು ಭಸ್ಮವಾಗಿವೆ. ಬೆಂಕಿಯಿಂದಾಗಿ ಅಪಾರ ಸಂಖ್ಯೆಯ ಜನರು ಸುಟ್ಟು ಕರಕಲಾಗಿದ್ದಾರೆ. ಹಲವೆಡೆ ರಸ್ತೆಗಳಲ್ಲಿ ಜನರ ಮೃತದೇಹಗಳೂ ಪತ್ತೆಯಾಗಿವೆ.

Advertisement

ಭೀಕರ ಬೆಂಕಿಯ ದೃಷ್ಟಿಯಿಂದ , ಚಿಲಿ ಸರ್ಕಾರವು ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಪರಿಸ್ಥಿತಿಯನ್ನು ನಿಭಾಯಿಸಲು ಸಂಪನ್ಮೂಲಗಳ ಕೊರತೆಯಿಲ್ಲ ಎಂದು ಸರ್ಕಾರ ಹೇಳಿದೆ.

ಕಾಡಿನಲ್ಲಿ ಬೆಂಕಿ ಕಾಣಿಸಿಕೊಂಡ ಸ್ಥಳದ ಬಳಿ ದಟ್ಟವಾದ ಜನವಸತಿ ಇದೆ. ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ. 92 ಅರಣ್ಯಗಳಿಗೆ ಬೆಂಕಿ ಆವರಿಸಿದೆ. ಕಾಡುಗಳು ಉರಿಯುತ್ತಿವೆ ಮತ್ತು ಅವುಗಳಿಂದ ಭಯಾನಕ ಜ್ವಾಲೆ ಮತ್ತು ಹೊಗೆ ಏರುತ್ತಿದೆ. ಜನರು ಮನೆಯಿಂದ ಹೊರಗೆ ಬರದಂತೆ ಮನವಿ ಮಾಡಲಾಗಿದೆ.

Advertisement

Advertisement
Tags :
Advertisement