For the best experience, open
https://m.newskannada.com
on your mobile browser.
Advertisement

ಮಹಿಳೆಯ ಎಳೆದೊಯ್ದು ಕಾರು ಪಾರ್ಕಿಂಗ್‌ನಲ್ಲಿ ಅತ್ಯಾಚಾರ; ಭೀಕರ ದೃಶ್ಯ ಸೆರೆ

ಮಹಿಳೆ ಮೇಲೆ ಹಿಂಬದಿಯಿಂದ ಬೆಲ್ಟ್ ಮೂಲಕ ದಾಳಿ ನಡೆಸಿ, ಆಕೆಯನ್ನು ಎಳೆದೊಯ್ದು ಅತ್ಯಾಚಾರ ಎಸಗಿದ ಭೀಕರ ಘಟನೆ ನ್ಯೂಯಾರ್ಕ್ ನಗರದಲ್ಲಿ ನಡೆದಿದೆ. ಈ ಘಟನೆಯ ದೃಶ್ಯ ಅಲ್ಲೇ ಇದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಪರಿಚಿತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
03:28 PM May 10, 2024 IST | Ashitha S
ಮಹಿಳೆಯ ಎಳೆದೊಯ್ದು ಕಾರು ಪಾರ್ಕಿಂಗ್‌ನಲ್ಲಿ ಅತ್ಯಾಚಾರ  ಭೀಕರ ದೃಶ್ಯ ಸೆರೆ

ನ್ಯೂಯಾರ್ಕ್‌: ಮಹಿಳೆ ಮೇಲೆ ಹಿಂಬದಿಯಿಂದ ಬೆಲ್ಟ್ ಮೂಲಕ ದಾಳಿ ನಡೆಸಿ, ಆಕೆಯನ್ನು ಎಳೆದೊಯ್ದು ಅತ್ಯಾಚಾರ ಎಸಗಿದ ಭೀಕರ ಘಟನೆ ನ್ಯೂಯಾರ್ಕ್ ನಗರದಲ್ಲಿ ನಡೆದಿದೆ. ಈ ಘಟನೆಯ ದೃಶ್ಯ ಅಲ್ಲೇ ಇದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಪರಿಚಿತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Advertisement

45 ವರ್ಷದ ಮಹಿಳೆ, ಕಾರು ಪಾರ್ಕಿಂಗ್ ಪಕ್ಕದಲ್ಲಿರುವು ಫುಟ್‌ಪಾಥ್ ಮೇಲೆ ನಡೆದುಕೊಂಡು ಹೋಗುತ್ತಿರುವಾಗ ಈ ಘಟನೆ ನಡೆದಿದೆ. ಹಿಂಬದಿಯಿಂದ ಆಗಮಿಸಿದ ಅಪರಿಚಿತ, ಮುಖಕ್ಕೆ ಮಾಸ್ಕ್ ಹಾಕಿಕೊಂಡು ದಾಳಿ ಮಾಡಿದ್ದಾರೆ. ಬೆಲ್ಟ್‌ನ್ನು ಕುಣಿಕೆ ರೀತಿ ಮಾಡಿ, ಮಹಿಳೆ ಮೇಲೆ ದಾಳಿ ಮಾಡಿದ್ದಾರೆ. ಮಹಿಳೆ ಕುತ್ತಿತಿಗೆ ಬೆಲ್ಟ್ ಹಾಕಿ ಹಿಡಿದೆಳೆದಿದ್ದಾನೆ. ದಾಳಿಯ ಪರಿಣಾಮ ಮಹಿಳೆ ಏಕಾಏಕಿ ನೆಲಕ್ಕುರುಳಿದ್ದಾಳೆ.

ಬಿಡಿಸಿಕೊಳ್ಳುವ ಪ್ರಯತ್ನ ಮಾಡಿದರೂ ಸಾಧ್ಯವಾಗಿಲ್ಲ. ಅಷ್ಟರೊಳಗೆ ಬೆಲ್ಟ್ ಕುಣಿಕೆ ಬಿಗಿಯಾಗಿದೆ. ಮಹಿಳೆಯ ಪ್ರಜ್ಞೆ ತಪ್ಪಿದೆ. ಬೆಲ್ಟ್ ಮೂಲಕ ಮಹಿಳೆಯನ್ನು ಎಳೆದೊಯ್ಯಲಾಗಿದೆ. ಎರಡು ಕಾರು ಪಾರ್ಕಿಂಗ್ ಮಾಡಿರುವ ನಡುವಿನ ಸ್ಥಳಕ್ಕೆ ಮಹಿಳೆಯನ್ನು ಎಳೆದೊಯ್ದು, ಆಕೆಯಲ್ಲಿದ್ದ ವಸ್ತುಗಳು, ಹಣವನ್ನು ಎಗರಿಸಲಾಗಿದೆ. ಬಳಿಕ ಆಕೆಯ ಮೇಲೆ ಅತ್ಯಾಚಾರ ಎಸಗಲಾಗಿದೆ.

Advertisement

ಪ್ರಜ್ಞಾಹೀನ ಸ್ಥಿತಿಯಲ್ಲಿ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಸ್ಥಳದಿಂದ ಪರಾರಿಯಾಗಿದ್ದಾನೆ. ಇತ್ತ ಮಹಿಳೆಯನ್ನು ಕಾರು ಪಾರ್ಕಿಂಗ್‌ನಲ್ಲಿ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ನೆರವಿಗೆ ಧಾವಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮಹಿಳೆಯನ್ನು ಆಸ್ಪತ್ರೆ ದಾಖಲಿಸಿದ್ದಾರೆ. ಸದ್ಯ ಮಹಿಳೆ ಆರೋಗ್ಯ ಸ್ಥಿರವಾಗಿದೆ. ಆದರೆ ಇತ್ತ ಆರೋಪಿ ವೇಷ ಬದಲಿಸಿ ಎಸ್ಕೇಪ್ ಆಗಿದ್ದಾನೆ. ಆರೋಪಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ನ್ಯೂಯಾರ್ಕ್ ನಗರದ ಪೊಲೀಸರು ತಿಳಿಸಿದ್ದಾರೆ.

Advertisement
Tags :
Advertisement