For the best experience, open
https://m.newskannada.com
on your mobile browser.
Advertisement

ಒಮ್ಮೆ ಚಾರ್ಜ್‌ ಮಾಡಿದರೆ ಬರೋಬ್ಬರಿ 50 ವರ್ಷ ಬಾಳಿಕೆ ಬರುತ್ತೆ ಈ ಬ್ಯಾಟರಿ

ಡಿಜಿಟಲ್ ಯುಗದಲ್ಲಿ ಬ್ಯಾಟರಿ ಪಾತ್ರ ಅತ್ಯಂತ ಮುಖ್ಯ. ಉತ್ತಮ ಫೋನ್ ಚಾರ್ಜ್ ಗರಿಷ್ಠ 2 ದಿನ ಬಳಕೆ ಮಾಡಬಹುದು. ಆದರೀಗ ಬ್ಯಾಟರಿ ಕ್ಷೇತ್ರದ ಅತೀ ದೊಡ್ಡ ಸಮಸ್ಯೆಗೆ ಇದೀಗ ಚೀನಾ ಉತ್ತರ ಕಂಡುಕೊಂಡಿದೆ. ಚೀನಾ ನಾಣ್ಯಗಾತ್ರದ ನ್ಯೂಕ್ಲಿಯರ್ ಬ್ಯಾಟರಿ ಅಭಿವೃದ್ಧಪಡಿಸಿದೆ. ಈ ಬ್ಯಾಟರಿ ಬರೋಬ್ಬರಿ 50 ವರ್ಷ ಕಾಲ ಚಾರ್ಜ್ ಮಾಡದೇ ಬಳಕೆ ಮಾಡಲು ಸಾಧ್ಯವಿದೆ. ಚೀನಾದ ಬೆಟಾವೋಲ್ಟ್ ಸ್ಟಾರ್ಟ್‌ಅಪ್ ಕಂಪನಿ ಈ ಬ್ಯಾಟರಿಯನ್ನು ಬಿಡುಗಡೆ ಮಾಡಿದೆ.
05:16 PM Jan 16, 2024 IST | Ashitha S
ಒಮ್ಮೆ ಚಾರ್ಜ್‌ ಮಾಡಿದರೆ ಬರೋಬ್ಬರಿ 50 ವರ್ಷ ಬಾಳಿಕೆ ಬರುತ್ತೆ ಈ ಬ್ಯಾಟರಿ

ಚೀನಾ: ಡಿಜಿಟಲ್ ಯುಗದಲ್ಲಿ ಬ್ಯಾಟರಿ ಪಾತ್ರ ಅತ್ಯಂತ ಮುಖ್ಯ. ಉತ್ತಮ ಫೋನ್ ಚಾರ್ಜ್ ಗರಿಷ್ಠ 2 ದಿನ ಬಳಕೆ ಮಾಡಬಹುದು. ಆದರೀಗ ಬ್ಯಾಟರಿ ಕ್ಷೇತ್ರದ ಅತೀ ದೊಡ್ಡ ಸಮಸ್ಯೆಗೆ ಇದೀಗ ಚೀನಾ ಉತ್ತರ ಕಂಡುಕೊಂಡಿದೆ. ಚೀನಾ ನಾಣ್ಯಗಾತ್ರದ ನ್ಯೂಕ್ಲಿಯರ್ ಬ್ಯಾಟರಿ ಅಭಿವೃದ್ಧಪಡಿಸಿದೆ. ಈ ಬ್ಯಾಟರಿ ಬರೋಬ್ಬರಿ 50 ವರ್ಷ ಕಾಲ ಚಾರ್ಜ್ ಮಾಡದೇ ಬಳಕೆ ಮಾಡಲು ಸಾಧ್ಯವಿದೆ. ಚೀನಾದ ಬೆಟಾವೋಲ್ಟ್ ಸ್ಟಾರ್ಟ್‌ಅಪ್ ಕಂಪನಿ ಈ ಬ್ಯಾಟರಿಯನ್ನು ಬಿಡುಗಡೆ ಮಾಡಿದೆ.

Advertisement

ಬೀಜಿಂಗ್‌ನ ಬೆಟಾವೋಲ್ಟ್ ಸ್ಟಾರ್ಟ್ಅಪ್ ಕಂಪನಿ ಈ ಹೊಚ್ಚ ಹೊಸ ನ್ಯೂಕ್ಲಿಯರ್ ಬ್ಯಾಟರಿ ಬಿಡುಗಡೆ ಮಾಡಿದೆ. ಪ್ರಮುಖವಾಗಿ ಈ ಬ್ಯಾಟರಿಯನ್ನು ಸ್ಮಾರ್ಟ್‌ಫೋನ್ ಹಾಗೂ ಇತರ ಸ್ಮಾರ್ಟ್ ಡಿಜಿ ಗ್ಯಾಜೆಟ್ಸ್‌ನಲ್ಲಿ ಉಪಯೋಗವಾಗುವಂತೆ ಅಭಿವೃದ್ಧಿಪಡಿಸಲಾಗಿದೆ. ಇದು ಅತ್ಯಂತ ಸಣ್ಣ ಗಾತ್ರ. ಹೀಗಾಗಿ ಇನ್ನುಮುಂದೆ ಸ್ಮಾರ್ಟ್‌ಫೋನ್ ಗಾತ್ರದಲ್ಲೂ ಮಹತ್ತರ ಬದಲಾವಣೆಯಾಗಲಿದೆ.

ನೂತನ ಬ್ಯಾಟರಿಗೆ ಬಿವಿ100 ಎಂದು ಹೆಸರಿಡಲಾಗಿದೆ. ನಿಕೆಲ್‌ಗಳನ್ನು 63 ಸಣ್ಣ ಹಾಳೆಗಳ ಪದರಗಳಾಗಿ ಮಾಡಿ ಜೊತೆಗೆ ಕ್ರಿಸ್ಟಲ್ ಡೈಮೆಂಡ್ ಸೆಮಿಕಂಡಕ್ಟರ್ ಬಳಕೆ ಮಾಡಿ ಈ ನ್ಯೂಕ್ಲಿಯರ್ ಬ್ಯಾಟರಿ ಅಭಿವೃದ್ಧಿಪಡಿಸಲಾಗಿದೆ. ಲಿಥಿಯಂ ಬ್ಯಾಟರಿಗೆ ಹೋಲಿಸಿದರೆ 10 ಪಟ್ಟು ಹೆಚ್ಚು ಶಕ್ತಿಯನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯಹೊಂದಿದೆ. ಬರೋಬ್ಬರಿ 3,300 ವೆಘಾವ್ಯಾಟ್ ಗಂಟೆಗಳ ಕಾಲ ವಿದ್ಯುತ್ ಶಕ್ತಿ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ.

Advertisement

ಒಂದು ಬಾರಿ ಈ ನ್ಯೂಕ್ಲಿಯರ್ ಬ್ಯಾಚರಿ ಚಾರ್ಜ್ ಮಾಡಿದರೆ ಸರಿಸುಮಾರು 50 ವರ್ಷ ಶಕ್ತಿಯನ್ನುಹಿಡಿದಿಟ್ಟುಕೊಂಡು ಬಳಕೆಗೆ ನೀಡಲಿದೆ. ಹೀಗಾಗಿ ಈ ಬ್ಯಾಟರಿ 50 ವರ್ಷ ಕಾಲ ಯಾವುದೇ ಚಾರ್ಜಿಂಗ್ ಅವಶ್ಯಕತೆ ಇಲ್ಲ, ಜೊತೆಗೆ ನಿರ್ವಹಣೆಯೂ ಬೇಕಿಲ್ಲ. ಸದ್ಯ ಬಿವಿ100 ನ್ಯೂಕ್ಲಿಯರ್ ಬ್ಯಾಟರಿ ಬಿಡುಗಡೆಯಾಗಿದೆ. ಆದರೆ ಉತ್ಪಾದನೆ ಆರಂಭಗೊಂಡಿಲ್ಲ. ಶೀಘ್ರದಲ್ಲೇ ಮಾಸ್ ಪ್ರೊಡಕ್ಷನ್ ಆರಂಭವಾಗಲಿದೆ.

Advertisement
Tags :
Advertisement