ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಕಾಲರಾ ಕೇಸ್‌ ಹತ್ತಕ್ಕೆ ಏರಿಕೆ : ಬೀದಿಬದಿ ಹೋಟೆಲ್​ಗಳ ತೆರವಿಗೆ ಆಗ್ರಹ

ಬಿಸಿಲಿನ ಧಗೆಯಿಂದ ಬೇಸತ್ತಿರುವ ಜನಕ್ಕೆ ಇದೀಗ ಇನ್ನೊಂದು ಕಂಟಕ ಎದುರಾಗಿದೆ. ಬಸಿಲಿಸ ತಾಪಕ್ಕೆ ಏರಿಕೆ ಬೆನ್ನಲ್ಲೇ ಕಾಲರಾ ಕೂಡ ತನ್ನ ಆಟವನ್ನು ಶುರುಮಾಡಿಕೊಂಡಿದೆ. ಈಗಾಗಲೇ ಬೇಸತ್ತಿರುವ ಜನರು ಕಾಲರಾದ ವಿರುದ್ಧ ಹೋರಾಡುವ ಸ್ಥಿತಿ ಎದುರಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಕಾಲರಾ ಆತಂಕವನ್ನು ಸೃಷ್ಟಿಸಿದೆ. ಬೊಮ್ಮನಹಳ್ಳಿಯಲ್ಲಿ 3ನೇ ಪ್ರಕರಣ ಪತ್ತೆಯಾಗಿದ್ದು, ರಾಜ್ಯದಲ್ಲಿ ಕಾಲರಾ ಕೇಸ್​ಗಳ ಸಂಖ್ಯೆ 10ಕ್ಕೆ ಏರಿಕೆಯಾಗಿದೆ
09:48 PM Apr 07, 2024 IST | Nisarga K
ಕಾಲರಾ ಕೇಸ್‌ ಹತ್ತಕ್ಕೆ ಏರಿಕೆ : ಬೀದಿಬದಿ ಹೋಟೆಲ್​ಗಳ ತೆರವಿಗೆ ಆಗ್ರಹ

ಬೆಂಗಳೂರು: ಬಿಸಿಲಿನ ಧಗೆಯಿಂದ ಬೇಸತ್ತಿರುವ ಜನಕ್ಕೆ ಇದೀಗ ಇನ್ನೊಂದು ಕಂಟಕ ಎದುರಾಗಿದೆ. ಬಸಿಲಿಸ ತಾಪಕ್ಕೆ ಏರಿಕೆ ಬೆನ್ನಲ್ಲೇ ಕಾಲರಾ ಕೂಡ ತನ್ನ ಆಟವನ್ನು ಶುರುಮಾಡಿಕೊಂಡಿದೆ. ಈಗಾಗಲೇ ಬೇಸತ್ತಿರುವ ಜನರು ಕಾಲರಾದ ವಿರುದ್ಧ ಹೋರಾಡುವ ಸ್ಥಿತಿ ಎದುರಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಕಾಲರಾ ಆತಂಕವನ್ನು ಸೃಷ್ಟಿಸಿದೆ. ಬೊಮ್ಮನಹಳ್ಳಿಯಲ್ಲಿ 3ನೇ ಪ್ರಕರಣ ಪತ್ತೆಯಾಗಿದ್ದು, ರಾಜ್ಯದಲ್ಲಿ ಕಾಲರಾ ಕೇಸ್​ಗಳ ಸಂಖ್ಯೆ 10ಕ್ಕೆ ಏರಿಕೆಯಾಗಿದೆ

Advertisement

ನಗರ ಒಂದರಲ್ಲೇ ಬರೋಬ್ಬರಿ 9 ಕೇಸ್​ಗಳ ದೃಡಪಟ್ಟಿವೆ. ಇತ್ತ ರಾಮನಗರದ ಓರ್ವ ವ್ಯಕ್ತಿಗೆ ಕಾಲರಾ ಚಿಕಿತ್ಸೆ ಕೊಡಿಲಾಗುತ್ತಿದೆ.ಇನ್ನು ನಿನ್ನೆಯಷ್ಟೇ (ಏ.06) ಬೆಂಗಳೂರಿನ ಮೆಡಿಕಲ್ ಕಾಲೇಜಿನಲ್ಲಿ ಇಬ್ಬರು ವಿದ್ಯಾರ್ಥಿನಿಯರಿಗೆ ಕಾಲರಾ ದೃಡಪಟ್ಟಿತ್ತು. ಎಚ್ಚೆತ್ತುಕೊಂಡಿರುವ ಅಧಿಕಾರಿಗಳು BCM ಹಾಸ್ಟೆಲ್​ನ ಆಹಾರ ಪದಾರ್ಥಗಳನ್ನು ಪರೀಕ್ಷೆಗೆ ಕಳಿಸಿದ್ದಾರೆ.ಆದರೆ ರೋಗದ ಭಯಕ್ಕೆ ವಿದ್ಯಾರ್ಥಿಗಳು ಹಾಸ್ಟಲ್‌ ತೊರೆಯುತ್ತಿದ್ದಾರೆ.

ಬೆಂಗಳೂರಿನ ಹೋಟೆಲ್ ಮಾಲೀಕರ ಸಂಘ ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆಗೆ ಪತ್ರ ಬರೆದಿದೆ. 30 ಸಾವಿರ ಬೀದಿಬದಿ ಹೋಟೆಲ್​ಗಳಿದ್ದು, ಇವುಗಳಿಂದ ಜನರ ಆರೋಗ್ಯ ಹದಗೆಡುತ್ತಿದೆ ಎಂದು ಆರೋಪಿಸಿದೆ.ಹೀಗಾಗಿ ಬೀದಿ ಬದಿಯ ಹೋಟೆಲ್‌ಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿದೆ.

Advertisement

 

Advertisement
Tags :
bengaluruCASEcholeraHOTElINCREASEKARNATAKALatestNewsNewsKarnatakaSTATE
Advertisement
Next Article