For the best experience, open
https://m.newskannada.com
on your mobile browser.
Advertisement

ಎಚ್ಚರ. . . ಬೆಂಗಳೂರಿನಲ್ಲಿ ಕಾಲರಾ ರೋಗ ಪತ್ತೆ

ನಗರದಲ್ಲಿನ ಪಿಜಿಯಲ್ಲಿ ಇರುವ ಖಾಸಗಿ ಕಂಪನಿಯ ಉದ್ಯೋಗಿ ಯುವತಿಯಲ್ಲಿ ಕಾಲರಾ ರೋಗದ ಶಂಕೆ ವ್ಯಕ್ತವಾಗಿದೆ.
11:22 AM Apr 04, 2024 IST | Ashitha S
ಎಚ್ಚರ      ಬೆಂಗಳೂರಿನಲ್ಲಿ ಕಾಲರಾ ರೋಗ ಪತ್ತೆ

ಬೆಂಗಳೂರು: ನಗರದಲ್ಲಿನ ಪಿಜಿಯಲ್ಲಿ ಇರುವ ಖಾಸಗಿ ಕಂಪನಿಯ ಉದ್ಯೋಗಿ ಯುವತಿಯಲ್ಲಿ ಕಾಲರಾ ರೋಗದ ಶಂಕೆ ವ್ಯಕ್ತವಾಗಿದೆ.

Advertisement

ನಗರದ ಮಲ್ಲೇಶ್ವರದ ಗಾಂಧಿ ಗ್ರಾಮ ಪ್ರದೇಶದ ಪಿಜಿಯಲ್ಲಿ ವಾಸವಿದ್ದು, ಬೆಳ್ಳಂದೂರಿನ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ 27 ವರ್ಷ ಯುವತಿಯಲ್ಲಿ ಕಾಲರಾ ರೋಗ ಶಂಕೆ ವ್ಯಕ್ತವಾಗಿದೆ. ಯುವತಿಯು ಮಾ.30 ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಏ.3 ರಂದು ಗುಣಮುಖರಾಗಿ ಮನೆ ತೆರಳಿದ್ದಾರೆ. ಮತ್ತೊಂದು ಬಗೆಯ ಪರೀಕ್ಷೆಗೆ ಯುವತಿಯ ಮಲದ ಮಾದರಿಯನ್ನು ಕಳುಹಿಸಿಕೊಡಲಾಗಿದೆ. ಈ ವರದಿ ಬಂದ ಬಳಿಕ ದೃಢಪಡಿಸಲಾಗುವುದು ಎಂದು ಬಿಬಿಎಂಪಿ ಸಾರ್ವಜನಿಕ ಆರೋಗ್ಯ ವಿಭಾಗದ ಮುಖ್ಯ ಆರೋಗ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.

ಕಾಲರಾವು ವಿಷಕಾರಿ ಬ್ಯಾಕ್ಟೀರಿಯ ವಿಬ್ರಿಯೊ ಕಾಲರಾದಿಂದ ಹರಡುವ ಸೋಂಕಾಗಿದೆ. ಈ ಬ್ಯಾಕ್ಟೀರಿಯಾದಿಂದ ಕರುಳಿನ ಸೋಂಕು ಉಂಟಾಗುತ್ತದೆ. ಪರಿಣಾಮವಾಗಿ ತೀವ್ರವಾದ ವಾಂತಿ ಭೇದಿ ಕಾಯಿಲೆಗೆ ವ್ಯಕ್ತಿ ತುತ್ತಾಗುತ್ತಾನೆ. ‘ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್’ ಪ್ರಕಾರ, ಪ್ರಪಂಚದಾದ್ಯಂತ ಪ್ರತಿ ವರ್ಷ 1.3 ರಿಂದ 4 ದಶಲಕ್ಷ ಜನರು ಕಾಲರಾದಿಂದ ಬಳಲುತ್ತಾರೆ.

Advertisement

ಕಾಲರಾ ತಡೆಗಟ್ಟಲು ಏನು ಮಾಡಬಹುದು?
ಕುಡಿಯುವ ನೀರಿನ ನೈರ್ಮಲ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು. ಶುದ್ಧೀಕರಿಸಿದ ಅಥವಾ ಚೆನ್ನಾಗಿ ಕುದಿಸಿದ ನೀರನ್ನೇ ಕುಡಿಯಬೇಕು.
ಸಾಬೂನು ಮತ್ತು ನೀರಿನಿಂದ ಕೈ ತೊಳೆಯುವುದು, ವಿಶೇಷವಾಗಿ ಊಟ ಅಥವಾ ಅಡುಗೆ ಮಾಡುವ ಮೊದಲು ಎಲ್ಲರೂ ನೈರ್ಮಲ್ಯದ ಅಭ್ಯಾಸಗಳನ್ನು ಅನುಸರಿಸಬೇಕು. ಚೆನ್ನಾಗಿ ಬೆಂದಿರದ ಆಹಾರ ಸೇವನೆಯಿಂದ ದೂರವಿರಬೇಕು. ಈ ರೋಗವನ್ನು ತಡೆಗಟ್ಟಲು ಲಸಿಕೆ ಸಹ ಈಗ ಲಭ್ಯವಿದೆ.

Advertisement
Tags :
Advertisement