For the best experience, open
https://m.newskannada.com
on your mobile browser.
Advertisement

ಕಾಲರಾ ಭಯದಿಂದ ವಲಸೆ ಹೋಗುವಾಗ ಹಡಗು ಮುಳುಗಡೆ: 94 ಮಂದಿ ದಾರುಣ ಸಾವು

ಕಾಲರಾ ರೋಗದಿಂದ ಹೆದರಿ ಜೀವ ಉಳಿಸಿಕೊಳ್ಳುವ ಸುಲುವಾಗಿ ವಲಸೆ ಹೊರಟ ಆಫ್ರಿಕಾದ ಜನರು ಹಡಗು ಮುಳುಗಡೆಗೊಂಡು 94 ಮಂದಿ ದಾರುಣವಾಗಿ ಸಾವನಪ್ಪಿದ್ದಾರೆ. ಈ ಘಟನೆ ಮೊಜಾಂಬಿಕ್‌ ದೇಶದಲ್ಲಿ ನಡೆದಿದೆ.
10:23 PM Apr 08, 2024 IST | Nisarga K
ಕಾಲರಾ ಭಯದಿಂದ ವಲಸೆ ಹೋಗುವಾಗ ಹಡಗು ಮುಳುಗಡೆ  94 ಮಂದಿ ದಾರುಣ ಸಾವು
ಕಾಲರಾ ಭಯದಿಂದ ವಲಸೆ ಹೋಗುವಾಗ ಹಡಗು ಮುಳುಗಡೆ: 94 ಮಂದಿ ದಾರುಣ ಸಾವು

ಮೊಜಾಂಬಿಕ್‌:  ಕಾಲರಾ ರೋಗದಿಂದ ಹೆದರಿ ಜೀವ ಉಳಿಸಿಕೊಳ್ಳುವ ಸುಲುವಾಗಿ ವಲಸೆ ಹೊರಟ ಆಫ್ರಿಕಾದ ಜನರು ಹಡಗು ಮುಳುಗಡೆಗೊಂಡು 94 ಮಂದಿ ದಾರುಣವಾಗಿ ಸಾವನಪ್ಪಿದ್ದಾರೆ. ಈ ಘಟನೆ ಮೊಜಾಂಬಿಕ್‌ ದೇಶದಲ್ಲಿ ನಡೆದಿದೆ.

Advertisement

ಮೊಜಾಂಬಿಕ್‌ ದೇಶದಲ್ಲಿ ಇತ್ತೀಚಿಗೆ ಕಾಲರಾ ರೋಗದ ಹಾವಳಿ ಹೆಚ್ಚಾಗಿದೆ. ಸಾಂಕ್ರಾಮಿಕ ರೋಗ ಹಲವಾರು ಜನರನ್ನು ಬಲಿ ಪಡೆದಿದ್ದು, ಸಾವಿನ ಸರಣಿಯಿಂದ ತಪ್ಪಿಸಿಕೊಳ್ಳಲು ಜನ ಊರಿಗೆ ಊರನ್ನೇ ಖಾಲಿ ಮಾಡಿಕೊಂಡು ವಲಸೆ ಹೊರಟಿದ್ದಾರೆ.

ಮೀನುಗಾರರ ಹಡಗಿನಲ್ಲಿ ನೂರಾರು ಜನರು ಗುಳೆ ಹೋಗುವಾಗ ಹಡಗು ಮಗುಚಿ ಬಿದ್ದಿದೆ. ಮಕ್ಕಳು ಸೇರಿದಂತೆ 94 ಮಂದಿ ಸಾವನ್ನಪ್ಪಿದ್ದು, 26 ಮಂದಿ ನಾಪತ್ತೆಯಾಗಿದ್ದಾರೆ. ಅಗತ್ಯಕ್ಕಿಂತ ಹೆಚ್ಚು ಜನರನ್ನು ಹಡಗಿನಲ್ಲಿ ಹೊತ್ತುಕೊಂಡು ಹೋಗುತ್ತಾ ಇದ್ದಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ.

Advertisement

ಮೀನುಗಾರರು ಬಳಸುತ್ತಿದ್ದ ಹಡಗಿನಲ್ಲಿ ಅಗತ್ಯಕ್ಕಿಂತ ಹೆಚ್ಚು ಜನ ವಲಸೆ ಹೋಗುವಾಗ ದುರಂತಕ್ಕೀಡಾಗಿದೆ. ಮೊಜಾಂಬಿಕ್ ದೇಶದಲ್ಲಿ ಕಾಲರಾ ಬಂದಾಗ ಒಂದು ಪ್ರದೇಶದಿಂದ ಮತ್ತೊಂದು ಜಾಗಕ್ಕೆ ವಲಸೆ ಹೋಗುವುದು ಸಾಮಾನ್ಯವಾಗಿದೆ. ಆದರೆ ಒಂದೇ ಬಾರಿ ನೂರಾರು ಜನ ಪ್ರಾಣ ಬಿಟ್ಟಿರೋದು ಇದೇ ಮೊದಲ ಬಾರಿಯಾಗಿದ್ದು ಜನ ಬೆಚ್ಚಿಬಿದ್ದಿದ್ದಾರೆ.

Advertisement
Tags :
Advertisement