For the best experience, open
https://m.newskannada.com
on your mobile browser.
Advertisement

ನ್ಯೂಸ್‌ ಕರ್ನಾಟಕ ಸಂಸ್ಥೆಯ "ಕ್ರಿಸ್‌ಮಸ್‌ ಕರೋಲ್‌" 3ನೇ ದಿನದ ಸ್ಪರ್ಧೆಗೆ ಕ್ಷಣಗಣನೆ

ನ್ಯೂಸ್‌ ಕರ್ನಾಟಕ ಸಂಸ್ಥೆ ಸಹಯೋಗದಲ್ಲಿ ನಡೆಯುತ್ತಿರುವ 'ಕ್ರಿಸ್‌ಮಸ್ ಕರೋಲ್ 2023' ಈವೆಂಟ್‌ನ ಮೊದಲೇರಡು ದಿನ ಸ್ಪರ್ಧೆಯಲ್ಲಿ ತಂಡಗಳು ಅಸಾಧಾರಣ ಪ್ರದರ್ಶನ ತೋರಿವೆ.
12:27 PM Dec 17, 2023 IST | Ashitha S
ನ್ಯೂಸ್‌ ಕರ್ನಾಟಕ ಸಂಸ್ಥೆಯ  ಕ್ರಿಸ್‌ಮಸ್‌ ಕರೋಲ್‌  3ನೇ ದಿನದ ಸ್ಪರ್ಧೆಗೆ ಕ್ಷಣಗಣನೆ

ಮಂಗಳೂರು: ನ್ಯೂಸ್‌ ಕರ್ನಾಟಕ ಸಂಸ್ಥೆ ಸಹಯೋಗದಲ್ಲಿ ನಡೆಯುತ್ತಿರುವ "ಕ್ರಿಸ್‌ಮಸ್ ಕರೋಲ್ 2023" ಈವೆಂಟ್‌ನ ಮೊದಲೇರಡು ದಿನ ಸ್ಪರ್ಧೆಯಲ್ಲಿ ತಂಡಗಳು ಅಸಾಧಾರಣ ಪ್ರದರ್ಶನ ತೋರಿವೆ.

Advertisement

ಇನ್ನು ಸ್ಪರ್ಧೆಯ ಮೂರನೇ ದಿನವಾದ ಇಂದು ಸ್ಪರ್ಧೆಯಲ್ಲಿ ದಿ 3 ಕಿಂಗ್ಸ್‌ ತಂಡ., ವಿದ್ಯಾನಿಕೇತನ್‌ ತಂಡ., ಹಾಗೂ ನವತಾರಾ ಗಾನವರುಂಡ ತಂಡ ಪ್ರದರ್ಶನಕ್ಕೆ ಸಿದ್ಧವಾಗಿದ್ದು, ಕ್ರಿಸ್‌ಮಸ್ ಕರೋಲ್ ಸ್ಪರ್ಧೆಯಲ್ಲಿ ಅಳಿಸಲಾಗದ ಗುರುತು ಹಾಕಲು ಸಿದ್ಧರಾಗಿದ್ದಾರೆ. ಪ್ರತಿ ತಂಡದ ಪ್ರದರ್ಶನವು ಸೃಜನಶೀಲತೆ ತೀರ್ಪುಗಾರರ ಮನಗೆಲ್ಲುವ ವಿಶ್ವಾಸವಿದೆ.

ಮೊದಲೆರಡಯ ದಿನದ ಸ್ಪರ್ಧೆಯಲ್ಲಿ ಸಂಗೀತದ ಆನಂದಂತೆ 3ನೇ ದಿನವಾದ ಇಂದು ಸಹ ಅದೇ ಪ್ರವೃತ್ತಿಯನ್ನು ನಿರೀಕ್ಷಿಸಲಾಗಿದೆ. ಒಟ್ಟಿನಲ್ಲಿ ಕ್ರಿಸ್‌ಮಸ್ ಕರೋಲ್ ಸ್ಪರ್ಧೆಯು ವೈವಿಧ್ಯತೆಯ ಮೂಲಕ ಏಕತೆಯ ಆಚರಣೆಗೆ ಸಾಕ್ಷಿಯಾಗಿದ್ದು ವಿವಿಧ ಪ್ರದೇಶಗಳ ತಂಡಗ ಸಂತೋಷ ಹಂಚಿಕೊಳ್ಳುವ ವೇದಿಕೆಯಾಗಿ ಪರಿಣಮಿಸಿದೆ.

Advertisement

ಕ್ರಿಸ್‌ಮಸ್ ಕರೋಲ್ ಸ್ಪರ್ಧೆಯು ಕೇವಲ ಸ್ಪರ್ಧೆಯಾಗಿರದೆ ನಮ್ಮ ಕಲೆ ಅಭಿವ್ಯಕ್ತಿಯ ವೇದಿಕೆಯಾಗಿದೆ. ಈ ನಿಟ್ಟಿನಲ್ಲಿ ಇಂದು ದಿ 3 ಕಿಂಗ್ಸ್‌ ತಂಡ., ವಿದ್ಯಾನಿಕೇತನ್‌ ತಂಡ., ಹಾಗೂ ನವತಾರಾ ಗಾನವರೂಂಡ ತಂಡ ನಂತಹ ತಂಡಗಳು ಮೋಡಿ ಮಾಡುವ ಪ್ರದರ್ಶನಕ್ಕೆ ಸಜ್ಜಾಗಿವೆ.

ಸ್ಪರ್ಧೆ ಸಂಜೆ 7:00ಕ್ಕೆ NewsKarnataka ಯ್ಯೂಟೂಬ್‌ ಚಾನಲ್ ನಲ್ಲಿ ಆರಂಭಗೊಳ್ಳಲಿದೆ.

ಸ್ಪರ್ಧೆಯಲ್ಲಿನ ವಿಜೇತರಿಗೆ ಅತ್ಯಾಕರ್ಷಕ ಬಹುಮಾನ ಒದಗಿಸಲಿದೆ. ಚಾಂಪಿಯನ್ ತಂಡಕ್ಕೆ 15,000 ರೂ. ನಗದು ಬಹುಮಾನ ನೀಡಲಾಗುವುದು, ರನ್ನರ್ ಅಪ್ ಮತ್ತು ಎರಡನೇ ರನ್ನರ್ ಅಪ್ ಕ್ರಮವಾಗಿ 10,000 ರೂ. ಮತ್ತು 5,000 ರೂ. ಪಡೆಯಲಿವೆ. ಹೆಚ್ಚುವರಿಯಾಗಿ, ಐದು ತಂಡಗಳಿಗೆ ತಲಾ 1,000 ರೂ. ಸಮಾಧಾನಕರ ಬಹುಮಾನದೊಂದಿಗೆ ಗೌರವಿಸಲಾಗುತ್ತದೆ.

Advertisement
Tags :
Advertisement