For the best experience, open
https://m.newskannada.com
on your mobile browser.
Advertisement

ತಾಜ್​ ಮಹಾಲ್ ಮುಂದೆ ರೀಲ್ಸ್: ಯುವತಿಗೆ ಥಳಿಸಿದ ಸಿಐಎಸ್​ಎಫ್​ ಸಿಬ್ಬಂದಿ

ರೀಲ್ಸ್​ ಮಾಡುವ ವಿಚಾರಕ್ಕೆ ಸಿಐಎಸ್‌ಎಫ್ ಗಾರ್ಡ್​ ಯುವತಿ ಮೇಲೆ ಹಲ್ಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಆಗ್ರಾದ ಪ್ರಸಿದ್ಧ ತಾಜ್ ಮಹಲ್‌ನಲ್ಲಿ ನಡೆದಿದೆ.
10:39 AM Apr 07, 2024 IST | Ashitha S
ತಾಜ್​ ಮಹಾಲ್ ಮುಂದೆ ರೀಲ್ಸ್  ಯುವತಿಗೆ ಥಳಿಸಿದ ಸಿಐಎಸ್​ಎಫ್​ ಸಿಬ್ಬಂದಿ

ಲಕ್ನೋ: ರೀಲ್ಸ್​ ಮಾಡುವ ವಿಚಾರಕ್ಕೆ ಸಿಐಎಸ್‌ಎಫ್ ಗಾರ್ಡ್​ ಯುವತಿ ಮೇಲೆ ಹಲ್ಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಆಗ್ರಾದ ಪ್ರಸಿದ್ಧ ತಾಜ್ ಮಹಲ್‌ನಲ್ಲಿ ನಡೆದಿದೆ.

Advertisement

ಯುವತಿಯೊಬ್ಬರು ಪ್ರವಾಸಕ್ಕೆಂದು ಗೆಳೆಯರ ಜೊತೆ ತಾಜ್ ಮಹಲ್​ಗೆ ಬಂದಿದ್ದರು. ಈ ವೇಳೆ ಯುವತಿ ಹಾಗೂ ಸ್ನೇಹಿತರು ರೀಲ್ಸ್​ ಮಾಡಲು ಮುಂದಾಗಿದ್ದರು. ಆಗ ಅಲ್ಲಿ ಕಾವಲಿದ್ದ ಸಿಐಎಸ್‌ಎಫ್ ಗಾರ್ಡ್​ ಯುವತಿಯನ್ನ ರೀಲ್ಸ್​ ಮಾಡದಂತೆ ತಡೆದಿದ್ದಾರೆ. ಇದೇ ವಿಚಾರವಾಗಿ ಸಿಐಎಸ್‌ಎಫ್ ಗಾರ್ಡ್​ ಹಾಗೂ ಯುವತಿ ನಡುವೆ ಬಿರುಸಿನ ವಾಗ್ವಾದ ನಡೆದು ತಾರಕಕ್ಕೇರಿದೆ ಎನ್ನಲಾಗಿದೆ.

ಬಳಿಕ ಸಿಐಎಸ್‌ಎಫ್ ಸಿಬ್ಬಂದಿ​ ಯುವತಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ವಿಡಿಯೋದಲ್ಲಿ ಸಿಬ್ಬಂದಿ ಪ್ರವಾಸಿಗರ ಮೇಲೆ ಹಲ್ಲೆ ಮಾಡಿರುವುದಕ್ಕೆ ನೆಟ್ಟಿಗರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಿಐಎಸ್‌ಎಫ್ ಗಾರ್ಡ್​ನ ವರ್ತನೆಗೆ ಆಕ್ರೋಶ ವ್ಯಕ್ತವಾಗ್ತಿದೆ.

Advertisement

Advertisement
Tags :
Advertisement