ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಕರಗ ಉತ್ಸವದ ಮೆರವಣಿಗೆಯಲ್ಲಿ ಡ್ಯಾನ್ಸ್ ಮಾಡುವಾಗ ಯುವಕರ ಮಧ್ಯೆ ಕಿರಿಕ್‌ : ಕೊಲೆಯಲ್ಲಿ ಅಂತ್ಯ

ಕರಗ ಉತ್ಸವದ ಮೆರವಣಿಗೆಯ ವೇಳೆ ನಡೆದ ಕಿರಿಕ್‌ ನಿಂದ ಯುವಕ ಪ್ರಾಣ ಬಿಟ್ಟಿರುವ ಘಟನೆ ನಡೆದಿದೆ. 
03:46 PM Apr 25, 2024 IST | Chaitra Kulal

ಬೆಂಗಳೂರು: ಕರಗ ಉತ್ಸವದ ಮೆರವಣಿಗೆಯ ವೇಳೆ ನಡೆದ ಕಿರಿಕ್‌ ನಿಂದ ಯುವಕ ಪ್ರಾಣ ಬಿಟ್ಟಿರುವ ಘಟನೆ ನಡೆದಿದೆ.

Advertisement

ಸಾರದಿ ಮೃತಪಟ್ಟ ಯುವಕ. ಏಪ್ರಿಲ್ 24ರಂದು ಬೆಂಗಳೂರು ನಗರದ ಮಧ್ಯಭಾಗದಲ್ಲಿ ಲಕ್ಷಾಂತರ ಜನ ಕರಗ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಅಂದು ಮಧ್ಯರಾತ್ರಿ 3.30ರ ಸುಮಾರಿಗೆ ಅಣ್ಣಮ್ಮ ದೇವಾಲಯದ ಮುಂದೆ ಯುವಕರ ಮಧ್ಯೆ ಗಲಾಟೆ ನಡೆದಿದೆ.

ಡ್ಯಾನ್ಸ್ ಮಾಡುತ್ತಿದ್ದ ಒಬ್ಬ ವ್ಯಕ್ತಿ ಸಾರದಿ ಮತ್ತು ಸ್ನೇಹಿತರನ್ನು ಟಚ್ ಮಾಡಿದ್ದಾನೆ. ಟಚ್ ಮಾಡಿದ್ದನ್ನು  ಪ್ರಶ್ನಿಸಿದ್ದಕ್ಕೆ ಮೂರ್ನಾಲ್ಕು ಹುಡುಗರಿಂದ ಹಲ್ಲೆ ಮಾಡಲಾಗಿದೆ. ಈ ವೇಳೆ ಸಾರದಿ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ತಕ್ಷಣವೇ ಸಾರದಿಯನ್ನು ಮಲ್ಲೇಶ್ವರಂನ ಕೆ.ಸಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

Advertisement

ಗಂಭೀರವಾಗಿದ್ದ ಸಾರದಿಯನ್ನು ಕೆ.ಸಿ ಜನರಲ್ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾರದಿ ಮೃತಪಟ್ಟಿದ್ದಾರೆ. ಸಾರದಿಯು ವಿವಿ ಗಿರಿ ಕಾಲೋನಿಯ ಯುವಕ. ಕರಗದ ಮೆರವಣಿಗೆಯಲ್ಲಿ ಡ್ಯಾನ್ಸ್ ಮಾಡುವಾಗ ಆದ ಕಿರಿಕ್‌ ದುರಂತಕ್ಕೆ ಕಾರಣವಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.

Advertisement
Tags :
COMMOTIONfestivalKaragaLatestNewsMURDERNewsKarnatakaಬೆಂಗಳೂರು
Advertisement
Next Article