ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

10ನೇ ತರಗತಿಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ

ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿನಿಯನ್ನು ಅಪಹರಿಸಿ, ಹಲ್ಲೆ ನಡೆಸಿ, ಸಾಮೂಹಿಕ ಅತ್ಯಾಚಾರ  ಎಸಗಲಾಗಿದ ಘಟನೆ ಘಟನೆ ಜನವರಿ 29ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. 
11:08 AM Feb 02, 2024 IST | Ashika S

ಭೋಪಾಲ್:‌ ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿನಿಯನ್ನು ಅಪಹರಿಸಿ, ಹಲ್ಲೆ ನಡೆಸಿ, ಸಾಮೂಹಿಕ ಅತ್ಯಾಚಾರ  ಎಸಗಲಾಗಿದ ಘಟನೆ ಘಟನೆ ಜನವರಿ 29ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

Advertisement

ಕೋಚಿಂಗ್‌ಗಾಗಿ ತೆರಳುತ್ತಿದ್ದ ವೇಳೆ ಇಬ್ಬರು ವ್ಯಕ್ತಿಗಳು ಅಪಹರಿಸಿ ಅತ್ಯಾಚಾರ ಎಸಗಿದ ಬಳಿಕ ಪಾಪಿಗಳು ಅಪ್ರಾಪ್ತೆಯನ್ನು ಸೇತುವೆಯೊಂದರ ಬಳಿ  ಎಸೆದು ಹೋಗಿದ್ದಾರೆ.  ಬಾಲಕಿಯನ್ನು ಗಂಭೀರ ಸ್ಥಿತಿಯಲ್ಲಿ ಗ್ವಾಲಿಯರ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತನಿಖಾಧಿಕಾರಿ ಯಶವಂತ್ ಗೋಯಲ್ ತಿಳಿಸಿದ್ದಾರೆ.

ಘಟನೆಯಿಂದ ಬಾಲಕಿಗೆ ತೀವ್ರವಾದ ಗಾಯಗಳಾಗಿವೆ. ಆಕೆಯ ಪಕ್ಕೆಲುಬುಗಳು ಮತ್ತು ಕಾಲುಗಳು ಮುರಿದಿದ್ದು, ಖಾಸಗಿ ಭಾಗಗಳಲ್ಲಿ ಆಳವಾದ ಗಾಯಗಳಾಗಿವೆ.

Advertisement

ಬುಧವಾರ ಬಾಲಕಿಗೆ ಪ್ರಜ್ಞೆ ಮರಳಿ ಬಂದಿದ್ದು, ಆಕೆಯ ಹೇಳಿಕೆ ದಾಖಲಿಸಿ ದೂರು ಸ್ವೀಕರಿಸಲಾಗಿದೆ.

ಪ್ರಜ್ಞೆ ಕಳೆದುಕೊಂಡ ಸ್ಥಿತಿಯಲ್ಲಿದ್ದ ಆಕೆಯನ್ನು ಗಮನಿಸಿದ ದಾರಿಹೋಕರೊಬ್ಬರು ಈ ಬಗ್ಗೆ ಬಾಲಕಿಯ ಮನೆಯವರಿಗೆ ಮಾಹಿತಿ ನೀಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆರೋಪಿಗಳ ವಿರುದ್ಧ ಪೋಕ್ಸೊ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಡಿ) (ಸಾಮೂಹಿಕ ಅತ್ಯಾಚಾರ), 366 (ಅಪಹರಣ) ಮತ್ತು 323 (ಸ್ವಯಂಪ್ರೇರಿತವಾಗಿ ನೋವುಂಟು ಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆʼʼ ಎಂದು ಯಶವಂತ್ ಗೋಯಲ್ ಗೋಯಲ್ ತಿಳಿಸಿದ್ದಾರೆ.

Advertisement
Tags :
LatetsNewsNewsKannadaಅಪಹರಿಸಿಗ್ವಾಲಿಯರ್‌ವಿದ್ಯಾರ್ಥಿನಿಸಾಮೂಹಿಕ ಅತ್ಯಾಚಾರ
Advertisement
Next Article