ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಕಾವೇರಿ ನೀರಿನಿಂದ ʼಕಾರುʼ ಸ್ವಚ್ಛಗೊಳಿಸಿದ ಮಾಲೀಕರಿಗೆ 5 ಸಾವಿರ ದಂಡ ಹಾಕಿದ ಜಲಮಂಡಳಿ

ಕಾವೇರಿ ನೀರಿನಿಂದ ಕಾರನ್ನು ಸ್ವಚ್ಛಗೊಳಿಸಿದ ಮೂವರು ಕಾರು ಮಾಲಕರಿಗೆ ಬೆಂಗಳೂರು ಜಲಮಂಡಳಿ 5 ಸಾವಿರ ರೂ. ದಂಡ ವಿಧಿಸಿರುವ ಘಟನೆ ನಡೆದಿದೆ.
11:30 AM Mar 24, 2024 IST | Chaitra Kulal

ಬೆಂಗಳೂರು: ಕಾವೇರಿ ನೀರಿನಿಂದ ಕಾರನ್ನು ಸ್ವಚ್ಛಗೊಳಿಸಿದ ಮೂವರು ಕಾರು ಮಾಲಕರಿಗೆ ಬೆಂಗಳೂರು ಜಲಮಂಡಳಿ 5 ಸಾವಿರ ರೂ. ದಂಡ ವಿಧಿಸಿರುವ ಘಟನೆ ನಡೆದಿದೆ.

Advertisement

ಸದಾಶಿವನಗರದಲ್ಲಿ ಕಾರನ್ನು ಸ್ವಚ್ಛಗೊಳಿಸಿದ ಮಹಿಳೆಗೆ ಸ್ಥಳದಲ್ಲೇ 5 ಸಾವಿರ ದಂಡ ವಿಧಿಸಿದೆ. ಮಹಾದೇವಪುರ ಮತ್ತು ಡಾಲರ್ಸ್ ಕಾಲೋನಿಯಲ್ಲಿ ಇಬ್ಬರಿಗೆ ದಂಡ ವಿಧಿಸಲಾಗಿದೆ. ಕಾರ್ ವಾಶ್, ಹೂ ತೋಟಕ್ಕೆ ಕಾವೇರಿ ನೀರು ಬಳಸದಂತೆ ಈಗಾಗಲೇ ಜಲಮಂಡಳಿ ಈಗಾಗಲೇ ಸೂಚನೆ ನೀಡಿದ್ದು, ಸೂಚನೆ ಮೀರಿ ಕಾರನ್ನು ಸ್ವಚ್ಛ ಮಾಡಿದ್ದಕ್ಕೆ ದಂಡ ವಿಧಿಸಿ ಎಚ್ಚರಿಕೆ ನೀಡಿದೆ.

ವಾಹನ ತೊಳೆಯಲು, ತೋಟಗಾರಿಕೆ, ಫ್ಲಶ್ ಮಾಡಲು, ಪಾರ್ಕಿಂಗ್ ಪ್ರದೇಶವನ್ನು ಸ್ವಚ್ಛಗೊಳಿಸಲು ಹಾಗೂ ಇತ್ಯಾದಿ ಬಳಕೆಗೆ ಕುಡಿಯುವ ನೀರನ್ನು ಬಳಸದಂತೆ ಸಾರ್ವಜನಿಕ ಹಿತಾಸಕ್ತಿಯಿಂದ ಜಲಮಂಡಳಿ ಪ್ರಕಟಣೆಯ ಮೂಲಕ ನಿಷೇಧ ಈಗಾಗಲೇ ಆದೇಶವನ್ನು ಜಾರಿ ಮಾಡಿದೆ.

Advertisement

Advertisement
Tags :
CARcleanLatestNewsNewsKarnatakaWARNINGWATERWater Boardಬೆಂಗಳೂರು
Advertisement
Next Article