For the best experience, open
https://m.newskannada.com
on your mobile browser.
Advertisement

ಮಸೀದಿ ಒಳಗೆ ನುಗ್ಗಿ ಮಕ್ಕಳ ಮುಂದೆ ದೊಣ್ಣೆಗಳಿಂದ ಹೊಡೆದು ಧರ್ಮಗುರುವಿನ ಕೊಲೆ

ಅಕ್ರಮವಾಗಿ ಮಸೀದಿ ಒಳಗೆ ನುಗ್ಗಿದ ಮೂವರು ಮಾಸ್ಕ್​ ಧರಿಸಿದ ದುಷ್ಕರ್ಮಿಗಳು ಅಮಾನುಷವಾಗಿ ದೊಣ್ಣೆಗಳಿಂದ ಹೊಡೆದು ಧರ್ಮಗುರುವನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಈ ಘಟನೆಯು ರಾಜಸ್ಥಾನದ ರಾಮಗಂಜ್‌ನ ಕಾಂಚನ್ ನಗರದಲ್ಲಿನ ಮಸೀದಿಯಲ್ಲಿ ನಡೆದಿದೆ.
01:55 PM Apr 29, 2024 IST | Ashitha S
ಮಸೀದಿ ಒಳಗೆ ನುಗ್ಗಿ ಮಕ್ಕಳ ಮುಂದೆ ದೊಣ್ಣೆಗಳಿಂದ ಹೊಡೆದು ಧರ್ಮಗುರುವಿನ ಕೊಲೆ

ನವದೆಹಲಿ: ಅಕ್ರಮವಾಗಿ ಮಸೀದಿ ಒಳಗೆ ನುಗ್ಗಿದ ಮೂವರು ಮಾಸ್ಕ್​ ಧರಿಸಿದ ದುಷ್ಕರ್ಮಿಗಳು ಅಮಾನುಷವಾಗಿ ದೊಣ್ಣೆಗಳಿಂದ ಹೊಡೆದು ಧರ್ಮಗುರುವನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಈ ಘಟನೆಯು ರಾಜಸ್ಥಾನದ ರಾಮಗಂಜ್‌ನ ಕಾಂಚನ್ ನಗರದಲ್ಲಿನ ಮಸೀದಿಯಲ್ಲಿ ನಡೆದಿದೆ.

Advertisement

ಧರ್ಮಗುರು ಮೊಹ್ಮದ್​ ಮಹೀರ್ (30) ಕೊಲೆಯಾದ ವ್ಯಕ್ತಿ. ಧರ್ಮಗುರು ತನ್ನ 6 ಮಕ್ಕಳೊಂದಿಗೆ ಮಸೀದಿ ಒಳಗೆ ಮಲಗಿಕೊಂಡಿರುತ್ತಾರೆ. ಈ ವೇಳೆ ಮಾಸ್ಕ್​ ಧರಿಸಿಕೊಂಡು ಬಂದ ಮೂವರು ಅಪರಿಚಿತ ದುಷ್ಕರ್ಮಿಗಳು ಧರ್ಮಗುರುವಿನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.

ಆಗ ಮಕ್ಕಳು ಸಹಾಯಕ್ಕಾಗಿ ಕಿರುಚಲು ಪ್ರಾರಂಭಿಸಿದಾಗ ಸೌಂಡ್ ಮಾಡಬಾರದು ಎಂದು ಮಕ್ಕಳಿಗೆ ಜೀವ ಬೆದರಿಕೆ ಹಾಕಿದ್ದಾರೆ. ಅಲ್ಲದೇ ಮೊಬೈಲ್​ ಅನ್ನು ಕಸಿದುಕೊಂಡು ಮನಸೋಯಿಚ್ಛೆ ಹಲ್ಲೆ ಮಾಡಿ ಧರ್ಮಗುರುವನ್ನು ದೊಣ್ಣೆಗಳಿಂದ ಹೊಡೆದು ಕೊಂದಿದ್ದಾರೆ ಎಂದು ಹೇಳಲಾಗಿದೆ.

Advertisement

Advertisement
Tags :
Advertisement