For the best experience, open
https://m.newskannada.com
on your mobile browser.
Advertisement

ಕರ್ನಾಟಕ ಡ್ರಗ್ಸ್ ಮುಕ್ತ ರಾಜ್ಯ ಮಾಡಲು ಪೊಲೀಸರಿಗೆ ಕರೆ ನೀಡಿದ ಸಿಎಂ

ನಗರದ ಪೊಲೀಸ್ ಮಹಾನಿರ್ದೇಶಕ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತಾಡಿದ ಸಿಎಂ ಸಿದ್ದರಾಮಯ್ಯ ಪೊಲೀಸ್ ಇಲಾಖೆಗೆ ಸಂತಸ ನೀಡಬಹುದಾದ ಕೆಲ ಘೋಷಣೆಗಳನ್ನು ಮಾಡಿದರು.
08:57 PM Jan 16, 2024 IST | Ramya Bolantoor
ಕರ್ನಾಟಕ ಡ್ರಗ್ಸ್ ಮುಕ್ತ ರಾಜ್ಯ ಮಾಡಲು ಪೊಲೀಸರಿಗೆ ಕರೆ ನೀಡಿದ ಸಿಎಂ

ಬೆಂಗಳೂರು: ನಗರದ ಪೊಲೀಸ್ ಮಹಾನಿರ್ದೇಶಕ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತಾಡಿದ ಸಿಎಂ ಸಿದ್ದರಾಮಯ್ಯ ಪೊಲೀಸ್ ಇಲಾಖೆಗೆ ಸಂತಸ ನೀಡಬಹುದಾದ ಕೆಲ ಘೋಷಣೆಗಳನ್ನು ಮಾಡಿದರು.

Advertisement

ರಾಜ್ಯ ಪೊಲೀಸ್ ಇಲಾಖೆಗೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಒಂದು ಪೊಲೀಸ್ ಭವನ ನಿರ್ಮಿಸಲು ತಮ್ಮ ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಹೇಳಿದರಾದರೂ ಅದನ್ನು ಎಲ್ಲಿ ಕಟ್ಟಲಾಗುತ್ತದೆ ಅನ್ನೋದನ್ನು ಬಹಿರಂಗಗೊಳಿಸಲಿಲ್ಲ. ಪೊಲೀಸ್ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಪೊಲೀಸ್ ಸಿಬ್ಬಂದಿಗೆ ಒಂದೊಂದು ಬೆಳ್ಳಿ ಪದಕ ನೀಡಲಾಗುವುದು ಎಂದು ಸಿಎಂ ಹೇಳಿದರು. ಹಾಗೆಯೇ, ಪೊಲೀಸರಿಗೆ ಇದುವರೆಗೆ ಪ್ರತಿ ತಿಂಗಳು ನೀಡುತ್ತಿದ್ದ ರೂ. 1,000 ಆರೋಗ್ಯ ತಪಾಸಣೆ ಭತ್ಯೆಯನ್ನು ರೂ. 1,500 ಕ್ಕೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದರು.

ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಡ್ರಗ್ಸ್ ಹಾವಳಿ ಹೆಚ್ಚಿತ್ತಿದ್ದು ರಾಜ್ಯವನ್ನು ಡ್ರಗ್ಸ್ ಮುಕ್ತ ಮಾಡಲು ಪಣತೊಡುವಂತೆ ಪೊಲೀಸರಿಗೆ ಸಿಎಂ ಕರೆನೀಡಿದರು.

Advertisement

Advertisement
Tags :
Advertisement