ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಮೂರು ದಿನಗಳ ಅದ್ಧೂರಿ ಬೆಂಗಳೂರು ಟೆಕ್ ಸಮ್ಮಿಟ್‌ಗೆ ಸಿಎಂ ಚಾಲನೆ

ಏಷ್ಯಾದ ಬೃಹತ್‌ ತಂತ್ರಜ್ಞಾನ ಸಮ್ಮೇಳನ ಬೆಂಗಳೂರು ಟೆಕ್‌ ಸಮ್ಮಿಟ್ 2023ಕ್ಕೆ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.
06:14 PM Nov 29, 2023 IST | Ashika S

ಬೆಂಗಳೂರು: ಏಷ್ಯಾದ ಬೃಹತ್‌ ತಂತ್ರಜ್ಞಾನ ಸಮ್ಮೇಳನ ಬೆಂಗಳೂರು ಟೆಕ್‌ ಸಮ್ಮಿಟ್ 2023ಕ್ಕೆ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.

Advertisement

ಬ್ರೇಕಿಂಗ್ ಬೌಂಡರೀಸ್ ಎಂಬ ಥೀಮ್‌ನೊಂದಿಗೆ ಉದ್ಘಾಟನೆಗೊಂಡ ಈ ಟೆಕ್ ಸಮ್ಮಿಟ್ ಬೆಂಗಳೂರಿನ ಅರಮನೆಯಲ್ಲಿ ಮೂರು ದಿನಗಳ ಕಾಲ ನಡೆಯಲಿದೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಐಟಿ-ಬಿಟಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಬಯೋಕಾನ್‌ ಮುಖ್ಯಸ್ಥೆ ಕಿರಣ್ ಮಜುಂದಾರ್‌ ಷಾ ಮತ್ತಿತರರು ಉಪಸ್ಥಿತರಿದ್ದರು.

Advertisement

ಬೆಂಗಳೂರು ಅರಮನೆಯಲ್ಲಿ ನಡೆಯುತ್ತಿರುವ ಈ ಟೆಕ್ ಸಮ್ಮಿಟ್‌ನಲ್ಲಿ ಒಟ್ಟು 30 ದೇಶಗಳ ಟೆಕ್ ನಾಯಕರು, ಸ್ಟಾರ್ಟಪ್‌ಗಳು ಹಾಗೂ ಹೂಡಿಕೆದಾರರು ಭಾಗಿಯಾಗಿದ್ದಾರೆ.

ಈ ಬಾರಿಯ ಟೆಕ್‌ ಶೃಂಗಸಭೆಯಲ್ಲಿ ಚಂದ್ರಯಾನ - 3, ಇಸ್ರೋ ಇಂಡಸ್ಟ್ರಿ ಪೆವಿಲಿಯನ್‌ ಪ್ರಮುಖ ಆಕರ್ಷಣೆಯಾಗಿವೆ. ಈ ಪೆವಿಲಿಯನ್‌ನಲ್ಲಿ ಬಾಹ್ಯಾಕಾಶದಲ್ಲಿ ಭಾರತದ ಸಾಧನೆಗಳ ಪ್ರದರ್ಶನ ನಡೆಯಲಿದೆ.

Advertisement
Tags :
LatetsNewsNewsKannadaಏಷ್ಯಾಟೆಕ್‌ ಸಮ್ಮಿಟ್ತಂತ್ರಜ್ಞಾನ ಸಮ್ಮೇಳನಮುಖ್ಯಮಂತ್ರಿಸಿದ್ದರಾಮಯ್ಯ
Advertisement
Next Article