For the best experience, open
https://m.newskannada.com
on your mobile browser.
Advertisement

ಊಟಿಗೆ ಪ್ರಯಾಣ ಬೆಳೆಸಲಿರುವ ಸಿಎಂ ಸಿದ್ದರಾಮಯ್ಯ

ಸಿಎಂ ಸಿದ್ದರಾಮಯ್ಯ ಲೋಕಸಭಾ ಚುನಾವಣೆಯಿಂದ ರಿಲ್ಯಾಕ್ಸ್ ಪಡೆಯಲು ಹೆಚ್‍ಎಎಲ್‍ನಿಂದ ಮೈಸೂರಿಗೆ ಪ್ರಯಾಣ ಬೆಳೆಸಿ ಅಲ್ಲಿಂದ ಊಟಿಗೆ ತೆರಳಲಿ ಮೂರು ದಿನಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ.
02:25 PM May 07, 2024 IST | Chaitra Kulal
ಊಟಿಗೆ ಪ್ರಯಾಣ ಬೆಳೆಸಲಿರುವ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಲೋಕಸಭಾ ಚುನಾವಣೆಯಿಂದ ರಿಲ್ಯಾಕ್ಸ್ ಪಡೆಯಲು ಹೆಚ್‍ಎಎಲ್‍ನಿಂದ ಮೈಸೂರಿಗೆ ಪ್ರಯಾಣ ಬೆಳೆಸಿ ಅಲ್ಲಿಂದ ಊಟಿಗೆ ತೆರಳಲಿ ಮೂರು ದಿನಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ.

Advertisement

ಸಿದ್ದರಾಮಯ್ಯ ತೆರಳುವ ಮುನ್ನ ಸಚಿವರಿಂದ ಸಿಎಂ ಭೇಟಿ ನೀಡಿದ್ದಾರೆ. ಸಚಿವರಾದ ರಾಮಲಿಂಗಾರೆಡ್ಡಿ, ಮಹದೇವಪ್ಪ, ರಾಜಣ್ಣ ಅವರು ಭೇಟಿಯಾಗಿದ್ದು, ಅನೌಪಚಾರಿಕವಾಗಿ ಸಚಿವರ ಜೊತೆ ಸಿಎಂ ಚರ್ಚೆ ಮಾಡಿದ್ದಾರೆ.

ಎರಡನೇ ಹಂತದ ಚುನಾವಣಾ ಮತದಾನ ಮತ್ತು ಪ್ರಸಕ್ತ ರಾಜಕೀಯ ಬೆಳವಣಿಗೆ ಹಾಗೂ ಪೆನ್‍ಡ್ರೈವ್ ಪ್ರಕರಣದ ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ. ಮನೆಯಿಂದ ಹೊರಟ ಸಿಎಂ ಕಾರ್ ಗ್ಲಾಸ್ ಇಳಿಸದೇ, ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ತೆರಳಿದರು. ಊಟಿ ಪ್ರವಾಸದ ವೇಳೆ ಹೆಚ್.ಸಿ ಮಹದೇವಪ್ಪ ಸಿಎಂಗೆ ಸಾಥ್ ನೀಡಲಿದ್ದಾರೆ.

Advertisement

Advertisement
Tags :
Advertisement