ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಆಹಾರದಲ್ಲಿ ಸತ್ತ ಜಿರಳೆ ಪತ್ತೆ: ವಿದ್ಯಾರ್ಥಿಗಳಿಂದ ಪ್ರತಿಭಟನೆ

ವಿದ್ಯಾರ್ಥಿಗೆ ಬಡಿಸಿದ ಆಹಾರದಲ್ಲಿ ಜಿರಳೆ ಪತ್ತೆಯಾದ ಘಟನೆ ಬೆಂಗಳೂರಿನ ಬನಶಂಕರಿಯ ಪದವಿ ವಿದ್ಯಾರ್ಥಿಗಳಿಗಾಗಿ ಇರುವ ಪೋಸ್ಟ್ ಮೆಟ್ರಿಕ್ ಹಾಸ್ಟೆಲ್‌ ನಲ್ಲಿ  ಸರ್ಕಾರಿ ಹಾಸ್ಟೆಲ್‌ನಲ್ಲಿ ನಡೆದಿದೆ.
06:09 PM Jan 27, 2024 IST | Ashika S

ಬೆಂಗಳೂರು: ವಿದ್ಯಾರ್ಥಿಗೆ ಬಡಿಸಿದ ಆಹಾರದಲ್ಲಿ ಜಿರಳೆ ಪತ್ತೆಯಾದ ಘಟನೆ ಬೆಂಗಳೂರಿನ ಬನಶಂಕರಿಯ ಪದವಿ ವಿದ್ಯಾರ್ಥಿಗಳಿಗಾಗಿ ಇರುವ ಪೋಸ್ಟ್ ಮೆಟ್ರಿಕ್ ಹಾಸ್ಟೆಲ್‌ ನಲ್ಲಿ  ಸರ್ಕಾರಿ ಹಾಸ್ಟೆಲ್‌ನಲ್ಲಿ ನಡೆದಿದೆ.

Advertisement

ಸುಮಾರು 450 ಜ‌ನ ವಿದ್ಯಾರ್ಥಿಗಳು ಇದ್ದು, ಮಧ್ಯಾಹ್ನ ಎಂದಿನಂತೆ ಊಟಕ್ಕೆ ಕುಳಿತ ವಿದ್ಯಾರ್ಥಿಗಳಿಗೆ , ಅನ್ನದ ಜೊತೆ ಸಾಂಬಾರು ಬಡಿಸುವಾಗ ತಟ್ಟೆಗೆ  ಸತ್ತ ಜಿರಳೆ ಬಿದ್ದಿದೆ. ಜಿರಳೆ ಕಂಡು  ವಿದ್ಯಾರ್ಥಿಗಳು ಬೆಚ್ಚಿಬಿದ್ದಿದ್ದಾರೆ.

ಕಳಪೆ ಆಹಾರ, ನಿರ್ಲಕ್ಷ್ಯದಿಂದ ಆಹಾರ ತಯಾರಿಸಲಾಗುತ್ತಿದೆ ಎಂದು ವಾರ್ಡನ್ ನಿರ್ಲಕ್ಷದ ವಿರುದ್ಧ ರೊಚ್ಚಿಗೆದ್ದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

Advertisement

450 ಜ‌ನ ವಿದ್ಯಾರ್ಥಿಗಳು ಇರುವ ಹಾಸ್ಟೆಲ್‌ ಸಮಸ್ಯೆಗಳ ಆಗರವಾಗಿದೆ. ವಾರ್ಡನ್ ಗೆ ಹೇಳೋರು ಇಲ್ಲ, ಕೇಳೋರು ಇಲ್ಲ ಎಂಬಂತಾಗಿದೆ. ಈ ಹಿಂದೆಯೂ ಹಲವು ಬಾರಿ ಈ ರೀತಿ ಆಗಿದ್ದರೂ ನಿರ್ಲಕ್ಷ್ಯ ಮುಂದುವರಿಸಿರುವ ಹಾಸ್ಟೆಲ್ ಸಿಬ್ಬಂದಿ. ಹೀಗಾಗಿ ವಿದ್ಯಾರ್ಥಿಗಳು ಈ ಬಾರಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಕಮಿಷನರ್ ಬರೋವರೆಗೆ ಉಪವಾಸ ಸತ್ಯಾಗ್ರಹ ಮಾಡ್ತೀವಿ ಅಂತ ಪಟ್ಟು ಹಿಡಿದು ವಿದ್ಯಾರ್ಥಿಗಳು ಧರಣಿ ನಡೆಸುತ್ತಿದ್ದಾರೆ.

Advertisement
Tags :
LatetsNewsNewsKannadaಜಿರಳೆಪತ್ತೆಪೋಸ್ಟ್ ಮೆಟ್ರಿಕ್ಪ್ರತಿಭಟನೆಹಾಸ್ಟೆಲ್
Advertisement
Next Article