For the best experience, open
https://m.newskannada.com
on your mobile browser.
Advertisement

ನೂರು ರೋಗಗಳಿಗೂ ಒಂದೇ ಔಷಧ ಪಾನೀಯ: ಎಳನೀರು

ಎಳನೀರು ನೂರು ರೋಗಗಳಿಗೆ ಒಂದೇ ಔಷಧಿ ಎಂಬುದು ಬಹಳಷ್ಟು ಮಂದಿಗೆ ತಿಳಿದಿಲ್ಲ. ಎಳನೀರಿನಲ್ಲಿ ಅಧಿಕ  ವಿಟಮಿನ್ ಹಾಗೂ ಖನಿಜವನ್ನು ಒಳಗೊಂಡಿದೆ. ಇದರ ಸೇವನೆಯಿಂದ ದೇಹಕ್ಕೆ ಆರೋಗ್ಯ ನೀಡುವುದಲ್ಲದೇ, ಫಿಟ್ನೆಸ್‌ಗೂ ಇದು ಉಪಯೋಗಿಯಾಗಿದೆ.
05:32 PM May 09, 2024 IST | Ashika S
ನೂರು ರೋಗಗಳಿಗೂ ಒಂದೇ ಔಷಧ ಪಾನೀಯ  ಎಳನೀರು

ಎಳನೀರು ನೂರು ರೋಗಗಳಿಗೆ ಒಂದೇ ಔಷಧಿ ಎಂಬುದು ಬಹಳಷ್ಟು ಮಂದಿಗೆ ತಿಳಿದಿಲ್ಲ. ಎಳನೀರಿನಲ್ಲಿ ಅಧಿಕ  ವಿಟಮಿನ್ ಹಾಗೂ ಖನಿಜವನ್ನು ಒಳಗೊಂಡಿದೆ. ಇದರ ಸೇವನೆಯಿಂದ ದೇಹಕ್ಕೆ ಆರೋಗ್ಯ ನೀಡುವುದಲ್ಲದೇ, ಫಿಟ್ನೆಸ್‌ಗೂ ಇದು ಉಪಯೋಗಿಯಾಗಿದೆ.

Advertisement

ಸಾಮಾನ್ಯವಾಗಿ ಆರೋಗ್ಯದಲ್ಲಿ ಏರುಪೇರಾದರೆ, ನಿಶಕ್ತಿ ಕಾಣಿಸಿದರೆ, ಉಷ್ಣದ ತೊಂದರೆ ಕಂಡು ಬಂದರೆ ಮೊದಲಿಗೆ ಎಳನೀರು  ನಮಗೆ ನೆನಪಾಗುತ್ತದೆ.  ಅದರಲ್ಲೂ ಬೇಸಿಗೆ ಕಾಲದಲ್ಲಿ ಎಳನೀರಿಗೆ ಎಲ್ಲಿಲ್ಲದ ಬೇಡಿಕೆ ಕಂಡು ಬರುತ್ತದೆ. ಬಿಸಿಲಿಗೆ ದೇಹ ತಂಪನ್ನು ಬಯಸುತ್ತದೆ. ದೇಹದ ಉಷ್ಣಾಂಶವನ್ನು ತಂಪುಗೊಳಿಸಬೇಕಾದರೆ ಎಳನೀರು ಅತ್ಯಗತ್ಯ. ಬೇಸಿಗೆಯ ದಿನಗಳಲ್ಲಿ ಇತರೆ ಪಾನೀಯಗಳನ್ನು ಕುಡಿಯುವ ಬದಲು ಹೆಚ್ಚಾಗಿ ಎಳನೀರನ್ನು ಸೇವಿಸಿದರೆ ಆರೋಗ್ಯದ ಹಿತದೃಷ್ಠಿಯಿಂದ ಉತ್ತಮ.

ಎಳನೀರು ಕೇವಲ ಬಾಯಾರಿಕೆಯನ್ನು ಮಾತ್ರ ನೀಗಿಸದೆ, ಆರೋಗ್ಯದ ದೃಷ್ಟಿಯಿಂದಲೂ ಅತಿ ಉತ್ತಮವಾಗಿದೆ.  ಗರ್ಭಿಣಿ ಮಹಿಳೆ ಇದನ್ನು ನಿಯಮಿತವಾಗಿ ಸೇವಿಸಿದರೆ ಸುಂದರ ಹಾಗೂ ಸ್ವಾಸ್ಥ್ಯ ಮಗು ಹುಟ್ಟಲಿದೆ. ಈ ಎಲ್ಲ ಗುಣ ಹೊಂದಿರುವುದರಿಂದಲೇ ತೆಂಗಿನ ಮರವನ್ನು ಕಲ್ಪವೃಕ್ಷವೆಂತಲೇ ಕರೆಯಲಾಗುತ್ತದೆ. ಧಾರ್ಮಿಕ ಮಹತ್ವದ ಜೊತೆಗೆ ಔಷಧಿಯ ಗುಣವನ್ನು ಹೊಂದಿದ್ದು, ವಿಟಮಿನ್, ಪೊಟಾಶಿಯಂ, ಫೈಬರ್, ಕ್ಯಾಲ್ಸಿಯಂ, ಮೆಗ್ನೀಶಿಯಂ ಮತ್ತು ಖನಿಜ ಗುಣವನ್ನು ಹೊಂದಿದೆ.

Advertisement

ತೆಂಗಿನಲ್ಲಿ ಕೊಬ್ಬು ಹಾಗೂ ಕೊಲೆಸ್ಟ್ರಾಲ್ ಅಂಶವಿಲ್ಲ, ಹಾಗಾಗಿ ಬೊಜ್ಜು ಕರಗಲು ಸಹಾಯ  ಮಾಡುತ್ತದೆ. ಬೇಸಿಗೆಯಲ್ಲಿ ನೀರು ಸೇವನೆಗಿಂತ ಎಳನೀರು ಸೇವನೆಯಿಂದ ಹೆಚ್ಚು ಖುಷಿ ಕೊಡಲಿದೆ. ಕೇವಲ ಖುಷಿಯಲ್ಲದೇ ದೇಹವನ್ನು ಲವಲವಿಕೆಯಿಂದಲೂ ಇಡಲಿದೆ. ಆರೋಗ್ಯವಷ್ಟೇ ಅಲ್ಲದೆ ಇದರ ಸೇವನೆಯಿಂದ ಮುಖದ ತ್ವಚೆಯನ್ನು ಹೊಂದಿದೆ.

ಶಕ್ತಿ ನೀಡುವ ಗುಣ ಹೊಂದಿರುವ ಎಳನೀರುನ್ನು ವ್ಯಾಯಾಮದ ನಂತರ ಸೇವನೆ ಮಾಡುವುದು ಸೂಕ್ತ, ಅತಿ ಹೆಚ್ಚು  ವಿಟಮಿನ್ ಹೊಂದಿರುವ ಎಳನೀರು ಸೇವನೆ ದೇಹಕ್ಕೆ ಆರೋಗ್ಯಕರ ಎಂಬುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಬೇರೆ ತಂಪು ಪಾನೀಯಗಳನ್ನು ಸೇವಿಸುವ ಬದಲು ಎಳನೀರನ್ನು ಸೇವಿಸಿ ಆರೋಗ್ಯ ಕಾಪಾಡಿಕೊಳ್ಳುವುದು ಜಾಣತನವಾಗಿದೆ.

Advertisement
Tags :
Advertisement