For the best experience, open
https://m.newskannada.com
on your mobile browser.
Advertisement

ರೇಣುಕಾಸ್ವಾಮಿ ಕೊಲೆ ಕೇಸ್‌ : ದರ್ಶನ್‌ ಗ್ಯಾಂಗ್‌ ವಿರುದ್ಧ 200 ಸಾಕ್ಷಿಗಳ ಸಂಗ್ರಹ

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ದರ್ಶನ್‌ ಮತ್ತು ಅವರ ಗ್ಯಾಂಗ್‌ ವಿರುದ್ಧ ಇದೀಗ 200 ಸಾಕ್ಷಿಗಳು ಸಂಗ್ರಹವಾಗಿವೆ. ಇದರಿಂದ ತೀರ್ಪುಗೆ ಕಠಿಣ ನಿರ್ಧಾರ
07:38 AM Jul 07, 2024 IST | Nisarga K
ರೇಣುಕಾಸ್ವಾಮಿ ಕೊಲೆ ಕೇಸ್‌   ದರ್ಶನ್‌ ಗ್ಯಾಂಗ್‌ ವಿರುದ್ಧ 200 ಸಾಕ್ಷಿಗಳ ಸಂಗ್ರಹ
ರೇಣುಕಾಸ್ವಾಮಿ ಕೊಲೆ ಕೇಸ್‌ : ದರ್ಶನ್‌ ಗ್ಯಾಂಗ್‌ ವಿರುದ್ಧ 200 ಸಾಕ್ಷಿಗಳ ಸಂಗ್ರಹ

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ದರ್ಶನ್‌ ಮತ್ತು ಅವರ ಗ್ಯಾಂಗ್‌ ವಿರುದ್ಧ ಇದೀಗ 200 ಸಾಕ್ಷಿಗಳು ಸಂಗ್ರಹವಾಗಿವೆ. ಇದರಿಂದ ತೀರ್ಪುಗೆ ಕಠಿಣ ನಿರ್ಧಾರ ತೆಗೆದುಕೊಳ್ಳುವ ಸಂದರ್ಭ ಕೂಡ ಬರಬಹುದು.

Advertisement

ಕೊಲೆ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ರಂಗಕ್ಕಿಳಿದ ವಿಜಯನಗರ ಉಪವಿಭಾಗದ ಎಸಿಪಿ ಚಂದನ್‌ ಕುಮಾರ್‌ ಮತ್ತು ತಂಡ ಪ್ರಕರಣದಲ್ಲಿ ಆರೋಪಿಗಳಿಗೆ ಕಠಿನ ಶಿಕ್ಷೆಗೆ ಅಗತ್ಯವಿರುವ ಎಲ್ಲ ರೀತಿಯ ಸಾಕ್ಷ್ಯಗಳನ್ನು ಸಂಗ್ರಹಿಸಿದೆ.

ಇದುವರೆಗೂ 80ಕ್ಕೂ ಅಧಿಕ ವಸ್ತುಗಳು (ಕೃತ್ಯಕ್ಕೆ ಬಳಸಿದ್ದ ದೊಣ್ಣೆ, ಮರದ ಪಟ್ಟಿಗಳು ಸೇರಿ ಎಲ್ಲ ರೀತಿಯ) ಮತ್ತು ಪಟ್ಟಣಗೆರೆಯ ಶೆಡ್‌ನ‌ ಭದ್ರತಾ ಸಿಬಂದಿ, ಮೃತದೇಹ ಕಂಡ ಅಪಾರ್ಟ್‌ಮೆಂಟ್‌ನ ಭದ್ರತಾ ಸಿಬಂದಿ, ಫ‌ುಡ್‌ ಡೆಲಿವರಿ ಬಾಯ್‌, ದರ್ಶನ್‌ಗೆ ಹಣ ಸರಬರಾಜು ಮಾಡಿದ ಆತನ ಸ್ನೇಹಿತ ಮೋಹನ್‌ ರಾಜ್‌, ಹಾಸ್ಯ ನಟ ಚಿಕ್ಕಣ್ಣ ಹಾಗೂ ಹತ್ಯೆಗೂ ಮುನ್ನ ಪಾರ್ಟಿ ಮಾಡಿದ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ನ ಮಾಲೀಕರು, ಸಿಬಂದಿ, ಚಿತ್ರದುರ್ಗದಲ್ಲಿ ರಾಘವೇಂದ್ರ ಕುಟುಂಬ, ರೇಣುಕಾಸ್ವಾಮಿ ಕುಟುಂಬ ಸದಸ್ಯರು, ದರ್ಶನ್‌ ಪತ್ನಿ ವಿಜಯಲಕ್ಷ್ಮೀ, ಡೇವಿಲ್‌ ನಿರ್ದೇಶಕ ಮಿಲನಾ ಪ್ರಕಾಶ್‌ ಸೇರಿ ಅಂದಾಜು 70ಕ್ಕೂ ಹೆಚ್ಚು ಮಂದಿ ಸಾಕ್ಷಿಗಳ ಹೇಳಿಕೆಯನ್ನು ಪಡೆಯಲಾಗಿದೆ.

Advertisement

ಈ ಪೈಕಿ ಕೆಲ ಪ್ರಮುಖ ಸಾಕ್ಷಿಗಳ ಹೇಳಿಕೆಯನ್ನು ಸಿಆರ್‌ಪಿಸಿ(ಈಗ ಬಿಎನ್‌ಎಸ್‌ಎಸ್‌)164 ಅಡಿಯಲ್ಲಿ ನ್ಯಾಯಾಧೀಶರ ಎದುರು ಸಂಗ್ರಹಿಸಲಾಗಿದೆ ಎಂದು ಮೂಲಗಳು ತಿಳಿಸಿ

Advertisement
Tags :
Advertisement