For the best experience, open
https://m.newskannada.com
on your mobile browser.
Advertisement

ʼನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ ಬಂಡಾಯ, ಪಕ್ಷೇತರ ಸ್ಫರ್ಧೆ ಅಲ್ಲ ಶಿಕ್ಷಕ ಪ್ರತಿನಿಧಿಯಾಗಿ ಸ್ಫರ್ಧೆʼ

ನೈಋತ್ಯ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರದಲ್ಲಿ ನಡೆಯುವ ಚುನಾವಣೆಗೆ ಈ ಬಾರಿ ಕರಾವಳಿ ಜಿಲ್ಲೆೆಯನ್ನು ಕಡೆಗಣಿಸಲಾಗಿದೆ. ಯಾವುದೇ ರಾಷ್ಟ್ರೀಯ ಪಕ್ಷಗಳು ಕರಾವಳಿ ಜಿಲ್ಲೆೆಗಳಲ್ಲಿ ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರಗಳಿಗೆ ಪ್ರಾಾತಿನಿಧ್ಯ ನೀಡದೆ ನಿರ್ಲಕ್ಷ್ಯ ಮಾಡಲಾಗಿದೆ.  ಈ ಹಿನ್ನೆೆಲೆಯಲ್ಲಿ ಶಿಕ್ಷಕರ ಧ್ವನಿಯಾಗಿ ಕರಾವಳಿಯ ಸ್ವಾಾಭಿಮಾನದ ಹಿನ್ನಲೆಯಲ್ಲಿ ನೈಋತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿಿದ್ದೇನೆ ಎಂದು ಮಂಗಳೂರು ವಿ.ವಿ. ಮಾಜಿ ಸಿಂಡಿಕೇಟ್  ಸದಸ್ಯ ಎಸ್.ಆರ್. ಹರೀಶ್ ಆಚಾರ್ಯ ಹೇಳಿದರು.
10:17 AM May 15, 2024 IST | Ashitha S
ʼನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ ಬಂಡಾಯ  ಪಕ್ಷೇತರ ಸ್ಫರ್ಧೆ ಅಲ್ಲ ಶಿಕ್ಷಕ ಪ್ರತಿನಿಧಿಯಾಗಿ ಸ್ಫರ್ಧೆʼ

ಮಂಗಳೂರು: ನೈಋತ್ಯ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರದಲ್ಲಿ ನಡೆಯುವ ಚುನಾವಣೆಗೆ ಈ ಬಾರಿ ಕರಾವಳಿ ಜಿಲ್ಲೆೆಯನ್ನು ಕಡೆಗಣಿಸಲಾಗಿದೆ. ಯಾವುದೇ ರಾಷ್ಟ್ರೀಯ ಪಕ್ಷಗಳು ಕರಾವಳಿ ಜಿಲ್ಲೆೆಗಳಲ್ಲಿ ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರಗಳಿಗೆ ಪ್ರಾಾತಿನಿಧ್ಯ ನೀಡದೆ ನಿರ್ಲಕ್ಷ್ಯ ಮಾಡಲಾಗಿದೆ.  ಈ ಹಿನ್ನೆೆಲೆಯಲ್ಲಿ ಶಿಕ್ಷಕರ ಧ್ವನಿಯಾಗಿ ಕರಾವಳಿಯ ಸ್ವಾಾಭಿಮಾನದ ಹಿನ್ನಲೆಯಲ್ಲಿ ನೈಋತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿಿದ್ದೇನೆ ಎಂದು ಮಂಗಳೂರು ವಿ.ವಿ. ಮಾಜಿ ಸಿಂಡಿಕೇಟ್  ಸದಸ್ಯ ಎಸ್.ಆರ್. ಹರೀಶ್ ಆಚಾರ್ಯ ಹೇಳಿದರು.

Advertisement

ಮಂಗಳವಾರ ನಡೆದ ಪತ್ರಿಿಕಾಗೋಷ್ಠಿಿಯಲ್ಲಿ ಮಾತನಾಡಿದ ಅವರು, ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಸಮಸ್ಯೆೆಗಳಿದ್ದು, ಅವುಗಳನ್ನು ಸರಕಾರದ ಮುಂದಿಡಬೇಕಿದೆ. ಶಿಕ್ಷಕರ ಧ್ವನಿಯಾಗಿ ಕೆಲಸ ನಿರ್ವಹಿಸಬೇಕು ಎಂಬ ಉದ್ದೇಶಕ್ಕೆೆ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಮೇ ೧೫ಕ್ಕೆೆ ನಾಮಪತ್ರ ಸಲ್ಲಿಸುತ್ತೇನೆ. ನಾನು ಎಬಿವಿಪಿ, ಸಹಕಾರ ಭಾರತಿ ಹಿನ್ನೆೆಲೆಯಿಂದ ಬಂದವನು. ನಾನು ಬಂಡಾಯ, ಪಕ್ಷೇತರನಾಗಿ ಸ್ಪರ್ಧಿಸುತ್ತಿಿಲ್ಲ,
ಬದಲಾಗಿ ‘ಅಭ್ಯರ್ಥಿ’ಯಾಗಿ ಸ್ಪರ್ಧಿಸುತ್ತಿಿದ್ದೇನೆ.  ನನ್ನ ಸ್ಪರ್ಧೆಯ ಕುರಿತು ಬಿಜೆಪಿ ಹಿರಿಯ ಮುಖಂಡರ ಬಳಿ ಈ ಹಿಂದೆಯೇ ಹೇಳಿದ್ದೆೆ. ಕಳೆದ ಕೆಲ ತಿಂಗಳಿನಿಂದ ಕರಾವಳಿಯ ವಿವಿಧ ಕಡೆಗಳಿಗೆ ಪ್ರವಾಸ ಮಾಡಿ, ಶಿಕ್ಷಣ ಕ್ಷೇತ್ರದ ಸಮಸ್ಯೆೆಯ ಬಗ್ಗೆೆ ತಿಳಿದುಕೊಂಡಿದ್ದೇನೆ ಎಂದರು.
ಶಿಕ್ಷಕರ ಮತವನ್ನು ಹಣ, ಹೆಂಡ ಮುಂತಾದ ಆಮಿಷಗಳಿಂದ ಕೊಂಡುಕೊಳ್ಳಬಹುದು, ಈ ಮೂಲಕ ಶಿಕ್ಷಕರ ಕ್ಷೇತ್ರದಲ್ಲಿಯೂ ಚುನಾವಣೆಯನ್ನು ನಡೆಸಬಹುದು ಎಂಬ ಮಾನಸಿಕತೆ  ಪ್ರತಿನಿಧಿಸುವ ಅಭ್ಯರ್ಥಿಗಳಲ್ಲಿ ಮೂಡಿರುವುದು ಈ ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆೆ
ತಂದಿದೆ. ಇದು ಶಿಕ್ಷಕ ಸಮುದಾಯದ ಸ್ವಾಾಭಿಮಾನವನ್ನು ಕೆದಕಿದೆ. ಆದ್ದರಿಂದ ಈಚುನಾವಣೆಯಲ್ಲಿ ಶಿಕ್ಷಣ ಕ್ಷೇತ್ರ ಮತ್ತು ಶಿಕ್ಷಣ ಸಮುದಾಯದ ಮ ಹತ್ವ ಹಾಗೂ ಸ್ವಾಾಭಿಮಾನವನ್ನು ಎತ್ತಿಿ ಹಿಡಿಯುವ ಕೆಲಸ ಆಗಬೇಕಾಗಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರವು ಗೊಂದಲದ ಗೂಡಾಗಿದೆ. ಈ ಕ್ಷೇತ್ರದ ಸಮಸ್ಯೆೆಗಳು ಹೆಚ್ಚೆೆಚ್ಚು ಸಂಕೀರ್ಣತೆಗೊಳ್ಳುತ್ತಿಿದೆ. ಆಯ್ಕೆೆ ಮಾಡಿದ
ಪ್ರತಿನಿಧಿಗಳು ನಮ್ಮ ಕೈಗೆಟುಕವಂತಿರಬೇಕು. ನಮ್ಮ ಜ್ವಲಂತ ಸಮಸ್ಯೆೆಗಳಿಗೆ ಧ್ವನಿಯಾಗಿ ಕೆಲಸ ಮಾಡುವಂತವರಿರಬೇಕು. ಆದ್ದದರಿಂದ ಈ ಬಾರಿ ಬದಲಾವಣೆಯ ಅವಶ್ಯಕತೆ ಇದೆ ಎಂಬ ಕೂಗು  ಕೇಳಿ ಬರುತ್ತಿಿದೆ. ಶಿಕ್ಷಕರೆಲ್ಲರೂ ಸಮರ್ಥ ಅಭ್ಯರ್ಥಿಯ ಹುಡುಕಾಟದಲ್ಲಿದ್ದಾಾರೆ. ಕಳೆದ ಸುಮಾರು ೨೦ ವರ್ಷಗಳಿಂದ ಈ ಭಾಗದಲ್ಲಿ ವಿದ್ಯಾಾರ್ಥಿ ಮುಖಂಡನಾಗಿ, ಅಧ್ಯಾಾಪಕರ  ಸಂಘಟನೆಗಳೊಂದಿಗೆ ನಿರಂತರ ಸಂಪರ್ಕವನ್ನಿಿಟ್ಟುಕೊಂಡು ಮಂಗಳೂರು ವಿ.ವಿ. ಸಿಂಡಿಕೇಟ್ ಸದಸ್ಯನಾಗಿಯೂ ಸೇವೆ ಸಲ್ಲಿಸಿ, ಶಿಕ್ಷಣ ಕ್ಷೇತ್ರ ಮತ್ತು ಶಿಕ್ಷಕ ಸಮುದಾಯದ ಹಲವಾರು  ಸಮಸ್ಯೆೆಗಳಿಗೆ ಧ್ವನಿಯಾಗಿ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಈ ಮೂಲಕ ಶಿಕ್ಷಕ ಸಮುದಾಯಕ್ಕೆೆ ಸೂಕ್ತ ನಾಯಕತ್ವವನ್ನು ನೀಡುವ ಪ್ರಯತ್ನವನ್ನು ಮಾಡಿದ್ದೇನೆ ಎಂದು ತಿಳಿಸಿದರು.

Advertisement

ಶಿಕ್ಷಕ ಕ್ಷೇತ್ರದ ಚುನಾವಣೆಯ ಸಮಯದಲ್ಲಿ ಹಣ, ಉಡುಗೊರೆ ಸೇರಿದಂತೆ ಹಲವು ಆಮಿಷಗಳನ್ನು ಒಡ್ಡಿ ಅವರನ್ನು ಸೆಳೆಯುವ ಮೂಲಕ ಅಡ್ಡದಾರಿಯಲ್ಲಿ ಚುನಾವಣೆಯನ್ನು ಗೆಲ್ಲುವ ಪ್ರಯತ್ನ ಬೆಳೆಯುತ್ತಿದೆ. ಇದರಿಂದ ಆಯ್ಕೆೆಯಾದ ಅಭ್ಯರ್ಥಿಗಳಿಗೆ ಶಿಕ್ಷಕ ಸಮುದಾಯದ
ಸಮಸ್ಯೆೆಗಳನ್ನು ಪ್ರತಿನಿಧಿಸುವುದು ಪ್ರಾಾಶಸ್ತ್ಯವಾಗಿ ಉಳಿದಿಲ್ಲ. ಇದರಿಂದ ಶಿಕ್ಷಕರ ಸಮಸ್ಯೆೆಗಳು ಇನ್ನೂ ಕೂಡ ಜೀವಂತವಾಗಿಯೇ ಉಳಿದಿದೆ. ಶಿಕ್ಷಕರು ಯಾವುದೇ ಆಮಿಷಗಳಿಗೆ ಬಲಿಯಾಗದೇ ಶಿಕ್ಷಕ ವೃತ್ತಿಯನ್ನು ಗೌರವಿಸುವ ಮತ್ತು ಅವರ ಸಮಸ್ಯೆೆಗಳಿಗೆ ನಿರಂತರ ಧ್ವನಿಯಾಗಿ ಕೆಲಸ ಮಾಡುವ ಪ್ರತಿನಿಧಿಯನ್ನು ಆರಿಸಿಕೊಂಡರೆ ಮಾತ್ರ ಹಲವಾರು ವರ್ಷಗಳಿಂದ ಬಾಕಿ ಉಳಿದಿರುವ ಸಮಸ್ಯೆೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂದರು. ಪತ್ರಿ ಕಾಗೋಷ್ಠಿಿಯಲ್ಲಿ ಡಾ| ರಾಜಮೋಹನ್ ರಾವ್, ಜ್ಯೋೋತಿ ರೈ, ನಿತೀಶ್ ಸಾಲ್ಯಾಾನ್,
ಜಿತಿನ್ ಜಿಜೋ ಇದ್ದರು.

Advertisement
Tags :
Advertisement