ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಕೆಂಪೇಗೌಡರ ಬಗ್ಗೆ ಅವಹೇಳನಕಾರಿ ಪೋಸ್ಟ್: ನಟ ಚೇತನ್ ವಿರುದ್ಧ ದೂರು ದಾಖಲು

ನಕಾರಾತ್ಮಕ ಸುದ್ದಿಗಳಿಗೆ ಸದಾ ಚರ್ಚೆಯಲ್ಲಿರುವ ಸ್ಯಾಂಡಲ್​ವುಡ್ ನಟ ಚೇತನ್ ಅಹಿಂಸಾ ವಿರುದ್ಧ ಈಗ ದೂರು ದಾಖಲಾಗಿದೆ.
08:23 AM Dec 17, 2023 IST | Ashika S

ಬೆಂಗಳೂರು: ನಕಾರಾತ್ಮಕ ಸುದ್ದಿಗಳಿಗೆ ಸದಾ ಚರ್ಚೆಯಲ್ಲಿರುವ ಸ್ಯಾಂಡಲ್​ವುಡ್ ನಟ ಚೇತನ್ ಅಹಿಂಸಾ ವಿರುದ್ಧ ಈಗ ದೂರು ದಾಖಲಾಗಿದೆ.

Advertisement

ನಾಡಪ್ರಭು ಕೆಂಪೇಗೌಡ ಅವರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ  ಅವಹೇಳನಕಾರಿ ಪೋಸ್ಟ್ ಹಾಕಿ  ಅಗೌರವ ತೋರಿದ್ದಾರೆಂದು ಆರೋಪಿಸಿ ವಕೀಲ ಆರ್​ಎಲ್​ಎನ್ ಮೂರ್ತಿ  ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಫೇಸ್​ಬುಕ್ ಖಾತೆಯಲ್ಲಿ ಇಬ್ಬರು ಯೋಧರ ಕಥೆ ಎಂದು ಬರೆದುಕೊಂಡು, ಬೆಂಗಳೂರು ನಿರ್ಮಾತೃ ಕೆಂಪೇಗೌಡರನ್ನು ಅತ್ಯಲ್ಪ ಐತಿಹಾಸಿಕ ವ್ಯಕ್ತಿ ಎಂದು ಜರಿದು ಟಿಪ್ಪು ಸುಲ್ತಾನ್​ನನ್ನು ಐತಿಹಾಸಿಕವಾಗಿ ಬಹಳ ಮಹತ್ವದ ವ್ಯಕ್ತಿ ಎಂದು ಹೇಳಿಕೊಂಡಿದ್ದಾರೆ.

Advertisement

ಸದ್ಯ, ವಕೀಲ ಆರ್​ಎಲ್​ಎನ್​ ಮೂರ್ತಿ ಅವರು ನೀಡಿದ ದೂರನ್ನು ಸ್ವೀಕರಿಸಿದ ಶೇಷಾದ್ರಿಪುರಂ ಠಾಣಾ ಪೊಲೀಸರು ನಟ ಚೇತನ್ ಅಹಿಂಸಾ ವಿರುದ್ಧ ಎನ್​ಸಿಆರ್​ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಚೇತನ್ ಪೋಸ್ಟ್​​ನಲ್ಲಿ ಏನಿದೆ?: ಕೆಂಪೇಗೌಡ- ಊಳಿಗಮಾನ್ಯ ಜಾತಿ ಲಾಬಿಗಳ ಪ್ರಭಾವದಿಂದ ಐಕಾನ್ ಆಗಿದ್ದಾರೆ. ಈಗ ಪ್ರಮುಖ ಕರ್ನಾಟಕದ ಐಕಾನ್ ಆಗಿರುವ ಅತ್ಯಲ್ಪ ಐತಿಹಾಸಿಕ ವ್ಯಕ್ತಿ. ಟಿಪ್ಪು ಸುಲ್ತಾನ್-ಒಬ್ಬ ಐತಿಹಾಸಿಕವಾಗಿ ಬಹಳ ಮಹತ್ವದ ವ್ಯಕ್ತಿ. ಅವರ ಜನ್ಮವು ಮುಸ್ಲಿಮರಾಗಿ ಇಂದಿನ ಮಾನ್ಯತೆಗೆ ಅಡ್ಡಿಯಾಗಿದೆ. ದುರದೃಷ್ಟವಶಾತ್ ಒಬ್ಬ ವ್ಯಕ್ತಿಯು ಹುಟ್ಟಿದ ಸಮುದಾಯಕ್ಕೆ ಅವನ ಅಥವಾ ಅವಳ ಸಾಮಾಜಿಕ ಕೊಡುಗೆಗಳಿಂದ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ಬರೆದುಕೊಂಡಿದ್ದರು.

Advertisement
Tags :
LatestNewsNewsKannadaಚೇತನ್ ಅಹಿಂಸಾದೂರುನಟಸ್ಯಾಂಡಲ್‌ವುಡ್‌
Advertisement
Next Article