For the best experience, open
https://m.newskannada.com
on your mobile browser.
Advertisement

ಸೋನಿಯಾ ಗಾಂಧಿಯ ತೇಜೋವಧೆ: ಬಿಜೆಪಿ ಮುಖಂಡನ ವಿರುದ್ಧ ದೂರು ದಾಖಲು

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರ ತೇಜೋವಧೆ ಮಾಡಿದ ಆರೋಪದ ಮೇಲೆ ಬಿಜೆಪಿ ಐಟಿ ಸೆಲ್ ಮುಖಂಡ ಜಯಂತ್ ಶೆಟ್ಟಿ ಅವರ ವಿರುದ್ಧ ಕಾಂಗ್ರೆಸ್ ಮುಖಂಡ ಪ್ರಕಾಶ್ ಹಾಗೂ ಕಾರ್ಯಕರ್ತರು ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
06:25 PM Mar 23, 2024 IST | Ashika S
ಸೋನಿಯಾ ಗಾಂಧಿಯ ತೇಜೋವಧೆ  ಬಿಜೆಪಿ ಮುಖಂಡನ ವಿರುದ್ಧ ದೂರು ದಾಖಲು

ಬೆಂಗಳೂರು: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರ ತೇಜೋವಧೆ ಮಾಡಿದ ಆರೋಪದ ಮೇಲೆ ಬಿಜೆಪಿ ಐಟಿ ಸೆಲ್ ಮುಖಂಡ ಜಯಂತ್ ಶೆಟ್ಟಿ ಅವರ ವಿರುದ್ಧ ಕಾಂಗ್ರೆಸ್ ಮುಖಂಡ ಪ್ರಕಾಶ್ ಹಾಗೂ ಕಾರ್ಯಕರ್ತರು ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Advertisement

ಮುಸಲ್ಮಾನರು ನಮ್ಮ ದೇಶದವರಲ್ಲ, ಸೋನಿಯಾ ಗಾಂಧಿಯವರಿಂದಲೇ ಶ್ರೀಲಂಕದಲ್ಲಿ ಎರಡು ಕೋಟಿ ಜನ ಮರಣ ಹೊಂದಿದ್ದಾರೆ ಎಂದು ಕಲಾಸಿಪಾಳ್ಯ ವಿನೋಬನಗರ ನಿವಾಸಿಯಾಗಿರುವ ಜಯಕಾಂತ ಶೆಟ್ಟಿ ಎಂಬುವರು ಕಾಂಗ್ರೆಸ್ ಪಕ್ಷದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ.

ಹಿಂದೂ ಮುಸ್ಲಿಮರಲ್ಲಿ ಘರ್ಷಣೆ ಉಂಟು ಮಾಡಲು ಪ್ರಯತ್ನಿಸಿ ಕೋಮು ಗಲಭೆಗೆ ಪ್ರಚೋದನೆ ನೀಡಿದ್ದಲ್ಲದೆ, ಸೋನಿಯಾ ಗಾಂಧಿಯವರ ತೇಜೋವಧೆ ಮಾಡುವಂತಹ ಹೇಳಿಕೆ ನೀಡಿ ಮತ್ತು ಚುನಾವಣೆಯ ಲಾಭ ಪಡೆದುಕೊಳ್ಳುವ ಸಲುವಾಗಿ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದಾರೆ ಎಂದು ಕಾಂಗ್ರೆಸ್​ ಕಾರ್ಯಕರ್ತರು ದೂರು ನೀಡಿದ್ದಾರೆ.

Advertisement

Advertisement
Tags :
Advertisement