For the best experience, open
https://m.newskannada.com
on your mobile browser.
Advertisement

ಹೆಚ್​​ಡಿ ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ

ಮಾಜಿ ಸಿಎಂ ಹೆಚ್​​ಡಿ ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಫೋಸ್ಟರ್ ವಾರ್‌ ಶುರು ಮಾಡಿದ್ದಾರೆ.  
07:13 AM Jan 31, 2024 IST | Ramya Bolantoor
ಹೆಚ್​​ಡಿ ಕುಮಾರಸ್ವಾಮಿ  ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ

ಬೆಂಗಳೂರು: ಮಾಜಿ ಸಿಎಂ ಹೆಚ್​​ಡಿ ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಫೋಸ್ಟರ್ ವಾರ್‌ ಶುರು ಮಾಡಿದ್ದಾರೆ.  ಆರ್​ಎಸ್​ಎಸ್​ ನ ಗೇಟ್ ಕೀಪರ್ ಆಗಿ, ವಿನಮ್ರ ಸೇವಕನಾಗಿ ಹಸಿರು ಶಾಲು ಕಿತ್ತೆಸೆದು ಕೇಸರಿ ಶಾಲು ಹಾಕೊಂಡಿದ್ದೀರಿ. ಇವಾಗ ಪಾಕಿಸ್ತಾನದ ಮೇಲೆ ಪ್ರೇಮ ಉಕ್ಕಿ ಹರಿಯುತ್ತಿದೆ ಎಂದು ಕಿಡಿಕಾರಿದ್ದಾರೆ.  ಮಂಡ್ಯದಲ್ಲಿ ಬಿಜೆಪಿ ನಾಯಕರ ಜೊತೆ ಹೋರಾಟ ಮಾಡಿದ ಬೆನ್ನೆಲ್ಲೆ ಹೆಚ್​​ಡಿ ಕುಮಾರಸ್ವಾಮಿ ವಿರುದ್ಧಎಕ್ಸ್ ಪೋಸ್ಟ್‌ ಮೂಲಕ ಕಾಂಗ್ರೆಸ್ ಕೌಂಟರ್ ಕೊಟ್ಟಿದೆ.

Advertisement

ಹೆಚ್​​ಡಿ ಕುಮಾರಸ್ವಾಮಿ ಅವರು ಬಿಜೆಪಿಯವರಿಗೆ ಕಾಂಪಿಟೇಷನ್ ಕೊಡುವಂತೆ ಬಿಜೆಪಿಯವರಿಗಿಂತ ದೊಡ್ಡ ಚಡ್ಡಿ ಹಾಕಿದ್ದಾರೆ. ಇದೇ ಕುಮಾರಸ್ವಾಮಿ ಕೆಲವೇ ತಿಂಗಳುಗಳ ಹಿಂದೆ ಆರ್​ಎಸ್​ಎಸ್ ಬಗ್ಗೆ ಯಾವ ರೀತಿ ಹೇಳಿದ್ದರು ಎಂಬುದನ್ನು ರಾಜ್ಯ ಕಂಡಿದೆ ಎಂದು ಕಾಂಗ್ರೆಸ್ ಹೇಳಿದೆ.

ಬಿಜೆಪಿಗರ ಜೀನ್ ಪಾಕಿಸ್ತಾನದ್ದು ಎಂದು ಕುಮಾರಸ್ವಾಮಿ ಅವರೇ ಹೇಳಿದ್ದರು, ಈಗ ಅದೇ ಪಾಕಿಸ್ತಾನದ ಜೀನ್ ನವರ ಜೊತೆ ಕೂಡಿಕೆ ಮಾಡಿಕೊಂಡಿದ್ದಾರೆ ಎಂದರೆ ಪಾಕಿಸ್ತಾನದ ಮೇಲೆ ಪ್ರೇಮ ಮೂಡಿದೆ ಎಂದರ್ಥ. ಈ ಪಾಕ್ ಜೀನ್ ನವರೊಂದಿಗಿನ ಪ್ರೇಮ ಮೂಡಿದ್ದರಿಂದಲೇ ಕುಮಾರಸ್ವಾಮಿಯವರಿಗೆ ರಾಷ್ಟ್ರಧ್ವಜದ ಮೇಲೆ ದ್ವೇಷ ಮೂಡಿದೆ ಎಂದು ಕಾಂಗ್ರೆಸ್  ಹೇಳಿದೆ.

Advertisement

Advertisement
Tags :
Advertisement