For the best experience, open
https://m.newskannada.com
on your mobile browser.
Advertisement

ಕಾಂಗ್ರೆಸ್‌ಗೆ 1 ವರ್ಷದಲ್ಲಿ ಒಂದೂ ಶೌಚಾಲಯ ಕಟ್ಟಲಾಗಲಿಲ್ಲ: ಸಂಜೀವ ಮಠಂದೂರು

ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಬಂದು ಒಂದು ವರ್ಷ ಆಗಿದೆ. ಆದರೆ ಇಲ್ಲಿ ಒಂದು ವರ್ಷದಲ್ಲಿ ಒಂದೂ ಶೌಚಾಲಯ ಕಟ್ಟಲು ಅವರಿಗೆ ಆಗಿಲ್ಲ. ಅಂಗನವಾಡಿ ಕಟ್ಟಡ ಬಿಡಿ ದುರಸ್ಥಿಗೂ ಹಣವಿಲ್ಲ. ಹೈನುಗಾರರಿಗೆ ಪ್ರೋತ್ಸಾಹ ಧನವಿಲ್ಲ ಹೀಗೆ ಕರ್ನಾಟಕದ ಆರ್ಥಿಕ ಸ್ಥಿತಿ ಪಾಕಿಸ್ತಾನದ ಆರ್ಥಿಕ ಸ್ಥಿತಿಯ ಹಂತಕ್ಕೆ ತಲುಪಿದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಆರೋಪಿಸಿದ್ದಾರೆ.
03:01 PM May 17, 2024 IST | Chaitra Kulal
ಕಾಂಗ್ರೆಸ್‌ಗೆ 1 ವರ್ಷದಲ್ಲಿ ಒಂದೂ ಶೌಚಾಲಯ ಕಟ್ಟಲಾಗಲಿಲ್ಲ  ಸಂಜೀವ ಮಠಂದೂರು

ಪುತ್ತೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಬಂದು ಒಂದು ವರ್ಷ ಆಗಿದೆ. ಆದರೆ ಇಲ್ಲಿ ಒಂದು ವರ್ಷದಲ್ಲಿ ಒಂದೂ ಶೌಚಾಲಯ ಕಟ್ಟಲು ಅವರಿಗೆ ಆಗಿಲ್ಲ. ಅಂಗನವಾಡಿ ಕಟ್ಟಡ ಬಿಡಿ ದುರಸ್ಥಿಗೂ ಹಣವಿಲ್ಲ. ಹೈನುಗಾರರಿಗೆ ಪ್ರೋತ್ಸಾಹ ಧನವಿಲ್ಲ ಹೀಗೆ ಕರ್ನಾಟಕದ ಆರ್ಥಿಕ ಸ್ಥಿತಿ ಪಾಕಿಸ್ತಾನದ ಆರ್ಥಿಕ ಸ್ಥಿತಿಯ ಹಂತಕ್ಕೆ ತಲುಪಿದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಆರೋಪಿಸಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸರಕಾರ ಒಂದು ವರ್ಷದಲ್ಲಿ ಎನೂ ಮಾಡಿಲ್ಲ ಎಂಬುದಕ್ಕೆ ಹಲವು ಉದಾಹರಣೆ ಇದೆ. ಇವತ್ತು ಪುತ್ತೂರಿನಲ್ಲಿ ಶಾಸಕರು ರಿಪೋರ್ಟ್ ಕಾರ್ಡ್ ಪಡೆಯಲು ಹೋಗುತ್ತಿದ್ದಾರೆ.

ಅವರು ಅಂಗನವಾಡಿ ಕಾರ್ಯಕರ್ತರು, ಅಕ್ರಮ ಸಕ್ರಮ ಅರ್ಜಿಗಾಗಿ ಅಳೆದಾಡುವವರು, ಪ್ರೋತ್ಸಾಹಧನ ಸಿಗದ ಹೈನುಗಾರರ ಮನೆಗೆ ಹೋಗಿ ರಿಪೋರ್ಟ್ ಪಡೆಯಲಿ. ಒಟ್ಟಿನಲ್ಲಿ ಕಾಂಗ್ರೆಸ್ ಸರಕಾರ ಹಿಂದೂ ವಿರೋಧಿ, ರೈತವಿರೋಧಿ, ಹಿಂದೂ ಸಂಘಟನೆಯನ್ನು ಧಮನಿಸುವ ಸರಕಾರವಾಗಿದೆ ಎಂದರು.

Advertisement

ಪುತ್ತೂರು ಶಾಸಕರಿಗೆ ಮಾತೃಪಕ್ಷದ ಬಗ್ಗೆ ಒಳವಿದೆ. ಮತ್ತೆ ಘರ್ ವಾಪಾಸಿ ಆಗುವ ಲಕ್ಷಣ ಕಾಡ್ತಾ ಇದೆ. ನಮಗೂ ಸಂತೋಷ. ಅವರು ಬರುವುದಾದರೆ ನಾವು ಖಂಡಿತಾ ಸ್ವೀಕಾರ ಮಾಡುತ್ತೇವೆ.

ಬಿಜೆಪಿ ಒಂದು ರಾಷ್ಟ್ರೀಯ ಪಾರ್ಟಿ. ಬಹಳಷ್ಟು ಹೋದವರು ಮತ್ತೆ ಬಂದಿದ್ದಾರೆ ಎಂದು ಶಾಸಕ ಅಶೋಕ್ ರೈ ಅವರು ರಿಪೋರ್ಟ್ ಕಾರ್ಡ್ ವಿಚಾರದಲ್ಲಿ ಬಿಜೆಪಿ ಮುಖಂಡರ ಮನೆಗೆ ಹೋಗ್ತಾ ಇದ್ದಾರೆ ಎಂದು ಪತ್ರಕರ್ತರ ಪ್ರಶ್ನೆಗೆ ಸಂಜೀವ ಮಠಂದೂರು ಉತ್ತರಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲದ ಅಧ್ಯಕ್ಷ ಪಿ ಜಿ ಜಗನ್ನಿವಾಸ ರಾವ್, ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ, ಬಿಜೆಪಿ ಮುಖಂಡ ಪ್ರಸನ್ನ ಕುಮಾ‌ರ್ ಮಾರ್ತ, ಮಂಡಲದ ಉಪಾಧ್ಯಕ್ಷ ಹರಿಪ್ರಸಾದ್‌ ಯಾದವ್‌ ಉಪಸ್ಥಿತರಿದ್ದರು.

Advertisement
Tags :
Advertisement