For the best experience, open
https://m.newskannada.com
on your mobile browser.
Advertisement

ಯುವಮೋರ್ಚಾದಿಂದ "ಕಾಂಗ್ರೆಸ್ ಡೇಂಜರ್" ಪೋಸ್ಟರ್ ಅಭಿಯಾನ

ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಶಾಸಕರಾದ ಡಾ.ಭರತ್ ಶೆಟ್ಟಿ ವೈ ಅವರ ನೇತೃತ್ವದಲ್ಲಿ, ಯುವಮೋರ್ಚಾ ಪೋಸ್ಟರ್ ಅಭಿಯಾನ ನಡೆಸಿದೆ.
03:24 PM Apr 23, 2024 IST | Chaitra Kulal
ಯುವಮೋರ್ಚಾದಿಂದ  ಕಾಂಗ್ರೆಸ್ ಡೇಂಜರ್  ಪೋಸ್ಟರ್ ಅಭಿಯಾನ

ಮಂಗಳೂರು: ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಶಾಸಕರಾದ ಡಾ.ಭರತ್ ಶೆಟ್ಟಿ ವೈ ಅವರ ನೇತೃತ್ವದಲ್ಲಿ, ಯುವಮೋರ್ಚಾ ಪೋಸ್ಟರ್ ಅಭಿಯಾನ ನಡೆಸಿದೆ.

Advertisement

ಕಾವೂರಿನಲ್ಲಿ ಮತದಾರರ ಮುಂದೆ ಜ್ವಲಂತ ವಾಗಿರುವ ಒಂಬತ್ತು ಸಮಸ್ಯೆಗಳನ್ನು ಮುಂದಿಟ್ಟು ಪೋಸ್ಟರ್ ಅಭಿಯಾನ ನಡೆಸುತ್ತಿದೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದು‌ ಓಲೈಕೆ ಮಾಡಿದ ಪರಿಣಾಮ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಂದಿದೆ. ಹತ್ಯೆಗಳಾಗುತ್ತಿದೆ. "ಕಾಂಗ್ರೆಸ್ ಡೇಂಜರ್" ಈ ಪಕ್ಷದ ಸಹವಾಸ ಮಾಡಬೇಡಿ‌.

ಕಾಂಗ್ರೆಸ್ ಬಂದರೆ ಮತ್ತೆ ಡೇಂಜರ್ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಆರೋಪಿಸಿದರು. ಇವರು ಕೇಳಿದ ಒಂಬತ್ತು ಪ್ರಶ್ನೆ ಯಾವುದು ಅಂತೀರಾ ಇದೇ ನೋಡಿ. ದಲಿತರ ಕಲ್ಯಾಣಕ್ಕಾಗಿಯೇ ಮೀಸಲಾಗಿದ್ದ ಹಣ ಅನ್ನರ ಪಾಲಾಗಬೇಕಾ? ಹೋಟೆಲ್ ಗೆ ಟೀ ಕುಡಿಯಲು ಹೋದ ಅಮಾಯಕರು ಬಾಂಬ್ ಸ್ಫೋಟಕ್ಕೆ ಬಲಿಯಾಗಬೇಕಾ ?. ಆಟೋದಲ್ಲಿ ಹೋದ ಪ್ರಯಾಣಿಕರು ಕುಕ್ಕರ್ ಬಾಂಬ್ ಸ್ಪೋಟಕ್ಕೆ ಬಲಿಯಾಗಬೇಕಾ? ಕಾಲೇಜಿಗೆ ಹೋದ ಹೆಣ್ಣು ಮಗಳು ಲವ್ ಜಿಹಾದ್ ಗೆ ಬಲಿಯಾಗಬೇಕಾ?.

Advertisement

Congress

ಕೆಜೆ ಹಳ್ಳಿ, ಡಿಜೆ ಹಳ್ಳಿ ಗಲಭೆಕೋರರನ್ನು ಓಲೈಸುವವರು ಬೇಕಾ?. ಕನ್ನಡಿಗರ ಪಾಲಿನ ಕಾವೇರಿ ನೀರು ಬೇರೆ ರಾಜ್ಯಕ್ಕೆ ಸೇರಬೇಕಾ?. ಮುಗ್ಧ ಜನರು ನಕ್ಸಲರಿಗೆ ಬಲಿಯಾಗುವುದನ್ನು ನೋಡಬೇಕಾ?. ವಿಧಾನಸೌಧಕ್ಕೆ ಹೋದಾಗ ಪಾಕಿಸ್ತಾನ ಜಿಂದಾಬಾದ್ ಎ೦ಬ ಘೋಷಣೆ ಕೇಳಬೇಕಾ?. ಮೇಯಲು ಹೋದ ಗೋ ಮಾತೆ ಕಸಾಯಿಖಾನೆ ಸೇರಬೇಕಾ? ಎಂದು ಪ್ರಶ್ನಿಸಿದ್ದಾರೆ.

ಇದು ಡೇಂಜರ್ ಎಚ್ಚರಿಕೆ. ಹೀಗಾಗಿ ಭದ್ರತೆ ಮತ್ತು ಸುರಕ್ಷತೆಗಾಗಿ ಬಿಜೆಪಿಗೆ ಮತ ನೀಡಿ. ಇದು ಬಿಜೆಪಿಯ ಹೊಸ ಅಭಿಯಾನವಾಗಿದೆ. ಜನರು ಎಚ್ಚೆತ್ತುಕೊಂಡು ದೇಶದ ,ಜನರ ಸುರಕ್ಷತೆಗಾಗಿ ಪ್ರಧಾನಿ ಮೋದಿ ಅವರನ್ನು ಮತ್ತೆ ಅಧಿಕಾರಕ್ಕೆ ಏರಿಸಬೇಕಿದೆ ಎಂದು ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಭರತ್ ರಾಜ್ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ತಿಲಕ್ ರಾಜ್ ಕೃಷ್ಣಾಪುರ, ರಾಜೇಶ್ ಕೊಠಾರಿ, ಸಂಗೀತ ಆರ್.ನಾಯಕ್, ಲೋಹಿತ್ ಅಮೀನ್ ಮತ್ತಿತರರು ಉಪಸ್ಥಿತರಿದ್ದರು.

Advertisement
Tags :
Advertisement