For the best experience, open
https://m.newskannada.com
on your mobile browser.
Advertisement

ಕಾಂಗ್ರೆಸ್‌ನ ನಾಲ್ಕನೆ ಪಟ್ಟಿ ಬಿಡುಗಡೆ: ಮೋದಿ ವಿರುದ್ಧ ಅಖಾಡಕ್ಕೆ ಅಜಯ್​ ರೈ

ಇದೀಗ ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದ ಕಾಂಗ್ರೆಸ್​ನ 4ನೇ ಪಟ್ಟಿ ಬಿಡುಗಡೆಯಾಗಿದ್ದು ವಾರಣಾಸಿ ಕ್ಷೇತ್ರದಿಂದ ಮೋದಿ ವಿರುದ್ಧ ಅಜಯ್​ ರೈ ಅವರು ಕಣಕ್ಕೆ ಇಳಿಯಲಿದ್ದಾರೆ. ದಿಗ್ವಿಜಯ್​ ಸಿಂಗ್ ಅವರು 31 ವರ್ಷಗಳ ಬಳಿಕ ಲೋಕಸಭಾ ಅಖಾಡಕ್ಕೆ ಇಳಿದಿದ್ದು ಮಧ್ಯಪ್ರದೇಶದ ರಾಜ್​ಘಡ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ. ತಮಿಳುನಾಡಿನಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಟಿಕೇಟ್‌ ನೀಡಲಾಗಿದೆ.
07:41 AM Mar 24, 2024 IST | Nisarga K
ಕಾಂಗ್ರೆಸ್‌ನ ನಾಲ್ಕನೆ ಪಟ್ಟಿ ಬಿಡುಗಡೆ  ಮೋದಿ ವಿರುದ್ಧ ಅಖಾಡಕ್ಕೆ ಅಜಯ್​ ರೈ
ಕಾಂಗ್ರೆಸ್‌ನ ನಾಲ್ಕನೆ ಪಟ್ಟಿ ಬಿಡುಗಡೆ: ಮೋದಿ ವಿರುದ್ಧ ಅಖಾಡಕ್ಕೆ ಅಜಯ್​ ರೈ

ಬೆಂಗಳೂರು: ಇದೀಗ ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದ ಕಾಂಗ್ರೆಸ್​ನ 4ನೇ ಪಟ್ಟಿ ಬಿಡುಗಡೆಯಾಗಿದ್ದು ವಾರಣಾಸಿ ಕ್ಷೇತ್ರದಿಂದ ಮೋದಿ ವಿರುದ್ಧ ಅಜಯ್​ ರೈ ಅವರು ಕಣಕ್ಕೆ ಇಳಿಯಲಿದ್ದಾರೆ. ದಿಗ್ವಿಜಯ್​ ಸಿಂಗ್ ಅವರು 31 ವರ್ಷಗಳ ಬಳಿಕ ಲೋಕಸಭಾ ಅಖಾಡಕ್ಕೆ ಇಳಿದಿದ್ದು ಮಧ್ಯಪ್ರದೇಶದ ರಾಜ್​ಘಡ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ. ತಮಿಳುನಾಡಿನಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಟಿಕೇಟ್‌ ನೀಡಲಾಗಿದೆ.

Advertisement

ಇದೀಗ ಕಾಂಗ್ರೆಸ್​ನಿಂದ ಸಸಿಕಾಂತ್​ ಸೈಂಥಿಲ್​ ರಾಜಕೀಯ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ತಮಿಳುನಾಡಿನ ಚೆನ್ನೈನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಇದೀಗ ಅವರಿಗೆ ಕಾಂಗ್ರೆಸ್​ ತಿರುವಳ್ಳೂರು ಲೋಕಸಭೆ ಕ್ಷೇತ್ರಕ್ಕೆ ಟಿಕೆಟ್​ ನೀಡಿದೆ.

ಇನ್ನು 4ನೇ ಪಟ್ಟಿಯಲ್ಲಿ ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರ ಹೆಸರಿದ್ದು, ಅವರು ಶಿವಗಂಗಾ ಕ್ಷೇತ್ರದಿಂದ ಮತ್ತೆ ಕಣಕ್ಕಿಳಿದಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಬಿಎಸ್‌ಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗಿದ್ದ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಆಪ್ತರೂ ಆದ ಡ್ಯಾನಿಶ್‌ ಅಲಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದೆ. ಡ್ಯಾನಿಶ್‌ ಅಲಿ ಅವರು ಉತ್ತರ ಪ್ರದೇಶ ಅಮ್ರೋಹದಿಂದ ಕಣಕ್ಕಿಳಿದಿದ್ದಾರೆ. ಆದ್ರೆ ಕಾಂಗ್ರೆಸ್‌ 4ನೇ ಪಟ್ಟಿಯಲ್ಲಿ ಕರ್ನಾಟಕದ ಬಾಕಿ ಇರುವ 4 ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಘೋಷಿಸಿಲ್ಲ.. ಲೋಕಸಭೆ ಸಮರಕ್ಕೆ ಇದುವರೆಗೆ 183 ಅಭ್ಯರ್ಥಿಗಳನ್ನು ಅಖಾಡಕ್ಕೆ ಇಳಿಸಿದೆ.

Advertisement

Advertisement
Tags :
Advertisement