For the best experience, open
https://m.newskannada.com
on your mobile browser.
Advertisement

ಕಾಂಗ್ರೆಸ್ ಕಾರ್ಯಕರ್ತನನ್ನು ಕೊಂದು ಮರಕ್ಕೆ ನೇತುಹಾಕಿದ ದುಷ್ಕರ್ಮಿಗಳು

ರೋಣ ವಿಧಾನಸಭಾ ಕ್ಷೇತ್ರದ ಡಂಬಳ ಹೋಬಳಿಯ ಗ್ಯಾರಂಟಿ ಫಲಾನುಭವಿಗಳ ಸಮಾವೇಶದ ಹೊತ್ತಿನಲ್ಲಿ ಕಾಂಗ್ರೆಸ್ ಕಾರ್ಯಕರ್ತನೊಬ್ಬನನ್ನು ಭೀಕರವಾಗಿ ಹತ್ಯೆಮಾಡಲಾಗಿದೆ.
02:34 PM Mar 12, 2024 IST | Gayathri SG
ಕಾಂಗ್ರೆಸ್ ಕಾರ್ಯಕರ್ತನನ್ನು ಕೊಂದು ಮರಕ್ಕೆ ನೇತುಹಾಕಿದ ದುಷ್ಕರ್ಮಿಗಳು

ಗದಗ: ರೋಣ ವಿಧಾನಸಭಾ ಕ್ಷೇತ್ರದ ಡಂಬಳ ಹೋಬಳಿಯ ಗ್ಯಾರಂಟಿ ಫಲಾನುಭವಿಗಳ ಸಮಾವೇಶದ ಹೊತ್ತಿನಲ್ಲಿ ಕಾಂಗ್ರೆಸ್ ಕಾರ್ಯಕರ್ತನೊಬ್ಬನನ್ನು ಭೀಕರವಾಗಿ ಹತ್ಯೆಮಾಡಲಾಗಿದೆ.

Advertisement

ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಪ್ರಮುಖ ಕಾರ್ಯಕರ್ತ ಡೋಣಿ ಗ್ರಾಮದ ಶರಣಪ್ಪ ಸಂದಿಗೌಡ್ರ ಕೊಲೆಗೀಡಾದ ವ್ಯಕ್ತಿ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ಬಳಿ ಜಮೀನೊಂದರಲ್ಲಿ ಮರಕ್ಕೆ ನೇತು ಹಾಕಿದ ಸ್ಥಿತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಶವ ಪತ್ತೆಯಾಗಿದೆ.

ಕೊಲೆಗೂ ಮುನ್ನ ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ ಮಾಡಿರುವ ದುಷ್ಕರ್ಮಿಗಳು, ಕಣ್ಣಿಗೆ ಕಾರದಪುಡಿ ಎಸೆದು ಹಲ್ಲೆ ಮಾಡಿದ್ದಾರೆ. ನಂತರ ಶವ ತೂಗು ಹಾಕಿ ವಿಕೃತಿ ಮೆರೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇಂದು ಬೆಳ್ಳಂಬೆಳಿಗ್ಗೆ ಮರದಲ್ಲಿ ನೇತಾಡುತ್ತಿತ್ತು.

Advertisement

Advertisement
Tags :
Advertisement