ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ರಾಜ್ಯಾದ್ಯಂತ ಮತ್ತೆ ಹೆಚ್ಚಾಯ್ತು ಕೊರೊನಾ ಭೀತಿ; ಹೈ ಅಲರ್ಟ್

ಕೇರಳ, ಕರ್ನಾಟಕಕ್ಕೆ ಮತ್ತೆ ಮುಳ್ಳಾಗುವ ಲಕ್ಷಣ ದಟ್ಟವಾಗಿದೆ. ರಾಜ್ಯದಲ್ಲೂ ಕೊರೊನಾ ಮಹಾಮಾರಿ ಹೆಚ್ಚುತ್ತಿದೆ. ಈಗಾಗಲೇ ಶತಕ ಬಾರಿಸಿರುವ ಕೊರೊನಾ ಮತ್ತೆ ತನ್ನ ಖಾತೆಯಲ್ಲಿ ಸಂಖ್ಯೆಗಳನ್ನು ಹೆಚ್ಚಿಸಿಕೊಂಡಿದೆ.
10:39 PM Dec 22, 2023 IST | Ashitha S

ಬೆಂಗಳೂರು: ಕೇರಳ, ಕರ್ನಾಟಕಕ್ಕೆ ಮತ್ತೆ ಮುಳ್ಳಾಗುವ ಲಕ್ಷಣ ದಟ್ಟವಾಗಿದೆ. ರಾಜ್ಯದಲ್ಲೂ ಕೊರೊನಾ ಮಹಾಮಾರಿ ಹೆಚ್ಚುತ್ತಿದೆ. ಈಗಾಗಲೇ ಶತಕ ಬಾರಿಸಿರುವ ಕೊರೊನಾ ಮತ್ತೆ ತನ್ನ ಖಾತೆಯಲ್ಲಿ ಸಂಖ್ಯೆಗಳನ್ನು ಹೆಚ್ಚಿಸಿಕೊಂಡಿದೆ.

Advertisement

ಈ ಬೆನ್ನಲ್ಲೇ ಆರೋಗ್ಯ ಇಲಾಖೆ ಅಲರ್ಟ್​ ಆಗಿದ್ದು ಹಲವು ಸೂಚನೆ ಕೊಟ್ಟಿದೆ. ಕೋವಿಡ್​ ಜೆಎನ್​.1 ಉಪತಳಿ. ಕೇರಳದಲ್ಲೇ ಈ ಹೊಸ ಅವತಾರದಲ್ಲಿ ಕೊರೊನಾ ಮಾರಿ ಪತ್ತೆಯಾದ ಬೆನ್ನಲ್ಲೇ ದೇಶಾದ್ಯಂತ ಪ್ರಕರಣಗಳ ಸಂಖ್ಯೆ ಹೆಚ್ಚಾಗ್ತಿದೆ. ಕೇರಳದಲ್ಲೇ 90 ಶೇಕಡಕ್ಕೂ ಅಧಿಕ ಕೇಸ್​ಗಳು ಪತ್ತೆಯಾಗ್ತಿದ್ದಂತೆ ಕರ್ನಾಟಕದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಈಗಾಗಲೇ ಶತಕ ದಾಟಿರುವ ಕೊರೊನಾ ತನ್ನ ಜಾಲವನ್ನು ವಿಸ್ತರಿಸುತ್ತಿದೆ.

ಕಳೆದ 24 ಗಂಟೆಗಳಲ್ಲಿ ಕೊರೊನಾ ಕೇಸ್ ಮತ್ತಷ್ಟು ಹೆಚ್ಚಳವಾಗಿದೆ. ರಾಜ್ಯದಲ್ಲಿ ಡಿಸೆಂಬರ್ 22ರಂದು ಒಟ್ಟು 78 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. 24 ಗಂಟೆಯಲ್ಲಿ ಕೊರೊನಾಗೆ ಮತ್ತೊಂದು ಬಲಿಯಾಗಿದೆ. ಬೆಂಗಳೂರಲ್ಲಿ ಬರೋಬ್ಬರಿ 68 ಹೊಸ ಕೊವಿಡ್‌ ಪ್ರಕರಣಗಳು ಪತ್ತೆಯಾಗಿದೆ.

Advertisement

ಬೆಂಗಳೂರು ಗ್ರಾಮಾಂತರ 1, ಚಿಕ್ಕಮಗಳೂರು 4, ದ.ಕನ್ನಡ 2 ಮೈಸೂರು-1, ರಾಮನಗರ -2 ಕೇಸ್ ಪತ್ತೆಯಾಗಿದೆ. ರಾಜ್ಯದಲ್ಲಿ 175 ಕೊರೊನಾ ಸಕ್ರಿಯ ಪ್ರಕರಣಗಳಿದ್ದು ಬೆಂಗಳೂರಲ್ಲಿ ಬರೋಬ್ಬರಿ 156 ಆ್ಯಕ್ಟೀವ್ ಕೇಸ್ ಇದೆ. ಇನ್ನು ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾದ ಬೆನ್ನಲ್ಲೇ ಬಿಬಿಎಂಪಿ ಫುಲ್​ ಅಲರ್ಟ್​ ಆಗಿದೆ. ಒಟ್ಟಾರೆ ಕೇರಳದಲ್ಲಿ ಕೊರೊನಾ ಮಹಾಮಾರಿ ಹೊಸ ಅವತಾರ ಎತ್ತಿದ ಬೆನ್ನಲ್ಲೇ ರಾಜ್ಯದಲ್ಲೂ ಹೈ ಅಲರ್ಟ್​ ಘೋಷಿಸಲಾಗಿದೆ.

 

Advertisement
Tags :
bengaluruBreakingNewsCOVID 19GOVERNMENTindiaKARNATAKALatestNewsNewsKannadaಕೊರೊನಾ ಭೀತಿಬೆಂಗಳೂರು
Advertisement
Next Article