ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ನ್ಯೂಸ್‌ ಕರ್ನಾಟಕ ಸಂಸ್ಥೆಯ 4 ನೇ ಕ್ರಿಸ್‌ ಮಸ್‌ ಕರೋಲ್‌ ಸ್ಪರ್ಧೆಗೆ ಕ್ಷಣಗಣನೆ

ನ್ಯೂಸ್‌ ಕರ್ನಾಟಕ ಮಾಧ್ಯಮ ಸಂಸ್ಥೆ ಸಹಯೋಗದಲ್ಲಿ ಕ್ರಿಸ್‌ಮಸ್ ಕರೋಲ್ ಸ್ಪರ್ಧೆಯ 4ನೇ ಆವೃತ್ತಿಯು ಡಿಸೆಂಬರ್ 15 ರಂದು ಪ್ರಾರಂಭವಾಗಲಿದ್ದು ವಿಭಿನ್ನ ಪ್ರತಿಭೆಗಳ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಾಗಲಿದೆ.
01:20 PM Dec 14, 2023 IST | Ashika S

ಮಂಗಳೂರು: ನ್ಯೂಸ್‌ ಕರ್ನಾಟಕ ಮಾಧ್ಯಮ ಸಂಸ್ಥೆ ಸಹಯೋಗದಲ್ಲಿ ಕ್ರಿಸ್‌ಮಸ್ ಕರೋಲ್ ಸ್ಪರ್ಧೆಯ 4ನೇ ಆವೃತ್ತಿಯು ಡಿಸೆಂಬರ್ 15 ರಂದು ಪ್ರಾರಂಭವಾಗಲಿದ್ದು ವಿಭಿನ್ನ ಪ್ರತಿಭೆಗಳ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಾಗಲಿದೆ.

Advertisement

ಕ್ರಿಸ್‌ಮಸ್ ಕರೋಲ್ಸ್ ಕಾರ್ಯಕ್ರಮಕ್ಕೆ ತೀರ್ಪುಗಾರರರಾಗಿ ಅಲಿಸ್ಟರ್ ಲಸ್ರಾದೋ, ಜಾಸ್ಮಿನ್ ಡಿಸೋಜಾ, ಜೀವನ್ ಲೋಬೋ ಪಾಲ್ಗೊಳ್ಳಲಿದ್ದಾರೆ.

ಜಸ್ಟ್‌ರೋಲ್‌ಫಿಲ್ಮ್ಸ್‌ನ ಮ್ಯಾನೇಜಿಂಗ್ ಪಾರ್ಟ್‌ನರ್ ಅಲಿಸ್ಟರ್ ಲಾಸ್ರಾದೊ ಅವರು ಗಾಯನ ಸ್ಪರ್ಧೆಯ ಹಲವು ತಂಡಗಳಿಗೆ ಯಶಸ್ವಿಯಾಗಿ ತರಬೇತಿ ನೀಡಿದ್ದಾರೆ. ಬಹುಮುಖ ಪ್ರತಿಭೆಯ ಲಾಸ್ರಾದೊ ಅವರು ಸೇಂಟ್ ಅಲೋಶಿಯಸ್ ಗೊನ್ಜಾಗಾ ಶಾಲೆಯಲ್ಲಿ ಸಂಗೀತ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬ್ಯಾಂಡ್ ಡೆಸಿಬಲ್ಸ್‌ನ ಬ್ಯಾಂಡ್ ಮ್ಯಾನೇಜರ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ ಆನ್‌ಲೈನ್ ಮತ್ತು ಆಫ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಜಾಗತಿಕವಾಗಿ 2000 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಪ್ರತಿಭಾ ಪೋಷಣೆಗೆ ಪ್ರೇರಣೆಯಾಗಿದ್ದಾರೆ.

Advertisement

ಅದೇ ರೀತಿ ಆಯ್ಕೆ ಸಮಿತಿಯಲ್ಲಿ ಅಲೋಶಿಯಸ್ ಮತ್ತು ಕಾರ್ಮೆಲ್ ಶಾಲೆಯ ಸಂಗೀತ ಶಿಕ್ಷಕಿ ಜಾಸ್ಮಿನ್ ಡಿಸೋಜಾ ಕೂಡ ಸಮಿತಿಗೆ ಸೇರಿದ್ದಾರೆ. ಅಬುಧಾಬಿಯ ಸಂಗೀತ ಶಿಕ್ಷಕರಾದ ಜೀವನ್ ಲೋಬೋ ಕೂಡ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದ ನಿರೂಪಕರಾಗಿ ಶಿಕ್ಷಣತಜ್ಞರಾದ ರೋಶನ್ ರಾಜ್ ಕಾರ್ಯನಿರ್ವಹಿಸಲಿದ್ದಾರೆ.

ಆನೇಕಲ್, ಮಂಗಳೂರು, ಹರಿಹರ, ಅತ್ತಾವರ, ಧಾರವಾಡ, ಒಡಿಶಾ ಮತ್ತು ಟೆಲ್ ಅವಿವ್, ಇಸ್ರೇಲ್‌ ಸೇರಿದಂತೆ ಜಗತ್ತಿನ ಎಲ್ಲ ಪ್ರದೇಶದ ಜನರು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಿದ್ದಾರೆ. ಆ ಮೂಲಕವಾಗಿ ಎಲ್ಲ ಸಮುದಾಯಗಳು ಭೌಗೋಳಿಕ ವೈವಿಧ್ಯವನ್ನು ಮೀರಿ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಿದ್ದಾರೆ.

Advertisement
Tags :
4ನೇ ಆವೃತ್ತಿLatetsNewsNewsKannadaಕರೋಲ್ಕ್ರಿಸ್ಮಸ್‍ನ್ಯೂಸ್ ಕರ್ನಾಟಕಪ್ರತಿಭಾ ಪ್ರದರ್ಶನಮಾಧ್ಯಮಸಂಸ್ಥೆಸ್ಪರ್ಧೆ
Advertisement
Next Article