For the best experience, open
https://m.newskannada.com
on your mobile browser.
Advertisement

ಕೋವಿಶೀಲ್ಡ್ ಪಡೆದ ಬಳಿಕ ಭಾರತದ ಇಬ್ಬರು ಹೆಣ್ಮಕ್ಕಳು ಸಾವು !

ಕೊರೊನಾ ಸಮಯದಲ್ಲಿ ಭಾರೀ ಸುದ್ದಿಯಲ್ಲಿದ್ದ ಔಷಧಿಗಳ ತಯಾರಿಕಾ ಸಂಸ್ಥೆ Oxford-AstraZeneca, ಆಘಾತಕಾರಿ ಮಾಹಿತಿ ಒಂದನ್ನು ಕೊನೆಗೂ ಕೋರ್ಟ್​ ಮುಂದೆ ಒಪ್ಪಿಕೊಂಡಿದೆ.
10:34 AM May 03, 2024 IST | Ashitha S
ಕೋವಿಶೀಲ್ಡ್ ಪಡೆದ ಬಳಿಕ ಭಾರತದ ಇಬ್ಬರು ಹೆಣ್ಮಕ್ಕಳು ಸಾವು

ನವದೆಹಲಿ: ಕೊರೊನಾ ಸಮಯದಲ್ಲಿ ಭಾರೀ ಸುದ್ದಿಯಲ್ಲಿದ್ದ ಔಷಧಿಗಳ ತಯಾರಿಕಾ ಸಂಸ್ಥೆ Oxford-AstraZeneca, ಆಘಾತಕಾರಿ ಮಾಹಿತಿ ಒಂದನ್ನು ಕೊನೆಗೂ ಕೋರ್ಟ್​ ಮುಂದೆ ಒಪ್ಪಿಕೊಂಡಿದೆ.

Advertisement

ತಾನು ಅಭವೃದ್ಧಿಪಡಿಸಿ ಕೋಟ್ಯಾಂತರ ಜನರಿಗೆ ನೀಡಿರುವ ಕೊರೊನಾ ಲಸಿಕೆಯು ಗಂಭೀರ ಅಡ್ಡಪರಿಣಾಮ ಉಂಟುಮಾಡಬಹುದು ಎಂದು ಲಂಡನ್ ಕೋರ್ಟ್​ನಲ್ಲಿ ಹೇಳಿದೆ. ಈ ಬೆನ್ನಲ್ಲೇ, ಭಾರತದಲ್ಲಿ ಹೆಣ್ಮಕ್ಕಳನ್ನು ಕಳೆದುಕೊಂಡ ಇಬ್ಬರು ಪೋಷಕರು ಕಾನೂನು ಹೋರಾಟಕ್ಕೆ ಸಜ್ಜಾಗಿದ್ದಾರೆ.

ಕೊರೊನಾ ಅವಧಿಯಲ್ಲಿ ಕೋವಿಶೀಲ್ಡ್​ ಲಸಿಕೆಯನ್ನು ತೆಗೆದುಕೊಂಡ ನಂತರ ಸಾವನ್ನಪ್ಪಿದ ಭಾರತದ ಇಬ್ಬರು ಹೆಣ್ಮಕ್ಕಳ ಪೋಷಕರು ಕಾನೂನು ಹೋರಾಟ ಮಾಡೋದಾಗಿ ಹೇಳಿದ್ದಾರೆ. ಕೋವಿಶೀಲ್ಡ್​ ಲಸಿಕೆಯನ್ನು ಒದಗಿಸಿದ ಸೀರಮ್ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ (SII) ವಿರುದ್ಧ ಕೇಸ್ ದಾಖಲಿಸೋದಾಗಿ ತಿಳಿಸಿದ್ದಾರೆ.

Advertisement

ರಿತಿಕಾ (18), ಕಾರುಣ್ಯ (20) ಕೋವಿಶೀಲ್ಡ್ ವ್ಯಾಕ್ಸಿನ್ ಪಡೆದ ಮೇಲೆ ಸಾವನ್ನಪ್ಪಿದ್ದರು. ಕಾರುಣ್ಯ 2021, ಜುಲೈನಲ್ಲಿ ಸಾವನ್ನಪ್ಪಿದ್ದರು. ಅವರ ತಂದೆ ವೇಣುಗೋಪಾಲನ್ ಗೋವಿಂದನ್, ನನ್ನ ಮಗಳು ಕಾರುಣ್ಯ ಲಸಿಕೆ ಪಡೆದು ಒಂದು ತಿಂಗಳ ನಂತರ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಿದ್ದಾರೆ. ಮಾತ್ರವಲ್ಲ, ಅಸ್ಟ್ರಾಝೆನೆಕಾ (AstraZeneca) ಮತ್ತು ಆಕ್ಸ್​ಪರ್ಢ್ ವಿಶ್ವವಿದ್ಯಾಲಯವು ಕಂಡು ಹಿಡಿದಿದ್ದ ಕೋವಿಶೀಲ್ಡ್​ ವ್ಯಾಕ್ಸಿನ್​​ ಅನ್ನು ಭಾರತದಲ್ಲಿ ಅಭಿವೃದ್ಧಿಪಡಿಸಿ ವಿತರಣೆ ಮಾಡಿದ್ದ ಸೀರಮ್ ವಿರುದ್ಧ ಕೇಸ್ ದಾಖಲಿಸೋದಾಗಿ ಹೇಳಿದ್ದಾರೆ.

ರಿತಿಕಾ ಕೂಡ ಲಸಿಕೆ ಪಡೆದು ಎರಡು ವಾರಗಳ ಅವಧಿಯಲ್ಲೇ ಸಾವನ್ನಪ್ಪಿದ್ದಾಳೆ ಎಂದು ಆಕೆಯ ತಾಯಿ ರಚನಾ ಗಂಗು ಹೇಳಿದ್ದಾರೆ.

Advertisement
Tags :
Advertisement