For the best experience, open
https://m.newskannada.com
on your mobile browser.
Advertisement

ಪರಸ್ಪರ ಕೈ ಹಿಡಿದುಕೊಂಡೆ ಪ್ರಾಣ ಬಿಟ್ಟ ಡಚ್ ಮಾಜಿ ಪ್ರಧಾನಿ ಹಾಗೂ ಪತ್ನಿ !

ಡಚ್‌ ಮಾಜಿ ಪ್ರಧಾನಿ 93 ವರ್ಷದ ಡ್ರೈಸ್ ವ್ಯಾನ್ ಆಗ್ಟ್ ಹಾಗೂ ಅವರ ಪತ್ನಿನಿಜ್ಮೆಗನ್‌ ಪರಸ್ಪರ ಕೈ ಹಿಡಿದುಕೊಂಡೆ ಪ್ರಾಣ ಬಿಟ್ಟಿದ್ದಾರೆ. ಡಚ್‌ ರಾಜಕಾರಣದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದ 93 ವರ್ಷದ ಡ್ರೈಸ್ ವ್ಯಾನ್ ಆಗ್ಟ್ ಹಾಗೂ ಅವರ ಪತ್ನಿ ಯುಜೆನಿ, ಡ್ಯುಯೊ ಅವರಿಗೆ ದಯಾಮರಣಕ್ಕೆ ಅನುಮತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರು ದಯಾಮರಣದ ಮೂಲಕ ಜೊತೆಯಾಗಿಯೇ ಇಹಲೋಕದ ಯಾತ್ರೆ ಮುಗಿಸಿದ್ದಾರೆ. ತಮ್ಮ ಹುಟ್ಟೂರಾದ ನಿಜ್ಮೆಗನ್‌ನಲ್ಲಿ ಈ ಜೋಡಿ ಸಾವನ್ನಪ್ಪಿದ್ದಾರೆ.
03:52 PM Feb 14, 2024 IST | Ashitha S
ಪರಸ್ಪರ ಕೈ ಹಿಡಿದುಕೊಂಡೆ ಪ್ರಾಣ ಬಿಟ್ಟ ಡಚ್ ಮಾಜಿ ಪ್ರಧಾನಿ ಹಾಗೂ ಪತ್ನಿ

ನೆದರ್ಲ್ಯಾಂಡ್: ಡಚ್‌ ಮಾಜಿ ಪ್ರಧಾನಿ 93 ವರ್ಷದ ಡ್ರೈಸ್ ವ್ಯಾನ್ ಆಗ್ಟ್ ಹಾಗೂ ಅವರ ಪತ್ನಿನಿಜ್ಮೆಗನ್‌ ಪರಸ್ಪರ ಕೈ ಹಿಡಿದುಕೊಂಡೆ ಪ್ರಾಣ ಬಿಟ್ಟಿದ್ದಾರೆ. ಡಚ್‌ ರಾಜಕಾರಣದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದ 93 ವರ್ಷದ ಡ್ರೈಸ್ ವ್ಯಾನ್ ಆಗ್ಟ್ ಹಾಗೂ ಅವರ ಪತ್ನಿ ಯುಜೆನಿ, ಡ್ಯುಯೊ ಅವರಿಗೆ ದಯಾಮರಣಕ್ಕೆ ಅನುಮತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರು ದಯಾಮರಣದ ಮೂಲಕ ಜೊತೆಯಾಗಿಯೇ ಇಹಲೋಕದ ಯಾತ್ರೆ ಮುಗಿಸಿದ್ದಾರೆ. ತಮ್ಮ ಹುಟ್ಟೂರಾದ ನಿಜ್ಮೆಗನ್‌ನಲ್ಲಿ ಈ ಜೋಡಿ ಸಾವನ್ನಪ್ಪಿದ್ದಾರೆ.

Advertisement

ಡ್ರೈಸ್ ವ್ಯಾನ್ ಆಗ್ಟ್ ಅವರು 1977ರಿಂದ 1982ರವರೆಗೆ ನೆದರ್ಲ್ಯಾಂಡ್‌ ಪ್ರಧಾನ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಇದೇ ಸಮಯದಲ್ಲಿ ಅವರು ಅಲ್ಲಿನ ಕ್ರಿಶ್ಚಿಯನ್ ಡೆಮಾಕ್ರಟಿಕ್ ಅಪೀಲ್ ಪಕ್ಷದ ಸ್ಥಾಪಕ ನಾಯಕರಾದರು. ತಮ್ಮ ಅಧಿಕಾರದ ನಂತರವೂ ಅವರು ತಮ್ಮ ರಾಜಕೀಯ ನಿಲುವುಗಳಿಗೆ ಬದ್ಧರಾಗಿ ಪ್ರಬುದ್ಧ ನಾಯಕ ಎನಿಸಿಕೊಂಡಿದ್ದರು. 2009ರಲ್ಲಿ ಇವರು ದಿ ರೈಟ್ಸ್ ಫೋರಮ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು, ಇದು ಪ್ಯಾಲೇಸ್ಟಿನಿಯನ್ ಹಕ್ಕುಗಳಿಗಾಗಿ ಹೋರಾಡಲು ಮೀಸಲಾದ ಸಂಸ್ಥೆಯಾಗಿತ್ತು.

ಕುಟುಂಬದೊಂದಿಗೆ ಸಮಾಲೋಚಿಸಿ ನಾವು ನಮ್ಮ ಸಂಸ್ಥೆಯ ಸಂಸ್ಥಾಪಕ ಹಾಗೂ ಗೌರವಾಧ್ಯಕ್ಷ ಡ್ರೈಸ್ ವ್ಯಾನ್ ಆಗ್ಟ್ ಅವರು ಫೆಬ್ರವರಿ 5 ರಂದು ತಮ್ಮ ಊರು ನಿಜ್ಮೆಗನ್‌ನಲ್ಲಿ ಇಹಲೋಕ ತ್ಯಜಿಸಿದ್ದಾರೆ ಎಂಬುದನನ್ನು ತಿಳಿಸುತ್ತಿದ್ದೇವೆ. ತಮ್ಮ ಪತ್ನಿ ಯುಜೆನಿ ವ್ಯಾನ್ ಜೊತೆಯಾಗಿಯೇ ಇವರು ಸಾವನ್ನಪ್ಪಿದ್ದು, ಇಬ್ಬರು ಪರಸ್ಪರ ಕೈ ಹಿಡಿದುಕೊಂಡೇ ಪ್ರಾಣ ಬಿಟ್ಟಿದ್ದಾರೆ. ಇವರಿಬ್ಬರೂ ಪರಸ್ಪರ ಬೆಂಬಲದೊಂದಿಗೆ ಸುಮಾರು 70 ವರ್ಷಗಳ ಕಾಲ ಜೊತೆಯಾಗಿದ್ದರು. ಸಾಯುವವರೆಗೂ ಪತ್ನಿಯನ್ನು ಸದಾ ನನ್ನ ಹುಡುಗಿ ಎಂದು ಕರೆಯುತ್ತಿದ್ದರು, ಇವರ ಅಂತ್ಯಸಂಸ್ಕಾರ ಕಾರ್ಯವೂ ಖಾಸಗಿಯಾಗಿ ನಡೆದಿದೆ. ವ್ಯಾನ್ ಆಗ್ಟ್ ಮತ್ತು ಅವರ ಪತ್ನಿ ಯುಜೆನಿ ವ್ಯಾನ್ ಇಬ್ಬರಿಗೂ 93 ವರ್ಷ ವಯಸ್ಸಾಗಿತ್ತು ಎಂದು ರೈಟ್ಸ್ ಫಾರಂ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

Advertisement

Advertisement
Tags :
Advertisement