For the best experience, open
https://m.newskannada.com
on your mobile browser.
Advertisement

ಮುಟ್ಟಿನ ರಜೆ ಆದೇಶ ನೀಡೋಲ್ಲ ಎಂದ ಸುಪ್ರೀಂಕೋರ್ಟ್ : ಕಾರಣ ಇಲ್ಲಿದೆ

'ಋತುಚಕ್ರ ರಜೆಯು ನೀತಿಗೆ ಸಂಬಂಧಿಸಿದ ವಿಷಯ. ಅದು ಕೋರ್ಟ್‌ಗಳು ಪರಿಶೀಲಿಸುವ ವಿಷಯವಲ್ಲ' ಎಂದಿರುವ ಸುಪ್ರೀಂಕೋರ್ಟ್, 'ರಾಜ್ಯಗಳು ಮತ್ತು ಇತರ ಮಧ್ಯಸ್ಥಗಾರರೊಂದಿಗೆ ಸಮಾಲೋಚನೆ
07:48 AM Jul 09, 2024 IST | Nisarga K
ಮುಟ್ಟಿನ ರಜೆ ಆದೇಶ ನೀಡೋಲ್ಲ ಎಂದ ಸುಪ್ರೀಂಕೋರ್ಟ್   ಕಾರಣ ಇಲ್ಲಿದೆ
ಮುಟ್ಟಿನ ರಜೆ ಆದೇಶ ನೀಡೋಲ್ಲ ಎಂದ ಸುಪ್ರೀಂಕೋರ್ಟ್ : ಕಾರಣ ಇಲ್ಲಿದೆ

ನವದೆಹಲಿ: 'ಋತುಚಕ್ರ ರಜೆಯು ನೀತಿಗೆ ಸಂಬಂಧಿಸಿದ ವಿಷಯ. ಅದು ಕೋರ್ಟ್‌ಗಳು ಪರಿಶೀಲಿಸುವ ವಿಷಯವಲ್ಲ' ಎಂದಿರುವ ಸುಪ್ರೀಂಕೋರ್ಟ್, 'ರಾಜ್ಯಗಳು ಮತ್ತು ಇತರ ಮಧ್ಯಸ್ಥಗಾರರೊಂದಿಗೆ ಸಮಾಲೋಚನೆ ನಡೆಸುವ ಮೂಲಕ ಈ ಕುರಿತು ಮಾದರಿ ನೀತಿ ರೂಪಿಸಬೇಕು' ಎಂದು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ.

Advertisement

ಋತುಚಕ್ರ ರಜೆಗೆ ನೀತಿ ರೂಪಿಸಲು ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾ| ಡಿ.ವೈ.ಚಂದ್ರಚೂಡ ಅವರ ತ್ರಿಸದಸ್ಯ ಪೀಠ, 'ಒಂದು ವೇಳೆ ನಾವು ಆದೇಶ ನೀಡಿದರೆ ಅದು ಮಹಿಳೆಯರ ಕೆಲಸದ ಮೇಲೆಯೇ ದುಷ್ಪರಿಣಾಮ ಬೀರಬಹುದು. ಉದ್ಯೋಗದಾತರು ಮಹಿಳೆಯರನ್ನು ನೇಮಿಸಲು ಹಿಂಜರಿಯಬಹುದು. ಹೀಗಾಗಿ ಇದು ಸರ್ಕಾರದ ನೀತಿಗೆ ಸಂಬಂಧಿಸಿದ ವಿಷಯ. ಸಂಬಂಧಿಸಿದ ಎಲ್ಲರ ಜತೆ ಸೇರಿ ಸರ್ಕಾರವೇ ನೀತಿ ರೂಪಿಸ ಬೇಕು' ಎಂದು ಸೂಚಿಸಿತು.

Advertisement
Advertisement
Tags :
Advertisement