For the best experience, open
https://m.newskannada.com
on your mobile browser.
Advertisement

ಹಿಂದೂ ಕಾರ್ಯಕ‌ರ್ತರಿಂದ ಗೋವುಗಳ ರಕ್ಷಣೆ : ಚಾಲಕ ಪೊಲೀಸ್‌ ವಶಕ್ಕೆ

ಕ್ಯಾಂಟರ್‌ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಗೋವುಗಳನ್ನು ಹಿಂದೂ ಕಾರ್ಯಕರ್ತರು ರಕ್ಷಣೆ ಮಾಡಿದ್ದಾರೆ. ರಾಷ್ಟ ರಕ್ಷಣಾ ಪಡೆಯ ಪುನೀತ್ ಕೆರೆಹಳ್ಳಿ ನೇತೃತ್ವದಲ್ಲಿ ಚೇಸಿಂಗ್‌ ಮಾಡಿ ರಕ್ಷಿಸಲಾಗಿದೆ.
06:35 PM Mar 17, 2024 IST | Nisarga K
ಹಿಂದೂ ಕಾರ್ಯಕ‌ರ್ತರಿಂದ ಗೋವುಗಳ ರಕ್ಷಣೆ   ಚಾಲಕ ಪೊಲೀಸ್‌ ವಶಕ್ಕೆ
ಹಿಂದೂ ಕಾರ್ಯಕ‌ರ್ತರಿಂದ ಗೋವುಗಳ ರಕ್ಷಣೆ : ಚಾಲಕ ಪೊಲೀಸ್‌ ವಶಕ್ಕೆ

ಬೆಂಗಳೂರು: ಕ್ಯಾಂಟರ್‌ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಗೋವುಗಳನ್ನು ಹಿಂದೂ ಕಾರ್ಯಕರ್ತರು ರಕ್ಷಣೆ ಮಾಡಿದ್ದಾರೆ. ರಾಷ್ಟ ರಕ್ಷಣಾ ಪಡೆಯ ಪುನೀತ್ ಕೆರೆಹಳ್ಳಿ ನೇತೃತ್ವದಲ್ಲಿ ಚೇಸಿಂಗ್‌ ಮಾಡಿ ರಕ್ಷಿಸಲಾಗಿದೆ.

Advertisement

ಅಮೃತಮಹಲ್ ಜಾತಿಯ ಗೋವುಗಳನ್ನು ಹುಬ್ಬಳ್ಳಿಯಿಂದ ಕೇರಳ ಕಡೆಗೆ ಕ್ಯಾಂಟರ್ ವಾಹನದ ಮೂಲಕ ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಪುನೀತ್‌ ಕೆರೆಹಳ್ಳಿ ತಂಡ ಹಿಂಬಾಲಿಸಿದೆ. ಆನೇಕಲ್‌ನ ಹೆಬ್ಬಗೋಡಿ ಬಳಿ ಕ್ಯಾಂಟರ್‌ಗೆ ಅಡ್ಡಗಟ್ಟಿ ಪರಿಶೀಲನೆ ನಡೆಸಿದಾಗ ಗೋವುಗಳು ಪತ್ತೆಯಾಗಿವೆ.

ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಬಳಿಕ ಪೊಲೀಸರು ಪರಿಶೀಲಿಸಿದ್ದಾರೆ. ಅಕ್ರಮವಾಗಿ ಕೇರಳಕ್ಕೆ ಸಾಗಿಸುತ್ತಿರುವಿದಾಗಿ ಮಾಹಿತಿ ತಿಳಿದಿದೆ.ನಂತರ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Advertisement

ಸದ್ಯ 20 ಗೋವುಗಳನ್ನು ರಕ್ಷಣೆ ಮಾಡಲಾಗಿದ್ದು ಅವುಗಳನ್ನು ಹೆಬ್ಬಗೋಡಿ ಪೊಲೀಸರು ಗೋ ಶಾಲೆಗೆ ರವಾನಿಸಿದ್ದಾರೆ.ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡು ಚಾಲಕನಲ್ಲಿ ಈ ಕರಿತು ವಿಚಾರಣೆ ನಡೆಸುತ್ತಿದ್ದಾರೆ.

Advertisement
Tags :
Advertisement