For the best experience, open
https://m.newskannada.com
on your mobile browser.
Advertisement

ಹೃದಯಾಘಾತದಿಂದ ಮೈದಾನದಲ್ಲೇ ಮೃತಪಟ್ಟ ಕ್ರಿಕೆಟಿಗ: ವಿಡಿಯೋ‌ ವೈರಲ್

ಕ್ರಿಕೆಟ್ ಪಂದ್ಯಾಟ ನಡುವೆಯೇ 36 ವರ್ಷದ ಯುವಕನೊಬ್ಬ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ. ನೋಯ್ಡಾದ ಥಾನಾ ಎಕ್ಸ್​ಪ್ರೇಸ್​ವೇ ಸೆಕ್ಟರ್-135 ಪ್ರದೇಶದಲ್ಲಿ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಲಾಗಿತ್ತು. ಈ ಟೂರ್ನಿಯಲ್ಲಿ ಉತ್ತರಾಖಂಡ ಮೂಲದ ವಿಕಾಸ್ ನೇಗಿ ಕಣಕ್ಕಿಳಿದಿದ್ದರು.
02:22 PM Jan 10, 2024 IST | Ashitha S
ಹೃದಯಾಘಾತದಿಂದ ಮೈದಾನದಲ್ಲೇ ಮೃತಪಟ್ಟ ಕ್ರಿಕೆಟಿಗ  ವಿಡಿಯೋ‌ ವೈರಲ್

ನೋಯ್ಡಾ: ಕ್ರಿಕೆಟ್ ಪಂದ್ಯಾಟ ನಡುವೆಯೇ 36 ವರ್ಷದ ಯುವಕನೊಬ್ಬ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ. ನೋಯ್ಡಾದ ಥಾನಾ ಎಕ್ಸ್​ಪ್ರೇಸ್​ವೇ ಸೆಕ್ಟರ್-135 ಪ್ರದೇಶದಲ್ಲಿ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಲಾಗಿತ್ತು. ಈ ಟೂರ್ನಿಯಲ್ಲಿ ಉತ್ತರಾಖಂಡ ಮೂಲದ ವಿಕಾಸ್ ನೇಗಿ ಕಣಕ್ಕಿಳಿದಿದ್ದರು.

Advertisement

ಅದರಂತೆ ಬ್ಯಾಟಿಂಗ್ ಮಾಡುತ್ತಿದ್ದಾಗ ವಿಕಾಸ್ ನೇಗಿ ರನ್ ಓಡಿದ್ದರು. ಆದರೆ ಚೆಂಡು ಬೌಂಡರಿ ಲೈನ್ ದಾಟಿತ್ತು. ಹೀಗಾಗಿ ಕ್ರೀಸ್​ನ ಮಧ್ಯ ಭಾಗದಿಂದ ಮತ್ತೆ ನಾನ್ ಸ್ಟ್ರೈಕ್​ನತ್ತ ಮರಳಲು ಮುಂದಾಗಿದ್ದರು. ಆದರೆ ದಿಢೀರ್ ಕುಸಿತಕ್ಕೊಳಗಾದ ವಿಕಾಸ ನೇಗಿ ಪಿಚ್ ಮೇಲೆ ಬಿದ್ದಿದ್ದಾರೆ. ತಕ್ಷಣವೇ ಎದುರಾಳಿ ತಂಡದ ವಿಕೆಟ್ ಕೀಪರ್ ಹಾಗೂ ಸಹ ಆಟಗಾರ ವಿಕಾಸ್ ಬಳಿ ಓಡಿ ಬಂದಿದ್ದಾರೆ. ಆ ಬಳಿಕ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅಷ್ಟರಲ್ಲಾಗಲ್ಲೇ ವಿಕಾಸ್ ನೇಗಿ ಮೃತಪಟ್ಟಿದ್ದಾರೆ ವೈದ್ಯರು ತಿಳಿಸಿದ್ದಾರೆ.

Advertisement

Advertisement
Tags :
Advertisement