For the best experience, open
https://m.newskannada.com
on your mobile browser.
Advertisement

ಬಿಲ್ಕಿಸ್ ಬಾನು ಪ್ರಕರಣ: ಬಿಡುಗಡೆಗೊಂಡಿದ್ದ ಆರೋಪಿಗಳು ಮತ್ತೆ ಸೆರೆಗೆ

೨೦೨೨ರ ಸ್ವಾತಂತ್ರ್ಯ ದಿನದಂದು ಬಿಡುಗಡೆಗೊಂಡಿದ್ದ ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದ ೧೧ ಅಪರಾಧಿಗಳಿಗೆ ಮುಂದಿನ ೨ ವಾರದೊಳಗೆ ಜೈಲಿಗೆ ಮರಳುವಂತೆ ಸರ್ವೋಚ್ಛನ್ಯಾಯಾಲಯ ಆದೇಶಿಸಿದೆ.
06:35 PM Jan 08, 2024 IST | Maithri S
ಬಿಲ್ಕಿಸ್ ಬಾನು ಪ್ರಕರಣ  ಬಿಡುಗಡೆಗೊಂಡಿದ್ದ ಆರೋಪಿಗಳು ಮತ್ತೆ ಸೆರೆಗೆ

ನವದೆಹಲಿ: ೨೦೨೨ರ ಸ್ವಾತಂತ್ರ್ಯ ದಿನದಂದು ಬಿಡುಗಡೆಗೊಂಡಿದ್ದ ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದ ೧೧ ಅಪರಾಧಿಗಳಿಗೆ ಮುಂದಿನ ೨ ವಾರದೊಳಗೆ ಜೈಲಿಗೆ ಮರಳುವಂತೆ ಸರ್ವೋಚ್ಛನ್ಯಾಯಾಲಯ ಆದೇಶಿಸಿದೆ.

Advertisement

ಗೋಧ್ರಾ ಪ್ರಕರಣದ ಬೆನ್ನಿಗೇ ೨೦೦೨ರಲ್ಲಿ ನಡೆದ ಗುಜರಾತ್ ಗಲಭೆಯ ಸಂದರ್ಭದಲ್ಲಿ ಐದು ತಿಂಗಳ ಗರ್ಭಿಣಿಯಾಗಿದ್ದ ಬಿಲ್ಕಿಸ್ ಬಾನೋರ ಮೇಲೆ ಅತ್ಯಾಚಾರ ನಡೆಸಿ ಆಕೆಯ ಕುಟುಂಬದವರನ್ನು ಕೊಂದಿದ್ದ ೧೧ ಅಪರಾಧಿಗಳನ್ನು ಸನ್ನಡತೆಯ ಆಧಾರದಲ್ಲಿ ಅವಧಿಗೂ ಮುನ್ನ ಬಿಡುಗಡೆಗೊಳಿಸುವಂತೆ ಗುಜರಾತ್ ಸರ್ಕಾರ ಆದೇಶ ಹೊರಡಿಸಿತ್ತು.

ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಆರೋಪಿಗಳನ್ನು ಬಂಧನಮುಕ್ತಗೊಳಿಸಿದ ಕುರಿತು ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಉಜ್ವಲ್ ಭುಯಾನ್ ಪೀಠ ನಡೆಸಿತು. ಈ ವೇಳೆ ಸರ್ಕಾರದ ನಿರ್ಧಾರ ಸರಿಯಾದುದಲ್ಲ ಎಂದ ನ್ಯಾಯಪೀಠ, ʼಈ ಪ್ರಕರಣದಲ್ಲಿ ನಾವು ಭಾವನೆಗಳ ಆಧಾರದಲ್ಲಿ ಯಾವುದೇ ನಿರ್ಣಯ ಕೈಗೊಳ್ಳುವುದಿಲ್ಲ. ಎಲ್ಲವನ್ನೂ ಕಾನೂನಿನ ಅಡಿಯಲ್ಲೇ ತೀರ್ಮಾನಿಸಿದ್ದೇವೆʼ ಎಂದು ಹೇಳಿದೆ.

Advertisement

ಬಿಡುಗಡೆಗೊಂಗಿದ್ದ ೧೧ ಆರೋಪಿಗಳು ಜೈಲಿಗೆ ಮರಳಲು ಎರಡು ವಾರಗಳ ಗಡುವು ನೀಡಲಾಗಿದೆ.

Advertisement
Tags :
Advertisement