ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಸೋಮಣ್ಣ ಅಸಮಾಧಾನ ವಿಚಾರ ಸಿಟಿ ರವಿ ಪ್ರತಿಕ್ರಿಯೆ

ಸಿದ್ಧಾಂಗಂಗಾ ಮಠದಲ್ಲಿ ಗುರುಭವನದ ಉದ್ಘಾಟನೆಗೆ ಬಿಜೆಪಿಯವರನ್ನು ಕರೆದಿದ್ದಾರೆ.
01:43 PM Dec 06, 2023 IST | Ramya Bolantoor

ಮಂಗಳೂರು:  ಸಿದ್ಧಾಂಗಂಗಾ ಮಠದಲ್ಲಿ ಗುರುಭವನದ ಉದ್ಘಾಟನೆಗೆ ಬಿಜೆಪಿಯವರನ್ನು ಕರೆದಿದ್ದಾರೆ. ಹಾಗೆಯೇ ಅ ಜಿಲ್ಲೆಯ ಕಾಂಗ್ರೆಸ್ ನಾಯಕರನ್ನೂ ಕರೆದಿದ್ದಾರೆ. ಕೇವಲ ಕಾಂಗ್ರೆಸ್ ನವರನ್ನೇ ಕರೆದಿದ್ದಾರೆ ಅನೋದು ತಪ್ಪು ಮಾಹಿತಿ ಎಂದು ಸಿಟಿ ರವಿ ಹೇಳಿದ್ದಾರೆ.

Advertisement

ಸೋಮಣ್ಣ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನನಗು ಕಾರ್ಯಕ್ರಮದ ಆಮಂತ್ರಣ ಸಿಕ್ಕಿದೆ. ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ್, ರಾಜಣ್ಣ ಅದೇ ಜಿಲ್ಲೆಯವರು ಎಂದು ಕರೆದಿದ್ದಾರೆ.

ಸೋಮಣ್ಣ ಬಿಜೆಪಿ ಬಿಡ್ತಾರೆ ಅನ್ನೋದು ಸುಳ್ಳು. ಪಾರ್ಟಿ ಹೇಳಿದ್ದಕ್ಕೆ ಅವರೂ ಎರಡು ಕಡೆ ಸ್ಪರ್ಧೆ ಮಾಡಿದ್ದಾರೆ.ಅವರು ಬಿಜೆಪಿ ಬಿಡ್ತಾರೆ ಅನ್ನೋದು ಉಹಾಪೋಹ.

Advertisement

ಅವರು ದೆಹಲಿಗೆ ಯಾವಾಗ ಹೋಗ್ತಾರೆ ಅನ್ನೋ ಬಗ್ಗೆ ನನಗೆ ಮಾಹಿತಿ ಇಲ್ಲ ಬಿಜೆಪಿಗೆ ಬರುವವರು ಕೇವಲ ರಾಜಕೀಯ ಕಾರಣಕ್ಕೆ ಬರಲ್ಲ.ಬಿಜೆಪಿಯ ವಿಚಾರ ಧಾರೆ ಒಪ್ಪಿಕೊಂಡು ಬರುತ್ತಾರೆ ಎಂದರು.

ಪಂಚರಾಜ್ಯ ಚುನಾವಣೆಯಲ್ಲಿ ಪಕ್ಷ ಅಭೂತಪೂರ್ವ ಗೆಲುವು ಸಾದಿಸಿದೆ.ಮುಂದಿನ ಲೋಕ ಸಭಾ ಚುನಾವಣೆಯಲ್ಲಿ ನಾವು 28 ಕ್ಷೇತ್ರವನ್ನು ಗೆಲ್ಲುತ್ತೇವೆ. ಲೋಕ ಸಭಾ ಚುನಾವಣೆ ನಂತರ ಕಾಂಗ್ರೆಸ್ ಸರಕಾರ ಇರುತ್ತೆ ಅನ್ನೋ ವಿಶ್ವಾಸ ಕಾಂಗ್ರೆಸ್ ನವರಿಗೆ ಇಲ್ಲ.ಹಲವು ನಾಯಕರು ಬಂಡಾಯ ಎದ್ದಿದ್ದಾರೆ. ಬಸವರಾಯರೆಡ್ಡಿ ಬಿ ಆರ್ ಪಾಟೀಲ್ ಬಂಡಾಯ ಎದ್ದಿದ್ದಾರೆ.

ಪತ್ರ ಚಳುವಳಿ ಮಾಡ್ತಾಯಿದ್ದಾರೆ.ಅದನ್ನ ನಾವು ಹೇಳಿಕೊಟ್ಟಿದ್ದು ಅಲ್ಲ.ಕಾಂಗ್ರೆಸ್ ನವರೇ ಹೇಳ್ತಾರೆ ಈ ಹಾಳಾದ ಸರಕಾರ ಯಾಕ್ ಬಂತೋ ಹೇಳುತ್ತಿದ್ದಾರೆ.ಒಂದು ರೂಪಾಯಿ ಕೆಲಸ ಆಗ್ತಾಯಿಲ್ಲ ಕಾಂಗ್ರೆಸ್ ನವರೇ ಬೈತಾಯಿದ್ದಾರೆ. ಇದು ನನ್ನ ಮಾತಲ್ಲ ಕಾಂಗ್ರೆಸ್ಸಿಗರ ಮಾತು ಎಂದು ಸಿಟಿ ರವಿ ಹೇಳಿದ್ದಾರೆ.

Advertisement
Tags :
BJPCongressLatestNewsNewsKannadaಮಂಗಳೂರುಸಿಟಿ ರವಿಸೋಮಣ್ಣ
Advertisement
Next Article