ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಸೈಬರ್ ಕ್ರೈಂ: ಡಿಜಿಟಲ್ ಅರೆಸ್ಟ್ ​ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ  ವಂಚನೆ

ರಾಜ್ಯದಲ್ಲಿ ಸೈಬರ್ ಕ್ರೈಂಗಳು ಹೆಚ್ಚಾಗುತ್ತಿದ್ದರು ಜನರು ಇನ್ನು ಎಚ್ಚೆತ್ತುಕೊಂಡಿಲ್ಲ, ಪ್ರತಿದಿನವೂ ಒಂದಲ್ಲ ಒಂದು ಘಟನೆಗಳು ಇದಕ್ಕೆ ಸಂಬಂಧಿಸಿದಂತೆ ನಡೆಯುತ್ತಿದೆ.  ಈ ನಡುವೆ, ಡಿಜಿಟಲ್ ಅರೆಸ್ಟ್ ​ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ  ವಂಚನೆ ಎಸಗಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.
10:37 AM Dec 15, 2023 IST | Ashika S

ಬೆಂಗಳೂರು: ರಾಜ್ಯದಲ್ಲಿ ಸೈಬರ್ ಕ್ರೈಂಗಳು ಹೆಚ್ಚಾಗುತ್ತಿದ್ದರು ಜನರು ಇನ್ನು ಎಚ್ಚೆತ್ತುಕೊಂಡಿಲ್ಲ, ಪ್ರತಿದಿನವೂ ಒಂದಲ್ಲ ಒಂದು ಘಟನೆಗಳು ಇದಕ್ಕೆ ಸಂಬಂಧಿಸಿದಂತೆ ನಡೆಯುತ್ತಿದೆ.  ಈ ನಡುವೆ, ಡಿಜಿಟಲ್ ಅರೆಸ್ಟ್ ​ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ  ವಂಚನೆ ಎಸಗಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.

Advertisement

15 ದಿನಗಳ ಅಂತರದಲ್ಲಿ 7 ಜನರಿಗೆ 3 ಕೋಟಿ ವಂಚಿಸಲಾಗಿದೆ. ಈ ಬಗ್ಗೆ ಆಗ್ನೇಯ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.

ಸೈಬರ್ ಅಪರಾಧಿಗಳು ಪೊಲೀಸರು ಅಥವಾ ತನಿಖಾಸಂಸ್ಥೆ ಹೆಸರು ಹೇಳಿಕೊಂಡು ಜನರಿಗೆ ಕರೆ ಮಾಡಿ ನಿಮ್ಮ ಮನೆಗೆ ಪಾರ್ಸಲ್​ ಬಂದಿದೆ.  ನಿಮ್ಮ ದಾಖಲಾತಿಗಳು ಡ್ರಗ್ಸ್ ವ್ಯವಹಾರದಲ್ಲಿ ತೊಡಗಿದೆ ಎಂದು ಹೇಳಿ ಭಯ ಹುಟ್ಟಿಸುತ್ತಾರೆ.

Advertisement

ಬಳಿಕ ಸ್ಕೈಪ್ ಲಿಂಕ್ ನೀಡಿ ಲಾಗ್​ಇನ್​ ಆಗುವಂತೆ ತಿಳಿಸುವ ವಂಚಕರು, ಬಳಿಕ ಪೊಲೀಸ್ ಸಮವಸ್ತ್ರದಲ್ಲೇ ಸಂಭಾಷಣೆ ನಡೆಸುತ್ತಾರೆ. ನೀವು ವಿಚಾರಣೆಗೆ ಹಾಜರಾಗಬೇಕೆಂದು ಬೆದರಿಕೆ ಹಾಕುತ್ತಾರೆ. ವಿಚಾರಣೆಗೆ ವಿನಾಯಿತಿ ಬೇಕಾದರೆ ಹಣ ಹಾಕಿ, ಇಲ್ಲದಿದ್ದರೆ ಬಂಧಿಸುತ್ತೇವೆ ಎಂದು ಬೇಡಿಕೆ ಇಡುತ್ತಾರೆ.

ಬಳಿಕ ಗಂಟೆಗಳ ಕಾಲ ಸ್ಕೈಪ್ ಬಿಟ್ಟು ಬೇರೆ ಕಡೆ ಹೋಗಲು ಬಿಡುವುದಿಲ್ಲ. ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡಲಾಗಿದೆ ಇಲ್ಲೇ ಇರಬೇಕೆಂದು ಬೆದರಿಕೆ ಹಾಕಲಾಗುತ್ತದೆ.

ಇದೇ ರೀತಿ ಹೆಚ್​ಎಸ್​ಆರ್ ಲೇಔಟ್ ಮೂಲದ ವೃದ್ಧ ದಂಪತಿಗೆ 1 ಕೋಟಿ 97 ಲಕ್ಷ ರೂಪಾಯಿ ವಂಚನೆ ಎಸಗಿದ್ದಾರೆ. ಇದೇ ರೀತಿ 15 ದಿನಗಳ ಅಂತರದಲ್ಲಿ ಏಳು ಮಂದಿಗೆ 3 ಕೋಟಿ ವಂಚಿಸಲಾಗಿದೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Advertisement
Tags :
crimeLatetsNewsNewsKannadaಡಿಜಿಟಲ್ ಅರೆಸ್ಟ್ವಂಚನೆಸೈಬರ್‌ ಕ್ರೈಂ
Advertisement
Next Article