ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಭಾರತೀಯ ಸಿಮ್ ಬಳಸಿ ವಿದೇಶದಲ್ಲಿ ಸೈಬರ್ ವಂಚನೆ: ಓರ್ವ ವಶಕ್ಕೆ

ಭಾರತೀಯ ಸಿಮ್ ಬಳಸಿ ವಿದೇಶದಲ್ಲಿ ಕೂತು ಸೈಬರ್ ವಂಚನೆ ಮಾಡುತ್ತಿದ್ದ ಜಾಲವನ್ನು ಬೆಂಗಳೂರು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ ಪತ್ತೆ ಹಚ್ಚಿದೆ.
09:16 AM May 19, 2024 IST | Chaitra Kulal

ಬೆಂಗಳೂರು: ಭಾರತೀಯ ಸಿಮ್ ಬಳಸಿ ವಿದೇಶದಲ್ಲಿ ಕೂತು ಸೈಬರ್ ವಂಚನೆ ಮಾಡುತ್ತಿದ್ದ ಜಾಲವನ್ನು ಬೆಂಗಳೂರು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ ಪತ್ತೆ ಹಚ್ಚಿದೆ.

Advertisement

ವಂಚಕ ಜಾಲಕ್ಕೆ ಸಿಮ್ ಕಾರ್ಡ್ ಪೂರೈಸುತ್ತಿದ್ದ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ. ವಿಶಾಖಪಟ್ಟಣಂ ಮೂಲದ ಈತನನ್ನು ಬೆಂಗಳೂರಿನಲ್ಲಿ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಈ ವಂಚಕರ ಜಾಲ ನಕಲಿ ದಾಖಲೆ ನೀಡಿ ಏಜೆಂಟ್‌ಗಳ ಮೂಲಕ ವಿವಿಧ ಕಂಪನಿಗಳ ಸಿಮ್ ಖರೀದಿ ಮಾಡುತ್ತಿತ್ತು. ಬೆಂಗಳೂರು, ಚೆನ್ನೈ, ವಿಶಾಖಪಟ್ಟಣ ಸೇರಿ ದೇಶದ ಬೇರೆ ಬೇರೆ ಮಹಾನಗರಗಳಿಂದ ಸಿಮ್ ಖರೀದಿಸಿ ನಂತರ ಆಕ್ಟೀವ್ ಮಾಡಿ ವಿಯೆಟ್ನಾಂ ಹಾಗೂ ಕಾಂಬೋಡಿಯಾಕ್ಕೆ ಕೊರಿಯರ್ ಮೂಲಕ ಕಳುಹಿಸಲಾಗುತ್ತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Advertisement

ಚೆನ್ನೈನಿಂದ ಬೆಂಗಳೂರಿಗೆ ಬಳಿಕ ಬೆಂಗಳೂರಿಂದ ವಿಯೆಟ್ನಾಂಗೆ ಸಿಮ್ ರವಾನಿಯಾಗುತ್ತಿತ್ತು. ಜತೆಗೆ ವಿಶಾಖಪಟ್ಟಣದಿಂದ ಬೆಂಗಳೂರಿಗೆ ಬಂದು ಇಲ್ಲಿಂದ ಕಾಂಬೋಡಿಯಾಗೆ ಸಿಮ್ ಕಳುಹಿಸಲಾಗುತ್ತಿತ್ತು.

ಭಾರತದಿಂದ ಕೊರಿಯರ್ ಮೂಲಕ ವಿದೇಶಕ್ಕೆ ಹೋದ ಸಿಮ್‌ಗಳಿಂದ ವಾಟ್ಸಾಪ್‌ ಓಪನ್‌ ಮಾಡಿಕೊಳ್ಳುತ್ತಿದ್ದ ವಂಚಕರು ಬಳಿಕ ಬಲೆ ಬೀಸುತ್ತಿದ್ದರು. ಭಾರತೀಯ ನಂಬರ್‌ಗಳೇ ಇವರ ಟಾರ್ಗೆಟ್‌ ಆಗಿತ್ತು.  ದೇಶದ ಬೇರೆ ಬೇರೆ ಭಾಗದ ಜನರನ್ನು ಸೋಷಿಯಲ್ ಮೀಡಿಯಾ ಮೂಲಕ ಸಂಪರ್ಕಿಸಿ ವಂಚನೆ ನಡೆಸುತ್ತಿದ್ದರು.

ವಾಟ್ಸಾಪ್‌ನಲ್ಲಿ ಷೇರು ಮಾರ್ಕೆಟ್ ಹೂಡಿಕೆ, ಮನೆಯಲ್ಲಿ ಕೂತು ಮಾಡಬಹುದುದಾದ ಪಾರ್ಟ್ ಟೈಂ ಜಾಬ್ ಆಫರ್ ನೀಡುವ ಮೂಲಕ ವಂಚಕರು ಗ್ರಾಹಕರನ್ನು ನಂಬಿಸುತ್ತಿದ್ದರು. ಆರೋಪಿಗಳು ಕಳುಹಿಸುವ ಜಾಹೀರಾತು ನಂಬಿ ಲಿಂಕ್ ಒಪನ್ ಮಾಡಿದರೆ, ಓಟಿಪಿ ಶೇರ್ ಮಾಡಿದರೆ ಸಾಕು ವಂಚಕರು ಹಣ ಎಗರಿಸುತ್ತಿದ್ದರು. ಸದ್ಯ ವಂಚಕ ಜಾಲಕ್ಕೆ ಸಿಮ್ ಕಾರ್ಡ್ ಪೂರೈಸುತ್ತಿದ್ದ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದಿರುವ ಈಶಾನ್ಯ ಸೈಬರ್ ಕ್ರೈಂ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

Advertisement
Tags :
BANGALORECYBER FRAUDLatestNewsNewsKarnatakaPOLICESIMSURRENDER
Advertisement
Next Article