For the best experience, open
https://m.newskannada.com
on your mobile browser.
Advertisement

ಪುತ್ತೂರು: ಹೋರಿಗಾಗಿ ದೈವದ ಮೊರೆ ಹೋದ ಬಜರಂಗದಳ

ಇಲ್ಲಿನ ಮಹಾಲಿಂಗೇಶ್ವರ ದೇವರ ಗದ್ದೆಯಲ್ಲಿ ತಿರುಗಾಡುತ್ತಿದ್ದ ಹೋರಿಗಳು ಮೇ.1 ರಿಂದ ನಾಪತ್ತೆಯಾಗಿರುವ ಘಟನೆಯೊಂದು ವರದಿಯಾಗಿದೆ. ಇದರ ಪತ್ತೆಗಾಗಿ ಬಜರಂಗದಳ ಇದೀಗ ದೈವದ ಮೊರೆ ಹೋಗಿದ್ದಾರೆ.
03:04 PM May 17, 2024 IST | Ashitha S
ಪುತ್ತೂರು  ಹೋರಿಗಾಗಿ ದೈವದ ಮೊರೆ ಹೋದ ಬಜರಂಗದಳ

ಪುತ್ತೂರು: ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲೇ ಸುತ್ತುತ್ತಿದ್ದ ಎರಡು ಹೋರಿಗಳು ಕಳ್ಳತನವಾಗಿರುವ ಶಂಕೆಯನ್ನು ಬಜರಂಗದಳ ಪುತ್ತೂರು ಘಟಕ ವ್ಯಕ್ತಪಡಿಸಿ ಪ್ರಶ್ನಾಚಿಂತನೆಯನ್ನು ಸಹ ನಡೆಸಿವೆ. ಪ್ರಶ್ನಾಚಿಂತನೆಯಲ್ಲಿ ಹೋರಿ ಬದುಕಿರುವ ಬಗ್ಗೆ ಮಾಹಿತಿ ತಿಳಿದುಬಂದಿದ್ದು, ಅಡ್ಯನಡ್ಕ ಸಮೀಪವಿರುವ ಸಾಧ್ಯತೆ ಕಂಡುಬಂದಿದೆ.

Advertisement

ದೇವಸ್ಥಾನದ ವಠಾರದಲ್ಲೇ ಎರಡು ಹೋರಿಗಳು ಸುತ್ತುತ್ತಿದ್ದವು. ಆದರೀಗ ಇದ್ದಕ್ಕಿದ್ದಂತೆ ನಾಪತ್ತೆಯಾಗಿವೆ.ಹಾಗಾಗಿ ಹೋರಿ ಕಳ್ಳತನವಾಗಿರುವ ಬಗ್ಗೆ ಬಜರಂಗದಳ ಪುತ್ತೂರು ಘಟಕ ಕಾರಣಿಕ ಕ್ಷೇತ್ರ ಬಲ್ನಾಡು ಉಳ್ಳಾಲ್ತಿ ಅಮ್ಮನ ಮೊರೆ ಹೋಗಿದ್ದಾರೆ.

ಪ್ರಶ್ನಾಚಿಂತನೆಯಲ್ಲಿ ಕಂಡುಬಂದಂತೆ ಹೋರಿ ಅಡ್ಯನಡ್ಕ ಸಮೀಪವಿರುವ ಸಾಧ್ಯತೆ ಕಂಡು ಬಂದಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಹೋರಿ ಬದುಕಿರುವ ಬಗ್ಗೆ ಮಾಹಿತಿ ಸಿಕ್ಕಿದೆ.

Advertisement

ಹೋರಿಯನ್ನ ಮಾಂಸಕ್ಕಾಗಿ ಕೊಂಡುಹೋಗಿರುವ ಸಾಧ್ಯತೆ ಎಂದು ಪ್ರಶ್ನಾಚಿಂತನೆಯಲ್ಲಿ ತಿಳಿಸಿದ್ದಾರೆ. ಇನ್ನು ಹೋರಿಗಳು ಹಿಂದುರುಗಿ ಬರಲು ಬಜರಂಗದಳ ಕಾರ್ಯಕರ್ತರು ಪ್ರಾರ್ಥನೆ ಮಾಡಿದ್ದಾರೆ. ಅಲ್ಲದೆ ಹೋರಿ ಕಳ್ಳತನಗೈದವರಿಗೆ ತಕ್ಕ ಪಾಠ ಆಗುವಂತೆ ಕೇಳಿಕೊಂಡಿದ್ದಾರೆ. ಸದ್ಯ ಹೋರಿ ನಾಪತ್ತೆಯಾದ ಹಿನ್ನಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Advertisement
Tags :
Advertisement