For the best experience, open
https://m.newskannada.com
on your mobile browser.
Advertisement

ತಮ್ಮ ಬಹುಕಾಲದ ಗೆಳತಿ ಜೊತೆ ಹಸೆಮಣೆ ಏರಿದ ಮಹಿಳಾ ರೆಸ್ಲರ್

ಮಹಿಳಾ ರೆಸ್ಲರ್ ಒಬ್ಬರು ತಮ್ಮ ಬಹುಕಾಲದ ಗೆಳತಿ ಜೊತೆ ಹಸೆಮಣೆ ಏರಿದ್ದಾರೆ. WWE ಸ್ಟಾರ್ ಡೇರಿಯಾ ಬೆರೆನಾಟೊ ಅವರು ಫಿಟ್‌ನೆಸ್ ಮಾಡೆಲ್ ಟೋನಿ ಕಸ್ಸನೋ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
04:08 PM Feb 12, 2024 IST | Ashitha S
ತಮ್ಮ ಬಹುಕಾಲದ ಗೆಳತಿ ಜೊತೆ ಹಸೆಮಣೆ ಏರಿದ ಮಹಿಳಾ ರೆಸ್ಲರ್

ಅಮೇರಿಕಾ: ಮಹಿಳಾ ರೆಸ್ಲರ್ ಒಬ್ಬರು ತಮ್ಮ ಬಹುಕಾಲದ ಗೆಳತಿ ಜೊತೆ ಹಸೆಮಣೆ ಏರಿದ್ದಾರೆ. WWE ಸ್ಟಾರ್ ಡೇರಿಯಾ ಬೆರೆನಾಟೊ ಅವರು ಫಿಟ್‌ನೆಸ್ ಮಾಡೆಲ್ ಟೋನಿ ಕಸ್ಸನೋ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Advertisement

ಭಾರತದಲ್ಲಿ ಸಲಿಂಗಿ ವಿವಾಹಕ್ಕೆ ಮಾನ್ಯತೆ ಇಲ್ಲ, ಮಾನ್ಯತೆ ಇಲ್ಲದಿದ್ದರೂ ಇತ್ತೀಚೆಗೆ ಕೆಲ ಸಸಲಿಂಗಿ ಜೋಡಿಗಳು ವಿವಾಹವಾಗಿದ್ದಾರೆ. ಇನ್ನು ವಿದೇಶಗಳಲ್ಲಿ ಇದೆಲ್ಲಾ ಮಾಮೂಲಿ ಎನಿಸಿದ್ದು, ಸಲಿಂಗಿ ಜೋಡಿಯೊಂದು ಹಸೆಮಣೆಗೆ ಕಾಲಿರಿಸಿದೆ. ತಮ್ಮ ಜೀವನದ ಈ ವಿಶೇಷ ಕ್ಷಣಗಳ ಫೋಟೋಗಳನ್ನು ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಅಭಿಮಾನಿಗಳು ಈ ನವಜೋಡಿಗೆ ಶುಭ ಹಾರೈಸಿದ್ದಾರೆ.

ಫೆಬ್ರವರಿ 10 ರಂದು ರೆಸ್ಲರ್‌ ಡೇರಿಯಾ ಬೆರೆನಾಟೊ ಹಾಗೂ ಫಿಟ್‌ನೆಸ್ ಮಾಡೆಲ್ ಟೋನಿ ಕಸ್ಸನೋ ಅವರು ಹಸೆಮಣೆ ಏರಿದ್ದಾರೆ ಎಂದು ಪೀಪಲ್ ಮ್ಯಾಗಜೀನ್ ವರದಿ ಮಾಡಿದೆ. ಕೇವಲ 140 ಜನರಷ್ಟೇ ಇದ್ದ ತಮ್ಮ ಕುಟುಂಬ ಹಾಗೂ ಬಂಧುಗಳ ಸಮ್ಮುಖದಲ್ಲಿ ಈ ಸಲಿಂಗಿ ಜೋಡಿ ಡೇರಿಯಾ ಬೆರೆನಾಟೊ ಮಾಡೆಲ್ ಟೋನಿ ಕಸ್ಸನೋ ನವ ಜೀವನಕ್ಕೆ ಕಾಲಿರಿಸಿದ್ದಾರೆ.

Advertisement

Advertisement
Tags :
Advertisement