ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

"ಧ್ವನಿ ಎತ್ತುವ ಸಮಯ ಬಂದಿದೆ"; ಪವಿತ್ರಾ ಗೌಡ ವಿರುದ್ಧ ಗುಡುಗಿದ ದರ್ಶನ್‌ ಪತ್ನಿ

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಅವರು ಪವಿತ್ರಾ ಗೌಡ ವಿರುದ್ಧ ಸೋಷಿಯಲ್‌ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ದರ್ಶನ್‌ ಜತೆಗಿನ ಸಂಬಂಧಕ್ಕೆ 10 ವರ್ಷಗಳಾಗಿವೆ ಎಂದು ಪವಿತ್ರಾ ಗೌಡ ಸೋಷಿಯಲ್‌ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದರು.
11:24 AM Jan 25, 2024 IST | Ashitha S

ಬೆಂಗಳೂರು: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಅವರು ಪವಿತ್ರಾ ಗೌಡ ವಿರುದ್ಧ ಸೋಷಿಯಲ್‌ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ದರ್ಶನ್‌ ಜತೆಗಿನ ಸಂಬಂಧಕ್ಕೆ 10 ವರ್ಷಗಳಾಗಿವೆ ಎಂದು ಪವಿತ್ರಾ ಗೌಡ ಸೋಷಿಯಲ್‌ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದರು.

Advertisement

ಈಗ ಇದಕ್ಕೆ ವಿಜಯಲಕ್ಷ್ಮಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಇದೇ ಸಮಯದಲ್ಲಿ ಪವಿತ್ರಾ ಗೌಡ ಅವರ ಹಲವು ಫೋಟೋಗಳನ್ನು ಹಂಚಿಕೊಂಡು "ಇದು ಇವರ ನೈಜ ಮುಖ" ಎಂದು ಹೇಳಿದ್ದಾರೆ.

https://www.instagram.com/p/C2fjl_hPSTC/?utm_source=ig_embed&utm_campaign=loading&img_index=1

Advertisement

ಇನ್‌ಸ್ಟಾಗ್ರಾಂನಲ್ಲಿ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಅವರು ಸುದೀರ್ಘವಾಗಿ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಬರೆದಿದ್ದಾರೆ. "ಬೇರೊಬ್ಬರ ಗಂಡನ ಚಿತ್ರವನ್ನು ಪೋಸ್ಟ್ ಮಾಡುವ ಮೊದಲು ಈ ಮಹಿಳೆ ಪ್ರಜ್ಞೆ ಹೊಂದಿರಬೇಕು ಎಂದು ನಾನು ಭಾವಿಸುವೆ. ಈ ಚಿತ್ರಗಳು ಅವಳ ಪಾತ್ರ ಮತ್ತು ನೈತಿಕ ನಿಲುವಿನ ಕುರಿತು ಮಾತನಾಡುತ್ತದೆ. ವಿವಾಹಿತ ಪುರುಷನೆಂದು ತಿಳಿದರೂ ಅವಳು ಇನ್ನೂ ತನ್ನ ವೈಯಕ್ತಿಕ ಅಗತ್ಯಗಳಿಗೆ ಮತ್ತು ಕಾರ್ಯಸೂಚಿಗಾಗಿ ಬಂದು ಉಳಿಯಲು ಬಯಸುತ್ತಾಳೆ.

ಈ ಚಿತ್ರಗಳು ಸ್ಪಷ್ಟವಾಗಿದೆ. ಖುಷಿ ಗೌಡ ಅವರು ಪವಿತ್ರಾ ಮತ್ತು ಸಂಜಯ್‌ ಸಿಂಗ್‌ ಅವರ ಮಗಳು. ನಾನು ಸಾಮಾನ್ಯವಾಗಿ ಯಾರ ವೈಯಕ್ತಿಕ ವಿಷಯಗಳ ಕುರಿತು ಮಾತನಾಡಲು ಸೋಷಿಯಲ್‌ ಮೀಡಿಯಾವನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ. ಆದರೆ ಈಗ ನನ್ನ ಕುಟುಂಬದ ಹಿತದೃಷ್ಟಿಯಿಂದ ಧ್ವನಿ ಎತ್ತುವ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ. ಇಡೀ ಸಮಾಜಕ್ಕೆ ವಿಭಿನ್ನ ಚಿತ್ರಣ ನೀಡಲು ಯತ್ನಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದು ವಿಜಯಲಕ್ಷ್ಮಿ ಅವರು ಪೋಸ್ಟ್‌ ಮಾಡಿದ್ದು, ಸಂಜಯ್‌ ಸಿಂಗ್‌ ಮತ್ತು ಖುಷಿ ಗೌಡರಿಗೆ ಟ್ಯಾಗ್‌ ಮಾಡಿದ್ದಾರೆ.

Read More:

ದರ್ಶನ್‌ ಜತೆ 10 ವರ್ಷದ ರಿಲೇಷನ್‌ಶಿಪ್‌: ವಿಡಿಯೋ ರಿಲೀಸ್‌ ಮಾಡಿದ ನಟಿ

 

Advertisement
Tags :
GOVERNMENTindiaLatestNewsNewsKannadaSANDALWOODದರ್ಶನ್‌ ಪತ್ನಿಪವಿತ್ರಾ ಗೌಡವಿಜಯಲಕ್ಷ್ಮಿ
Advertisement
Next Article