ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಸಸ್ಯಕಾಶಿಯಲ್ಲಿ ಗಣರಾಜ್ಯೋತ್ಸವ ಫ್ಲವರ್ ಶೋ: ಮಕ್ಕಳಿಗೆ ಉಚಿತ ಪ್ರವೇಶ

ಸಸ್ಯಕಾಶಿ ಲಾಲ್ ಬಾಗ್ ನಲ್ಲಿ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಜನವರಿ 18 ರಿಂದ ಫ್ಲವರ್ ಶೋ ಆಯೋಜಿಸಲಾಗುತ್ತಿದೆ. ಈ ಬಾರಿ ಬಸವಣ್ಣನವರ ಪರಿಕಲ್ಪನೆಯಲ್ಲಿ ಫ್ಲವರ್ ಶೋ ಮೂಡಿ ಬರಲಿದೆ ಎಂಬುದು ವಿಶೇಷ. 2024ರ ಜನವರಿ 18 ರಿಂದ 28ವರೆಗೆ ಫ್ಲವರ್ ಶೋ ಆಯೋಜಿಸಲು ತೋಟಗಾರಿಕಾ ಇಲಾಖೆ ನಿರ್ಧರಿಸಿದೆ.
10:05 AM Dec 23, 2023 IST | Ashitha S

ಬೆಂಗಳೂರು: ಪ್ರತಿ ವರ್ಷದಂತೆ ಈ ಬಾರಿಯೂ ಗಣರಾಜ್ಯೋತ್ಸವಕ್ಕೆ ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಸಸ್ಯಕಾಶಿ ಲಾಲ್ ಬಾಗ್ ನಲ್ಲಿ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಜನವರಿ 18 ರಿಂದ ಫ್ಲವರ್ ಶೋ ಆಯೋಜಿಸಲಾಗುತ್ತಿದೆ. ಈ ಬಾರಿ ಬಸವಣ್ಣನವರ ಪರಿಕಲ್ಪನೆಯಲ್ಲಿ ಫ್ಲವರ್ ಶೋ ಮೂಡಿ ಬರಲಿದೆ ಎಂಬುದು ವಿಶೇಷ.

Advertisement

2024ರ ಜನವರಿ 18 ರಿಂದ 28ವರೆಗೆ ಫ್ಲವರ್ ಶೋ ಆಯೋಜಿಸಲು ತೋಟಗಾರಿಕಾ ಇಲಾಖೆ ನಿರ್ಧರಿಸಿದೆ. ಬಸವಣ್ಣನವರ ಪರಿಕಲ್ಪನೆ ಹಿನ್ನೆಲೆಯಲ್ಲಿ ಬಸವಣ್ಣನವರು ಹುಟ್ಟಿ, ಬೆಳೆದು ಬಂದ ದಾರಿಯನ್ನು ಹೂವಿನ ಮೂಲಕ ಜನರಿಗೆ ತಿಳಿಸಲು ಇಲಾಖೆ ಮುಂದಾಗಿದೆ.

ಫ್ಲವರ್ ಶೋಗಾಗಿ ಎರಡುವರೆ ಕೋಟಿ ಖರ್ಚು ಮಾಡಲಾಗುತ್ತಿದ್ದು, 10 ಲಕ್ಷಕ್ಕೂ ಹೆಚ್ಚು ಜನರು ಬರುವ ನಿರೀಕ್ಷೆ ಇದೆ. 12-15 ಲಕ್ಷ ಹೂಗಳನ್ನು ಫ್ಲವರ್ ಶೋಗೆ ಬಳಸಿಕೊಳ್ಳಲಾಗುತ್ತಿದ್ದು, 8 ಲಕ್ಷ ಹೂಗಳನ್ನು ಹೊರ ರಾಜ್ಯಗಳಿಂದ ತರಲಾಗುತ್ತಿದೆ. ಒಟ್ಟು 200 ಬಗೆಯ ತಳಿಯ ಹಾಗೂ 25 ಬಗೆಯ ವರ್ಣರಂಜಿತ ಹೂಗಳು ಫ್ಲವರ್ ಶೋನಲ್ಲಿ ಇರಲಿದೆ.

Advertisement

ಫ್ಲವರ್ ಶೋಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಶಾಲಾ ಮಕ್ಕಳಿಗೆ ಉಚಿತ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.

Advertisement
Tags :
flowershowGOVERNMENTindialalbaghLatestNewsNewsKannadaREPUBLIC DAYನವದೆಹಲಿಬೆಂಗಳೂರು
Advertisement
Next Article