ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ದಾವೂದ್‌ ನ ಆಸ್ತಿಯ ಹರಾಜು; ₹15,000 ಲಕ್ಷದ ಭೂಮಿ ₹ 2 ಕೋಟಿಗೆ ಮಾರಾಟ

ಕರಾಚಿಯಲ್ಲಿ ಅಡಗಿರುವನೆಂದು ನಂಬಲಾಗಿರುವ ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಒಡೆತನದ ನಾಲ್ಕು ಆಸ್ತಿಗಳ ಹರಾಜು ಪ್ರಕ್ತಿಯೆ ಶುಕ್ರವಾರ ಪೂರ್ಣಗೊಂಡಿದ್ದು ಕೇವಲ ₹15,000 ಮೀಸಲು ಬೆಲೆ ಹೊಂದಿದ್ದ ಒಂದನ್ನು ₹2 ಕೋಟಿಗೆ ಮಾರಾಟ ಮಾಡಲಾಗಿದೆ. ಎರಡು ಜಮೀನುಗಳಿಗೆ ಯಾವುದೇ ಬಿಡ್‌ ಸಿಗಲಿಲ್ಲ ಎಂದು ತಿಳಿದುಬಂದಿದೆ.
08:12 PM Jan 05, 2024 IST | Maithri S

ಮುಂಬೈ: ಕರಾಚಿಯಲ್ಲಿ ಅಡಗಿರುವನೆಂದು ನಂಬಲಾಗಿರುವ ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಒಡೆತನದ ನಾಲ್ಕು ಆಸ್ತಿಗಳ ಹರಾಜು ಪ್ರಕ್ತಿಯೆ ಶುಕ್ರವಾರ ಪೂರ್ಣಗೊಂಡಿದ್ದು ಕೇವಲ ₹15,000 ಮೀಸಲು ಬೆಲೆ ಹೊಂದಿದ್ದ ಒಂದನ್ನು ₹2 ಕೋಟಿಗೆ ಮಾರಾಟ ಮಾಡಲಾಗಿದೆ. ಎರಡು ಜಮೀನುಗಳಿಗೆ ಯಾವುದೇ ಬಿಡ್‌ ಸಿಗಲಿಲ್ಲ ಎಂದು ತಿಳಿದುಬಂದಿದೆ.

Advertisement

170.98 ಚ.ಮೀ ವಿಸ್ತೀರ್ಣದ ಹಾಗೂ ₹ 15,440 ಮೀಸಲು ಬೆಲೆ ಹೊಂದಿದ್ದ ಅತಿ ಚಿಕ್ಕ ಜಮೀನನ್ನು ವಕೀಲ ಅಜಯ್ ಶ್ರೀವಾಸ್ತವ ₹ 2.01 ಕೋಟಿಗೆ ಖರೀದಿಸಿದ್ದಾರೆ. ಜಮೀನಿನ ಸರ್ವೆ ನಂಬರ್ ಮತ್ತು ಮೊತ್ತವು ಸಂಖ್ಯಾಶಾಸ್ತ್ರದಲ್ಲಿ ಅವರ ಪರವಾಗಿರುವ ಕಾರಣ ಅದಕ್ಕಾಗಿ ಹೆಚ್ಚಿನ ಮೊತ್ತ ಪಾವತಿಸಲು ನಿರ್ಧರಿಸಿದರೆಂದು ಹೇಳಿಕೊಂಡಿದ್ದಾರೆ.

ತಾವು ಕೊಂಡ ಜಾಗದಲ್ಲಿ ಸನಾತನ ಶಾಲೆಯನ್ನು ಪ್ರಾರಂಭಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ ಅಜಯ್‌ ಶ್ರೀವಾಸ್ತವ, ನಾನು 2020 ರಲ್ಲಿ ದಾವೂದ್ ಇಬ್ರಾಹಿಂನ ಬಂಗಲೆಗಾಗಿ ಬಿಡ್ ಮಾಡಿದ್ದೇನೆ. ಸನಾತನ ಧರ್ಮ ಪಾಠಶಾಲಾ ಟ್ರಸ್ಟ್ ಅನ್ನು ಸ್ಥಾಪಿಸಲಾಗಿದೆ ಮತ್ತು ಅದನ್ನು ನೋಂದಾಯಿಸಿದ ನಂತರ ಅಲ್ಲಿಯೂ ಸನಾತನ ಶಾಲೆಯನ್ನು ಪ್ರಾರಂಭಿಸುತ್ತೇನೆ ಎಂದಿದ್ದಾರೆ.

Advertisement

Advertisement
Tags :
AuctionDawood Ibrahim'indiaLatestNewsNewsKannada
Advertisement
Next Article